TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಕಾಲಿಗೆ ದೊಡ್ಡ ಪೆಟ್ಟು ಮಾಡಿಕೊಂಡ ಬಿಗ್ ಬಾಸ್ ರಿಯಾಜ್
'ಬಿಗ್ ಬಾಗ್ ಕನ್ನಡ' ಸೀಸನ್ 5ರ ಸ್ಪರ್ಧಿಯಾಗಿದ್ದ ರಿಯಾಝ್ ಬಾಷಾ ಆ ಕಾರ್ಯಕ್ರಮ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದರು. ಈ ಕಾರ್ಯಕ್ರಮ ಮುಗಿದ ಮೇಲೆ ಮರೆಯಾಗಿದ್ದ ಇವರು ಈಗ ಮತ್ತೆ ಬಂದಿದ್ದಾರೆ.
ಉದಯ ಟಿವಿಯಲ್ಲಿ ಪಕ್ಕಾ ಮನರಂಜನೆಯ ಶೋ 'ಸವಾಲ್ ಗೆ ಸೈ'
ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿರುವ 'ಸವಾಲ್ ಗೆ ಸೈ' ಕಾರ್ಯಕ್ರಮಕ್ಕೆ ಬಿಗ್ ಬಾಸ್ ಸ್ಪರ್ಧಿಗಳು ಆಗಮಿಸಿದ್ದಾರೆ. ದಿವಾಕರ್, ಮೇಘಾ, ರಿಯಾಝ್ ಸೇರಿದಂತೆ ಕೆಲವರು ಕಾರ್ಯಕ್ರಮದ ಅತಿಥಿ ಆಗಿದ್ದಾರೆ.
ಕಾರ್ಯಕ್ರಮದ ಅತಿಥಿಯಾಗಿದ್ದ ರಿಯಾಝ್ ಅವರು ಕೆಲ ಆಟಗಳನ್ನು ಆಡುತ್ತಿದ್ದರು. ಈ ವೇಳೆ ಆಟ ಆಡುತ್ತ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾರೆ. ಜೋರಾಗಿ ಬಿದ್ದ ಕಾರಣ ಅವರ ಕಾಲಿಗೆ ಪೆಟ್ಟಾಗಿದೆ.
ನನ್ನ ಬಿಟ್ಬಿಡಪ್ಪಾ, ನಂಗೆ ಇಂಗ್ಲಿಷ್ ಬರಲ್ಲ! #SavalGeSai ನಾಳೆ ರಾತ್ರಿ 9 ಕ್ಕೆ ನಿಮ್ಮ #UdayaTV ಯಲ್ಲಿ @NithyaRaamOffl @RJniranjan pic.twitter.com/KZ2PrCO9C6
— Udaya TV (@UdayaTV) September 7, 2018
ಕಾರ್ಯಕ್ರಮ ಪ್ರೋಮೋದಲ್ಲಿ ಈ ಭಾಗವನ್ನು ಹೈಲೆಟ್ ಮಾಡಲಾಗಿದ್ದು, ನಿಜವಾದ ಸಂಗತಿ ಏನಾಗಿದೆ ಎಂಬುದು ಕಾರ್ಯಕ್ರಮದ ನೋಡಿದ ಮೇಲೆಯೇ ತಿಳಿಯುತ್ತದೆ. ಅಂದಹಾಗೆ, 'ಸವಾಲ್ ಗೆ ಸೈ' ಶೋ ನಾಳೆ ರಾತ್ರಿ 9 ಗಂಟೆಗೆ ಪ್ರಸಾರ ಆಗಲಿದೆ.