ಅಂದುಕೊಂಡಿದ್ದನ್ನ ಸಾಧಿಸಿದ ರಿಯಾಜ್, ಕಣ್ಣೀರಿಟ್ಟ ನಿವೇದಿತಾ ಗೌಡ

By Bharath Kumar

ಬಿಗ್ ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ಈ ವಾರದ ಲಕ್ಷುರಿ ಬಜೆಟ್ ಟಾಸ್ಕ್ ಯಶಸ್ವಿಯಾಗಿ ಅಂತ್ಯವಾಗಿದೆ. 'ಮೇಲಾ/ಫಿಮೇಲಾ' (Male vs Female) ಸ್ಪರ್ಧೆಯಲ್ಲಿ ಪುರುಷರು ವಿಜಯಶಾಲಿಗಳಾಗಿ ಹೊರಹೊಮ್ಮಿದ್ದಾರೆ. ಇದರಿಂದ ಮನೆಯ ಪುರುಷ ಸದಸ್ಯರಿಗೆ ವಿಶೇಷ ಔತಣಕೂಟ ಏರ್ಪಡಿಸಲಾಗಿತ್ತು.

ಇಷ್ಟೆಲ್ಲಾ ವಿಶೇಷತೆಗಳ ಮಧ್ಯೆ 'ರೂಲ್ಸ್' ಖ್ಯಾತಿಯ ರಿಯಾಜ್ ಭಾಷಾ ತಾವು ಅಂದುಕೊಂಡಿದ್ದನ್ನ 10ನೇ ವಾರ ಸಾಧಿಸಿ ಸಂಭ್ರಮಿಸಿದ್ದಾರೆ. ಮತ್ತೊಂದೆಡೆ ಸದಾ ನಗುನಗುತಾ ರಂಜಿಸುವ ನಿವೇದಿತಾ ಗೌಡ ಕಣ್ಣೀರಿಟ್ಟಿದ್ದಾರೆ.

ಹಾಗಿದ್ರೆ, ರಿಯಾಜ್ ಭಾಷಾ ಅಂದುಕೊಂಡಿದ್ದೇನು? ಈಗ ಸಾಧಿಸಿದ್ದೇನು? ಗೊಂಬೆ ನಿವೇದಿತಾ ಕಣ್ಣೀರಿಗೆ ಕಾರಣವೇನು? ಎಂಬ ಕುತೂಹಲಕ್ಕೆ ಉತ್ತರ ಮುಂದಿದೆ ಓದಿ......

ಬೆಸ್ಟ್ ಪರ್ಫಾಮರ್

ಬೆಸ್ಟ್ ಪರ್ಫಾಮರ್

ಕಳೆದ ಒಂಭತ್ತು ವಾರಗಳಿಂದ ಬೆಸ್ಟ್ ಪರ್ಫಾಮರ್ ಆಪ್ ದಿ ವೀಕ್ ಅವಾರ್ಡ್ ತಗೆದುಕೊಳ್ಳಬೇಕೆಂಬುದು ರಿಯಾಜ್ ಭಾಷಾ ಅವರ ಗುರಿಯಾಗಿತ್ತು. ಆದ್ರೆ, ಕೊನೆ ಘಳಿಗೆಯಲ್ಲಿ ಆ ಅವಕಾಶ ಬೇರೆಯವರ ಪಾಲಾಗುತ್ತಿತ್ತು. ಆದ್ರೆ, 10ನೇ ವಾರ ಈ ಆಸೆಯನ್ನ ಈಡೇರಿಸಿಕೊಂಡಿದ್ದಾರೆ.

ಈ ವಾರದ ಅತ್ಯುತ್ತಮ ಆಟಗಾರ

ಈ ವಾರದ ಅತ್ಯುತ್ತಮ ಆಟಗಾರ

ಪುರುಷರ ಮತ್ತು ಮಹಿಳೆಯರ ಆಟದಲ್ಲಿ ಗೆದ್ದ ತಂಡದಲ್ಲಿ ಬೆಸ್ಟ್ ಪರ್ಫಾಮರ್ ಯಾರು ಎಂದು ಆಯ್ಕೆ ಮಾಡಬೇಕಿತ್ತು. ಪುರುಷ ತಂಡದ ಸದಸ್ಯರು ಒಮ್ಮತದ ನಿರ್ಧಾರದಿಂದ ರಿಯಾಜ್ ಅವರ ಹೆಸರು ಸೂಚಿಸಿದರು.

ಕಳಪೆ ಬೋರ್ಡ್ ಸಿಕ್ಕಿದ್ದು ಅನುಪಮಾಗೆ

ಕಳಪೆ ಬೋರ್ಡ್ ಸಿಕ್ಕಿದ್ದು ಅನುಪಮಾಗೆ

ಇನ್ನು ಸೋತ ಮಹಿಳೆಯರ ತಂಡದಲ್ಲಿ ಅನುಪಮಾ ಗೌಡ ಈ ವಾರದ ಕಳಪೆ ಬೋರ್ಡ್ ಪಡೆದುಕೊಂಡರು. ಇದು ಮನೆಯ ಸದಸ್ಯರಲ್ಲಿ ಸ್ವಲ್ಪ ಗೊಂದಲ ಮೂಡಿಸಿತು.

ಕಣ್ಣೀರಿಟ್ಟ ನಿವೇದಿತಾ ಗೌಡ

ಕಣ್ಣೀರಿಟ್ಟ ನಿವೇದಿತಾ ಗೌಡ

ಆದ್ರೆ, ಬೆಸ್ಟ್ ಪರ್ಫಾಮರ್ ಹಾಗೂ ಕಳಪೆ ಆಟಗಾರರ ನಡುವೆ ನಿವೇದಿತಾ ಗೌಡ ಅವರ ಕಣ್ಣೀರಿಟ್ಟರು. ಎಷ್ಟೇ ಪ್ರಯತ್ನ ಪಟ್ಟರು ನನ್ನಿಂದ ಆಟದಲ್ಲಿ 100 % ಎಫರ್ಟ್ ಕೊಡೋಕೆ ಆಗ್ತಿಲ್ಲ ಎಂದು ನೊಂದುಕೊಂಡರು. ಇತರೆ ಸ್ಪರ್ಧಿಗಳ ಜೊತೆ ಅಳಲು ತೋಡಿಕೊಂಡರು.

ನಾಮಿನೇಷನ್ ಪ್ರಕ್ರಿಯೆ

ನಾಮಿನೇಷನ್ ಪ್ರಕ್ರಿಯೆ

ಸಮೀರಾಚಾರ್ಯ, ನಿವೇದಿತಾ, ದಿವಾಕರ್, ಜಯಶ್ರೀನಿವಾಸನ್, ಅನುಪಮಾ ಮತ್ತು ಲಾಸ್ಯ.... ಈ ವಾರ ಆರು ಮಂದಿ ನಾಮಿನೇಟ್ ಆಗಿದ್ದಾರೆ. ಈ ಪೈಕಿ ನಿಮ್ಮ ಬೆಂಬಲ ಯಾರಿಗೆ.? ನಿಮ್ಮ ಆಯ್ಕೆಯನ್ನ ನಮಗೆ ತಿಳಿಸಿ...ಫಿಲ್ಮಿಬೀಟ್ ಕನ್ನಡ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ...

More from Filmibeat

English summary
Riyaz bhasha becomes best performer of the week and, anupama gowda becomes wrost performer of the week in Bigg boss kannada 5.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X