Just In
Don't Miss!
- News
ಯಲ್ಲಾಪುರ ಭೂಕುಸಿತ: ಯುವತಿಯ ಮದುವೆ ಕನಸು "ಮಣ್ಣು'ಪಾಲು
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Automobiles
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- Sports
ಐಎಸ್ಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Lifestyle
ಮಾ.11ಕ್ಕೆ ಕುಂಭ ರಾಶಿಗೆ ಬುಧನ ಪ್ರವೇಶ: ನಿಮ್ಮ ಬದುಕಿನಲ್ಲಿ ಆಗಲಿದೆ ಈ ಬದಲಾವಣೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಗ್ ಬಾಸ್ ಮನೆಯಲ್ಲಿರುವ ಬುದ್ದಿವಂತ ನರಿ ಈಕೆ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ನಲ್ಲಿ ನಿಮಗಿಷ್ಟವಾಗುವ ಸ್ಪರ್ಧಿ ಯಾರು ಎಂದರೆ ಬಹುತೇಕರು ನಿವೇದಿತಾ ಗೌಡ ಎನ್ನುತ್ತಾರೆ. ಬಿಗ್ ಬಾಸ್ ಆರಂಭದಲ್ಲಿ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದ್ದ ನಿವೇದಿತಾ ಗೌಡ ಬರು ಬರುತ್ತಾ ಎಲ್ಲರಿಗೂ ಫೆವರೆಟ್ ಆಗಿದ್ದಾರೆ.
ವಿಶೇಷ ಅಥಿತಿಗಳಾಗಿ ಬಿಗ್ ಬಾಸ್ ಮನೆಯಲ್ಲಿ ಬರುವ ಗೆಸ್ಟ್ ಗಳು ಕೂಡ ನಿವೇದಿತಾ ಅವರನ್ನ ಹೊಗಳದೆ ಇರಲಾರರು. ಇನ್ನು ಮನೆಯಲ್ಲಿ ಕೆಲ ಸ್ಪರ್ಧಿಗಳನ್ನ ಬಿಟ್ಟರೆ ಸಾಕಷ್ಟು ಜನರಿಗೆ ನಿವೇದಿತಾ ಅಂದರೆ ಅಚ್ಚುಮೆಚ್ಚು.
'ಬಿಗ್ ಬಾಸ್' ಮನೆಯಿಂದ ಹೊರ ಬಂದ ರಿಯಾಝ್ ಬಾಷಾ
ಬರಿ ಬಾಯಿ ಮಾತಲ್ಲಿ ಅಲ್ಲದೆ ಟಾಸ್ಕ್ ವಿಚಾರಕ್ಕೆ ಬಂದಾಗಲೂ ನಿವೇದಿತಾ ಸಾಮರ್ಥ್ಯದ ಬಗ್ಗೆ ಮಾತನಾಡುವಂತಿಲ್ಲ. ತನಗಿಂತ ವಯಸ್ಸಿನಲ್ಲಿ ದೊಡ್ಡವರ ಮುಂದೆಯೂ ನಿವೇದಿತಾ ನಿಂತು ಫೈಟ್ ಮಾಡುತ್ತಿದ್ದಾರೆ. ಇಂತಹ ಸ್ಪರ್ಧಿಯನ್ನ ಈಗ ನರಿ ಎಂದು ಕರೆದಿದ್ದಾರೆ. ಹಾಗಾದ್ರೆ ನಿವೇದಿತಾ ಅವರನ್ನ ಬುದ್ದವಂತ ನರಿ ಎಂದು ಕರೆದಿದ್ದು ಯಾರು? ಮುಂದೆ ಓದಿ

ಬುದ್ದಿವಂತ ನರಿ ನಿವೇದಿತಾ ಗೌಡ
ಬಿಗ್ ಬಾಸ್ ಮನೆಯಿಂದ ರಿಯಾಝ್ ಹೊರ ಬಂದಿದ್ದಾರೆ. ಹೊರ ಬಂದ ನಂತರ ಕಿಚ್ಚ ಸುದೀಪ್ ವೇದಿಕೆ ಮೇಲೆ ಸಹ ಸ್ಪರ್ಧಿಗಳ ಬಗ್ಗೆ ಅಭಿಪ್ರಾಯನ್ನ ಕೇಳಿದರು. ನಿವೇದಿತಾ ಅವರ ಫೋಟೋ ನೋಡಿ ರಿಯಾಝ್ 'ಬುದ್ದಿವಂತ ನರಿ' ಎಂದು ಹೇಳಿದ್ದಾರೆ.

ಮಸಿ ಬಳಿದಿದ್ದೇ ತಪ್ಪಾಯ್ತಾ
ಬಿಗ್ ಬಾಸ್ ಮನೆಯಲ್ಲಿ ಕಳೆದ ವಾರ ಇಷ್ಟವಾದವರಿಗೆ ಹೂವಿನ ಹಾರ ಹಾಕುವುದು ಮತ್ತೊಬ್ಬರಿಗೆ ಮಸಿ ಬಳಿಯುವ ಟಾಸ್ಕ್ ಇಡಲಾಗಿತ್ತು. ಆ ಟಾಸ್ಕ್ ನಲ್ಲಿ ನಿವೇದಿತಾ ಗೌಡ ರಿಯಾಝ್ ಅವರ ಮುಖಕ್ಕೆ ಮಸಿ ಬಳಿದಿದ್ದರು. ಇದೇ ಕಾರಣಕ್ಕೆ ರಿಯಾಝ್ ನಿವೇದಿತಾ ಅವರ ಮೇಲೆ ಕೋಪವನ್ನೂ ಮಾಡಿಕೊಂಡಿದ್ದರು.

ಬುದ್ದಿವಂತೆ ಅನ್ನುವುದು ನಿಜ
ನಿವೇದಿತಾ ಬಿಗ್ ಬಾಸ್ ಮನೆಯಲ್ಲಿ ಬುದ್ದಿವಂತ ಸ್ಪರ್ಧಿ ಅನ್ನೂದು ನಿಜವಾದ ಮಾತು. ಎಲ್ಲರಿಗಿಂತಲೂ ತಾಳ್ಮೆ, ಯಾವುದೇ ಟಾಸ್ಕ್ ಮಾಡುವಾಗ ತೆಗೆದುಕೊಳ್ಳುವ ನಿರ್ಧಾರ ಎಲ್ಲವನ್ನೂ ಗಮನಿಸಿದರೆ ನಿವೇದಿತಾ ಸಹ ಸ್ಪರ್ಧಿಗಳಿಗಿಂತಲೂ ಬ್ರಿಲಿಯೆಂಟ್ ಎನ್ನುವುದರಲ್ಲಿ ಎರಡು ಮಾತಿಲ್ಲ.

ನಿವೇದಿತಾ ಅವರಿಗಿದ್ದಾರೆ ಹೆಚ್ಚು ಅಭಿಮಾನಿಗಳು
ನಿವೇದಿತಾ ಗೌಡ ಅವರನ್ನ ಫೈನಲ್ಸ್ ನಲ್ಲಿ ನೋಡಬೇಕು ಎನ್ನುವುದು ಅಪಾರ ವೀಕ್ಷಕರ ಅಭಿಪ್ರಾಯ. ಮಡಿಕೆ ಕಾಲಿನಲ್ಲಿ ಹಿಡಿದುಕೊಳ್ಳುವ ಟಾಸ್ಕ್ ನಲ್ಲಿ ನಿವೇದಿತಾ ಅವರ ಪರ್ಫಾಮೆನ್ಸ್ ನೋಡಿ ಸಾಕಷ್ಟು ಜನರು ಮೆಚ್ಚುಗೆಯನ್ನ ವ್ಯಕ್ತ ಪಡಿಸಿದ್ದಾರೆ. ಅಷ್ಟೇ ಅಲ್ಲದೆ ನಿವೇದಿತಾ ಫೈನಲ್ಸ್ ನಲ್ಲಿ ಇರಬೇಕು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.