ರೇಡಿಯೋ ಜಾಕಿಯಾಗಿದ್ದವರು ಈಗ ಕನ್ನಡದ ರಿಯಾಲಿಟಿ ಶೋಗಳಲ್ಲಿ ಫುಲ್ ಬ್ಯುಸಿ ; ಯಾರಿವರು?

By ಅನಿತಾ ಬನಾರಿ

ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾ ಕೇಳುಗರ ಮನ ಕದಿಯುತ್ತಿದ್ದ ಈಕೆಯ ಹೆಸರು ಆರ್ ಜೆ ಪುನೀತಾ. ತಮ್ಮ ಮಾತುಗಳ ಮೂಲಕವೇ ಶೋತೃಗಳಿಗೆ ಮನರಂಜನೆಯ ರಸದೌತಣವನ್ನು ಉಣಬಡಿಸುತ್ತಿರುವ ಆರ್ ಜೆ ಪುನೀತಾರನ್ನು ಕಿರುತೆರೆ ವೀಕ್ಷಕರು ಗುರುತಿಸಿದ್ದು ರಿಯಾಲಿಟಿ ಶೋ ಮೂಲಕ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನನ್ನಮ್ಮ ಸೂಪರ್ ಸ್ಟಾರ್' ಸೀಸನ್ 1ರ ಸ್ಪರ್ಧಿಯಾಗಿ ಆರ್ ಜೆ ಪುನೀತಾ ಕಾಣಿಸಿಕೊಂಡಿದ್ದರು.

'ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 1'ರಲ್ಲಿ ಮಗಳು ಆರ್ಯಳೊಂದಿಗೆ ಭಾಗವಹಿಸಿದ್ದ ಆರ್ ಜೆ ಪುನೀತಾ ಪ್ರತಿ ವಾರವೂ ವೀಕ್ಷಕರ ಮನ ಸೆಳೆಯುತ್ತಿದ್ದರು. ಮಾತ್ರವಲ್ಲದೇ ಈ ಶೋವಿನ 'ರನ್ನರ್ ಅಪ್' ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದರು. ತದ ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದಲ್ಲಿ ಪ್ರಸಾರವಾಗುತ್ತಿದ್ದ ಕಪಲ್ ರಿಯಾಲಿಟಿ ಶೋವಿನಲ್ಲೂ ಈಕೆ ಕಾಣಿಸಿಕೊಂಡಿದ್ದರು.

RJ Puneetha who is entertaining in Kannada reality shows Gicchi Gili Gili

'ಇಸ್ಮಾರ್ಟ್ ಜೋಡಿ' ರಿಯಾಲಿಟಿ ಶೋವಿನಲ್ಲಿ ಪತಿ ಶ್ರೀರಾಮ್ ಅವರೊಂದಿಗೆ ಸ್ಪರ್ಧಿಯಾಗಿ ಭಾಗವಹಿಸಿದ್ದ ಆರ್ ಜೆ ಪುನೀತಾ ಆ ಶೋವಿನ ವಿನ್ನರ್ ಕೂಡಾ ಆದರು. ತದ ನಂತರ ಕಿರುತೆರೆಯಿಂದ ದೂರವಿದ್ದ ಪುನೀತಾ ಇದೀಗ ಮತ್ತೆ ಮರಳಿ ಬಂದಿದ್ದಾರೆ. ಹೌದು, ಕಲರ್ಸ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ರಿಯಾಲಿಟಿ ಶೋ 'ಗಿಚ್ಚಿ ಗಿಲಿಗಿಲಿ ಸೀಸನ್ 3'ರ ಸ್ಪರ್ಧಿಯಾಗಿ ಕಿರುತೆರೆಗೆ ಕಂ ಬ್ಯಾಕ್ ಆಗಿರುವ ಪುನೀತ ಹಾಸ್ಯದ ಮೂಲಕ ವೀಕ್ಷಕರನ್ನು ರಂಜಿಸಲಿದ್ದಾರೆ.

ಜರ್ನಲಿಸಂನಲ್ಲಿ ಡಬಲ್ ಡಿಗ್ರಿಯನ್ನು ಪಡೆದಿರುವ ಈಕೆ ಆರ್ ಜೆ ಆಗಿ ವೃತ್ತಿ ಜೀವನ ಶುರು ಮಾಡಿದ ಬೆಡಗಿ. ಬಹಳಷ್ಟು ವರ್ಷಗಳ ಕಾಲ ಬೇರೆ ಬೇರೆ ಕಾರ್ಯಕ್ರಮಗಳನ್ನು ಅದ್ಭುತವಾಗಿ ನಡೆಸಿಕೊಟ್ಟು ಸೈ ಎನಿಸಿಕೊಂಡಿದ್ದಾರೆ. ಇನ್ನು ವೃತ್ತಿಪರ ನೃತ್ಯಗಾರ್ತಿಯಾಗಿರುವ ಇವರು ಭರತನಾಟ್ಯ, ಯಕ್ಷಗಾನ, ಕಥಕ್ ಕುಚುಪುಡಿ ಹಾಗೂ ಕಂಟೆಂಪರರಿ ಡ್ಯಾನ್ಸರ್ ಕೂಡ ಹೌದು.

ರೇಡಿಯೋ ಜಾಕಿ 104 ಎಫ್ ಎಂ ಬೆಂಗಳೂರಿನಲ್ಲಿ ಹಲವಾರು ವರ್ಷಗಳ ಕಾಲ ಕೆಲಸ ಮಾಡಿದ್ದಲ್ಲದೆ ಡಿಡಿ ಚಂದನ ವಾಹಿನಿಯಲ್ಲಿ ನ್ಯೂಸ್ ರಿಪೋರ್ಟರ್ ಆಗಿ ಪುನೀತಾ ಕಾರ್ಯನಿರ್ವಹಿಸಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲೂ ಬಹಳಷ್ಟು ಆ್ಯಕ್ಟಿವ್ ಇರುವ ಪುನೀತಾ ಮಗಳೊಂದಿಗಿನ, ಪತಿಯೊಂದಿಗಿನ ಫನ್ನಿ ವೀಡಿಯೋಗಳನ್ನು ಆಗಾಗ ಶೇರ್ ಮಾಡುತ್ತಿರುತ್ತಾರೆ. ಆ ಮೂಲಕ ನೆಟ್ಟಿಗರ ಮನ ಸೆಳೆಯುತ್ತಿದ್ದಾರೆ.

More from Filmibeat

English summary
Puneetha will entertain in Gicchi Gili Gili reality show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X