ಕುಸ್ತಿಯಲ್ಲಿ ರೋಹಿತ್ ಆಯಕಟ್ಟಿನ ಜಾಗಕ್ಕೆ ಪೆಟ್ಟು
ಆದಿ ಮತ್ತು ರೋಹಿತ್ ನಡುವೆ ನಡೆದ ಆಟದಲ್ಲಿ ರೋಹಿತ್ ಅವರ ಆಯಕಟ್ಟಿನ ಜಾಗಕ್ಕೆ ಪೆಟ್ಟು ಬಿತ್ತು. ಇದರಿಂದ ಎಲ್ಲರೂ ಕಸಿವಿಸಿ ಅನುಭವಿಸುವಂತಾಯಿತು. ಬಳಿಕ ನೀತೂ ಮತ್ತು ದೀಪಿಕಾ ನಡುವೆ ನಡೆದ ಆಟಕ್ಕೆ ಕಾಮೆಂಟರಿ ನೀಡುತ್ತಿದ್ದ ಸೃಜನ್ ಅವರು ಬಿಟಿಎಸ್ ಬಸ್ಸು ಮತ್ತು 800 ನಡುವೆ ಬಿಗ್ ಫೈಟ್ ಎಂದು ಹೇಳಿದರು. ಕಡೆಗೆ ಜಗಜಟ್ಟಿಯಾಗಿ ನೀತೂ ಆಯ್ಕೆಯಾದರು.
ಮಯೂರ್ ಪಟೇಲ್ ಅವರು ಜಗದೇಕ ಮಲ್ಲನಾಗಿ ಆಯ್ಕೆಯಾದರು. ಫೈನಲ್ ನಲ್ಲಿ ಅಕುಲ್ ಮತ್ತು ಮಯೂರ್ ಸೆಣೆಸಬೇಕಾದರೆ ತನ್ನ ಕತ್ತು ಹಿಡಿದುಕೊಂಡ ಎಂದು ಹೇಳಿದರು. ಉಸಿರಾಡಲು ಸಾಧ್ಯವಾಗಲಿಲ್ಲ ಎಂದು ಆರೋಪಿಸಿದರು.

ನಾನು ಮೋಸ ಆಡಿಲ್ಲ, ಒಂದು ವೇಳೆ ಈ ಗೇಮ್ ನಲ್ಲಿ ಸೋತಿದ್ದರೆ ಸ್ಫೋರ್ಟೀವ್ ಆಗಿ ತೆಗೆದುಕೊಳ್ಳುತ್ತಿದ್ದೆ. ಯಾವುದೇ ಕಾರಣಕ್ಕೂ ಪರ್ಸನಲ್ ಆಗಿ ತೆಗೆದುಕೊಳ್ಲಲ್ಲ ಎಂದು ಇನ್ನೊಂದು ಕಡೆ ಮಯೂರ್ ಹೇಳಿಕೊಂಡರು.
ಮಯೂರ್ ಮಾತ್ರ ಚೆನ್ನಾಗಿ ಆಡಿದ ಎಂದು ಎಲ್ಲರೂ ಚರ್ಚಿಸಿದರು. ಹುಡುಗಿಯರ ಮ್ಯಾಚ್ ತುಂಬಾ ಚೆನ್ನಾಗಿತ್ತು ಎಂದು ರೋಹಿತ್ ಹೇಳಿದ. ದೀಪಿಕಾ ತುಂಬಾ ಸ್ಟ್ರಾಂಗ್ ಆಗಿದ್ದಾರೆ ಎಂದೂ ಹೇಳಿದ. ಈ ಎಲ್ಲದರ ಜೊತೆ ಶ್ವೇತಾ ಅವರ ರಹಸ್ಯ ಕಾರ್ಯಾಚರಣೆಯೂ ಮುಂದುವರಿಯುತ್ತಿತ್ತು.
ದೀಪಿಕಾ ಅವರು ಹೆಚ್ಚಾಗಿ ಇಂಗ್ಲಿಷ್ ನಲ್ಲೇ ಮಾತನಾಡುತ್ತಿದ್ದಾರೆ ಎಂದು ಶ್ವೇತಾ ತಪ್ಪುಗಳನ್ನು ಪಟ್ಟಿ ಮಾಡುವ ರಹಸ್ಯಕಾರ್ಯಾಚರಣೆಯಲ್ಲಿ ನಿರತರಾಗಿದ್ದರು. ಈ ಟಾಸ್ಕ್ ಗಳಿಗೂ ನಿನಗೂ ಯಾಕೋ ಆಗಿ ಬರುತ್ತಿಲ್ಲ ಎಂದು ರೋಹಿತ್ ಬಗ್ಗೆ ಮಾತನಾಡಿದರು. ಒಂದು ಸಿಂಹಾಸನ ತಪ್ಪಿದರೆ ಅಂತಃಪುರಕ್ಕೆ ಏಟು ಬೀಳುತ್ತಿದೆ ಎಂದು ಎಲ್ಲರೂ ನಗಾಡಿದರು.
ಕುಸ್ತಿ ಆಟದಿಂದ ಕೆಲವರ ಮನಸ್ಸಿಗೆ ಇನ್ನೂ ಕೆಲವರಿಗೆ ದೇಹಕ್ಕೆ ಗಾಯಗಳಾಗಿದೆ. ಹಳೆ ಮತ್ತು ಹೊಸ ಗಾಯಗಳ ನಡುವೆ ಆಟ ನಡೆಯುತ್ತಿದೆ. ಇದರ ಜೊತೆಗೆ 'ಕಿಚ್ಚಿನ ಕಥೆ ಕಿಚ್ಚನ ಜೊತೆ' ಜ್ವರ ಬೇರೆ ಶುರುವಾಗಿದೆ. ಈ ವಾರ ಮನೆಯಿಂದ ಯಾರು ಹೊರಹೋಗುತ್ತಾರೋ ಎಂಬ ದಿಗುಲು ಮನೆಯ ಸದಸ್ಯರ ನಡುವೆ ಕಾಡುತ್ತಿದೆ.


Click it and Unblock the Notifications











