ಅನುಪಮಾ ಬದಲು 'ಕನ್ನಡ ಕೋಗಿಲೆ ಸೀಸನ್ 2'ಗೆ ಹೊಸ ಆಂಕರ್

ಕನ್ನಡ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿರುವ ಗಾಯನ ಕಾರ್ಯಕ್ರಮಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯ 'ಕನ್ನಡ ಕೋಗಿಲೆ' ಕೂಡ ಒಂದು. ಈಗಾಗಲೇ ಮೊದಲ ಸೀಸನ್ ಅನ್ನು ಯಶಸ್ವಿಯಾಗಿ ಮುಗಿಸಿದ ಈ ಕಾರ್ಯಕ್ರಮ ಮತ್ತೆ ಶುರು ಆಗುತ್ತಿದೆ.

'ಕನ್ನಡ ಕೋಗಿಲೆ ಸೀಸನ್ 2' ಕಾರ್ಯಕ್ರಮ ಪ್ರಾರಂಭ ಆಗುತ್ತಿದೆ. ಸೀಸನ್ 2 ನಲ್ಲಿ ಕಾರ್ಯಕ್ರಮದ ನಿರೂಪಕಿಯನ್ನು ಬದಲಾವಣೆ ಮಾಡಲಾಗಿದೆ. ನಟಿ ಅನುಪಮ ಬದಲಿಗೆ ಆರ್ ಜೆ ಸಿರಿ ಕಾರ್ಯಕ್ರಮವನ್ನು ಮುನ್ನೆಡೆಸಲಿದ್ದಾರೆ.

ಧಾರಾವಾಹಿ ಹಾಗೂ ಕೆಲ ಚಿತ್ರಗಳಲ್ಲಿ ನಟಿಸಿದ್ದ ಅನುಪಮ ಬಿಗ್ ಬಾಸ್ ಗೆ ಎಂಟ್ರಿ ಪಡೆದಿದ್ದರು. ಅದರ ಬಳಿಕ ಅವರಿಗೆ 'ಕನ್ನಡ ಕೋಗಿಲೆ' ಬಾಗಿಲು ತೆರೆಯಿತು. ಮೊದಲ ಸೀಸನ್ ನಲ್ಲಿ ಅನುಪಮ ನಿರೂಪಣೆಯ ಜವಾಬ್ದಾರಿ ತೆಗೆದುಕೊಂಡಿದ್ದರು.

rj siri is the new anchor for kannada kogile season 2 show

ಆದರೆ, ಈ ಬಾರಿ ಕಾರ್ಯಕ್ರಮದ ಅಂಕರ್ ಅನ್ನು ಬದಲಾವಣೆ ಮಾಡಿರುವ ವಾಹಿನಿ ಆ ಜಾಗಕ್ಕೆ ಆರ್ ಜೆ ಸಿರಿ ಅವರನ್ನು ಆಯ್ಕೆ ಮಾಡಿದೆ. ರೇಡಿಯೋ ಜಗತ್ತಿನಲ್ಲಿ ಹೆಸರು ಮಾಡಿರುವ ಸಿರಿ ಕೆಲ ನಾಟಕಗಳಲ್ಲಿಯೂ ನಟಿಸಿದ್ದಾರೆ. ಇವುಗಳ ನಂತರ 'ಕನ್ನಡ ಕೋಗಿಲೆ ಸೀಸನ್ 2' ಕಾರ್ಯಕ್ರಮಕ್ಕೆ ಅವರು ಎಂಟ್ರಿ ಪಡೆದಿದ್ದಾರೆ.

rj siri is the new anchor for kannada kogile season 2 show

'ಕನ್ನಡ ಕೋಗಿಲೆ ಸೀಸನ್ 2' ಕಾರ್ಯಕ್ರಮ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರ ಆಗಲಿದೆ. ಮಾರ್ಚ್ 23 ರಿಂದ ಈ ಕಾರ್ಯಕ್ರಮ ಗ್ರಾಂಡ್ ಓಪನಿಂಗ್ ಆಗುತ್ತಿದೆ. ಈ ಬಾರಿಯೂ ಸಂಗೀತ ನಿರ್ದೇಶಕ ಸಾಧು ಕೋಕಿಲ, ಗಾಯಕಿ ಅರ್ಚನಾ ಶರ್ಮಾ ಹಾಗೂ ಗಾಯಕ ಚಂದನ್ ಶೆಟ್ಟಿ ಕಾರ್ಯಕ್ರಮದ ತೀರ್ಪುಗಾರರಾಗಿದ್ದಾರೆ.

More from Filmibeat

English summary
RJ Siri is the new anchor for Colors Super channel's 'Kannada Kogile season 2' show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X