'ಕನ್ನಡದ ಕೋಟ್ಯಧಿಪತಿ'ಯಲ್ಲಿ ದಾಖಲೆ ಬರೆದ ರಾಕಿಂಗ್ ಸ್ಟಾರ್

By Bharath Kumar

Recommended Video

Kannadada Kotyadipathi season 3 : ಯಶ್ ಸೃಷ್ಟಿಸಿದ ದಾಖಲೆ ಏನು ಗೊತ್ತಾ..? | Filmibeat Kannada

'ಕನ್ನಡದ ಕೋಟ್ಯಧಿಪತಿ'ಯಲ್ಲಿ ರಾಕಿಂಗ್ ಸ್ಟಾರ್ ಯಶ್ ಎಷ್ಟು ಗೆಲ್ತಾರೆ ಎಂಬುದು ಈ ವಾರದ ಕುತೂಹಲವಾಗಿತ್ತು. ಅದಕ್ಕೆ ಸೋಮವಾರ ಸಂಚಿಕೆ ಉತ್ತರ ಕೊಟ್ಟಿದೆ.

ಇದುವರೆಗೂ ಸುಜಾತ ಎಂಬ ಸ್ಪರ್ಧಿ ಕನ್ನಡದ ಕೋಟ್ಯಧಿಪತಿಯ ಮೂರನೇ ಆವೃತ್ತಿಯಲ್ಲಿ ಅತಿ ಹೆಚ್ಚು ಹಣ ಗೆದ್ದಿದ್ದರು. ಆದ್ರೆ, ಅವರ ದಾಖಲೆಯನ್ನ ಬೆನ್ನತ್ತಿದ್ದ ಯಶ್ ತಮ್ಮದೇ ಹೊಸ ಇತಿಹಾಸ ನಿರ್ಮಾಣ ಮಾಡಿದ್ದಾರೆ.

ಹೌದು, ಸತತವಾಗಿ ಹದಿಮೂರು ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ಟಿದ್ದ ಯಶ್ ಬಹುಶಃ ಒಂದು ಕೋಟಿ ಗೆಲ್ತಾರೆ ಎಂಬ ನಿರೀಕ್ಷೆ ಮಾಡಲಾಗಿತ್ತು. ಆದ್ರೆ, ಆ ಅವಕಾಶ ಜಸ್ಟ ಮಿಸ್ ಆಯ್ತು. ಆದ್ರೂ, ಕೋಟ್ಯಧಿಪತಿಯಲ್ಲಿ ಯಶ್ ದೊಡ್ಡ ಮೊತ್ತವನ್ನೇ ತೆಗೆದುಕೊಂಡು ಹೋದರು. ಹಾಗಿದ್ರೆ, ರಾಕಿಂಗ್ ಯಶ್ ಎದುರಿಸಿದ ಪ್ರಶ್ನೆಗಳು ಹದಿಮೂರು ಪ್ರಶ್ನೆಗಳು ಹೇಗಿತ್ತು? ಎರಡನೇ ದಿನದ ಆಟ ಹೇಗಿತ್ತು.? ಮುಂದೆ ನೋಡಿ...

20 ಸಾವಿರ ರೂಪಾಯಿ ಪ್ರಶ್ನೆ

20 ಸಾವಿರ ರೂಪಾಯಿ ಪ್ರಶ್ನೆ

ಹಿಂದೂ ಪುರಾಣದ ಪ್ರಕಾರ, ವಸುದೇವನು ಹಸುಳೆ ಕೃಷ್ಣನನ್ನು ಕಂಸನ ಸೆರೆಮನೆಯಿಂದ ಒಯ್ಯುವಾಗ ಯಾವ ನದಿಯನ್ನು ದಾಟಿದನು.?
A ಗಂಗಾ
B ಯಮುನಾ
C ಸರಸ್ವತಿ
D ನರ್ಮದಾ
ಯಶ್ ಕೊಟ್ಟ ಉತ್ತರ : B ಯಮುನಾ

40 ಸಾವಿರ ರೂಪಾಯಿ ಪ್ರಶ್ನೆ

40 ಸಾವಿರ ರೂಪಾಯಿ ಪ್ರಶ್ನೆ

1763ರಲ್ಲಿ ಹೈದರ್ ಆಲಿ ವಶಪಡಿಸಿಕೊಂಡ ಬೇಕಲ್ ಕೋಟೆ ಇಂದಿನ ಯಾವ ರಾಜ್ಯದಲ್ಲಿದೆ.?
A ಕೇರಳ
B ತಮಿಳುನಾಡು
C ಗೋವಾ
D ಕರ್ನಾಟಕ
ಯಶ್ ಕೊಟ್ಟ ಉತ್ತರ: A ಕೇರಳ

80 ಸಾವಿರದ ಪ್ರಶ್ನೆ

80 ಸಾವಿರದ ಪ್ರಶ್ನೆ

ಬಾಲ್ಯದಲ್ಲಿ ಏರ್ ಗನ್ ನಿಂದ ಹಳದಿ ಕೊರಳಿನ ಗೊಬ್ಬಿಯನ್ನ ಕೊಂದ ನಂತರ ಯಾರು ಪಕ್ಷಿ ವಿಜ್ಞಾನದಲ್ಲಿ ತಮ್ಮ ಪಯಣವನ್ನು ಪ್ರಾರಂಭಿಸಿದರು.?
A ಸಲೀಂ ಆಲಿ
B ಹುಮಾಯೂನ್ ಅಬ್ದುಲ್ ಆಲಿ
C ಕೆಕೆ ನೀಲಕಂಠನ್
D ಎಓ ಹ್ಯೂಮ್
ಯಶ್ ಕೊಟ್ಟ ಉತ್ತರ: (ಆಡಿಯೆನ್ಸ್ ಪೋಲ್) A ಸಲೀಂ ಆಲಿ

1.60 ಲಕ್ಷದ ಪ್ರಶ್ನೆ

1.60 ಲಕ್ಷದ ಪ್ರಶ್ನೆ

ಬಿವಿ ಕಾರಂತರು ಇವುಗಳಲ್ಲಿ ಯಾವ ಸಂಸ್ಥೆಯ ಮುಖ್ಯಸ್ಥರಾಗಿರಲಿಲ್ಲ.?
A ಎನ್.ಎಸ್.ಡಿ
B ರಂಗಮಂಡಲ ರೆಪರ್ಟರಿ
C ರಂಗಾಯಣ
D ಜೆಜೆ ಸ್ಕೂಲ್ ಆಫ್ ಆರ್ಟ್ಸ್
ಯಶ್ ಕೊಟ್ಟ ಉತ್ತರ: D ಜೆಜೆ ಸ್ಕೂಲ್ ಆಫ್ ಆರ್ಟ್ಸ್

3.20 ಲಕ್ಷದ ಪ್ರಶ್ನೆ

3.20 ಲಕ್ಷದ ಪ್ರಶ್ನೆ

ವಿಶ್ವದ ಅತ್ಯಂತ ಎತ್ತರದ ಯುದ್ಧ ಭೂಮಿ ಸಿಯಾಚಿನ್ ಗ್ಲೇಷಿಯರ್ ಗೆ ಭೇಟಿ ಕೊಟ್ಟ ಮೊದಲ ಭಾರತೀಯ ರಾಷ್ಟ್ರಪತಿ ಯಾರು.?
A ಕೆ ಆರ್ ನಾರಾಯಣನ್
B ಪ್ರತಿಭಾ ಪಾಟೀಲ್
C ಎಪಿಜೆ ಅಬ್ದುಲ್ ಕಲಾಂ
D ಪ್ರಣಬ್ ಮುಖರ್ಜಿ
ಯಶ್ ಕೊಟ್ಟ ಉತ್ತರ: C ಎಪಿಜೆ ಅಬ್ದುಲ್ ಕಲಾಂ

6.40 ಲಕ್ಷದ ಪ್ರಶ್ನೆ

6.40 ಲಕ್ಷದ ಪ್ರಶ್ನೆ

'ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ' ಈ ಸಾಲನ್ನು ಬರೆದ ಲೇಖಕ ಯಾರು.?
A ಕುವೆಂಪು
B ದ ರಾ ಬೇಂದ್ರೆ
C ಚೆನ್ನವೀರ ಕಣವಿ
D ಗಿರೀಶ್ ಕಾರ್ನಾಡ್
ಯಶ್ ಕೊಟ್ಟ ಉತ್ತರ: A ಕುವೆಂಪು

12.50 ಲಕ್ಷದ ಪ್ರಶ್ನೆ.?

12.50 ಲಕ್ಷದ ಪ್ರಶ್ನೆ.?

ಯಾವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಅಜೇಯ 664 ಗಳ ರನ್ ದಾಖಲೆಯ ಜೊತೆಯಾಟ ಆಡಿದ್ದಾರೆ.?
A ರಣಜಿ ಟ್ರೋಫಿ
B ದುಲೀಪ್ ಟ್ರೋಫಿ
C ಹ್ಯಾರಿಸ್ ಶೀಲ್ಡ್
D ಪದ್ಮಾಕರ್ ಶೀಲ್ಡ್
ಯಶ್ ಕೊಟ್ಟ ಉತ್ತರ: C ಹ್ಯಾರಿಸ್ ಶೀಲ್ಡ್ (ಡಬ್ಬಲ್ ಡಿಪ್)

25 ಲಕ್ಷದ ಪ್ರಶ್ನೆ

25 ಲಕ್ಷದ ಪ್ರಶ್ನೆ

1942ರಲ್ಲಿ ಶಿವಮೊಗ್ಗ ಜಿಲ್ಲೆಯ ಯಾವ ಗ್ರಾಮದ ಜನರು ಬ್ರಿಟಿಷರ ಆಳ್ವಿಕೆಯಿಂದ ತಮ್ಮನ್ನು ತಾವು ಸ್ವತಂತ್ರ ಎಂದು ಘೋಷಿಸಿಕೊಂಡರು.?
A ಮತ್ತೂರು
B ಬಸ್ರೂರು
C ಈಸೂರು
D ಕಲ್ಲೂರು
ಯಶ್ ಕೊಟ್ಟ ಉತ್ತರ: C ಈಸೂರು

50 ಲಕ್ಷದ ಪ್ರಶ್ನೆ ಯಾವುದು.?

50 ಲಕ್ಷದ ಪ್ರಶ್ನೆ ಯಾವುದು.?

ಸೋಮವಾರದ ಸಂಚಿಕೆಯಲ್ಲಿ 25 ಲಕ್ಷದ ಪ್ರಶ್ನೆಗೆ ಉತ್ತರ ನೀಡಿದ ರಾಕಿಂಗ್ ಸ್ಟಾರ್ ಆಟ ಅಲ್ಲಿಗೆ ಮುಕ್ತಾಯವಾಗಿದೆ. 50 ಲಕ್ಷದ ಪ್ರಶ್ನೆಯನ್ನ ಯಶ್ ಎದುರಿಸಲಿಲ್ಲ. ಹಾಗಾಗಿ, ಯಶ್ 25 ಲಕ್ಷ ಗೆದ್ದಿದ್ದಾರೆ. ಮುಂದಿನ ಸಂಚಿಕೆಯಲ್ಲಿ ಹೊಸ ಸ್ಪರ್ಧಿಯೊಂದಿಗೆ ಆಟ ಶುರುವಾಗಲಿದೆ.

More from Filmibeat

English summary
Kannada actor Rocking Star Yash participate in Kannadada Kotyadipathi Reality show. and yash wins 25 lakh .
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X