ಕಡೆಗೂ ತಮ್ಮ ಲವ್ ಸ್ಟೋರಿ ಸೀಕ್ರೆಟ್ ಬಿಚ್ಚಿಟ್ಟ ನಟ ಯಶ್.!

By Harshitha

ಪ್ರೀತಿ-ಪ್ರೇಮ ಅಂತ 'ಕನ್ನಡ ನಟಿ' ಜೊತೆ ಯಶ್ ಸಿಕ್ಕಾಪಟ್ಟೆ ಸೀರಿಯಸ್ ಆಗಿದ್ದರೂ, ಅದನ್ನ ಅವರು ಎಲ್ಲೂ ಬಹಿರಂಗವಾಗಿ ಒಪ್ಪಿಕೊಂಡಿರ್ಲಿಲ್ಲ.

ಯಾವುದೇ ಪತ್ರಿಕೆಯವರು, ಹೇಗೆ ಕೇಳಿದರೂ, ತಮ್ಮ ಪ್ರೇಯಸಿ ಹಾಗೂ ಮದುವೆ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಹೇಳುತ್ತಿದ್ದದ್ದು ಇಷ್ಟೇ - ''ಜೀವನದಲ್ಲಿ ಪ್ರೀತಿ-ಮದುವೆ ಎರಡು ಸುಂದರ ಅನುಭವ. ಅದಕ್ಕೆ ಅದರದ್ದೇ ಆದ ಗೌರವ ಇದೆ. ಆ ಸಮಯ ಬರುವ ಮೊದಲು ಅದರ ಬಗ್ಗೆ ಮಾತನಾಡುವುದು ನನಗೆ ಇಷ್ಟವಿಲ್ಲ. ನನಗೆ ನನ್ನ ಅಭಿಮಾನಿಗಳೊಂದಿಗೆ ನನ್ನ ಫ್ಯಾಮಿಲಿ ಕೂಡ ಅಷ್ಟೇ ಮುಖ್ಯ. ನಾನು ಮದುವೆ ಆಗುವ ಸಂದರ್ಭದಲ್ಲಿ ನಿಮ್ಮೆಲ್ಲರನ್ನೂ ಕರೆಯುತ್ತೇನೆ.'' [ರಾಧಿಕಾ ಪಂಡಿತ್ ಜೊತೆಗಿನ ಲವ್ವಿ-ಡವ್ವಿ ಬಗ್ಗೆ ಯಶ್ ಹೇಳಿದ್ದೇನು?]

ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ಪ್ರೀತಿ-ಪ್ರೇಮ-ಮದುವೆ ಅಂತ ಬಿಜಿಯಾದ್ರೆ, ಅಭಿಮಾನಿಗಳ ಸಂಖ್ಯೆ ಕಡಿಮೆ ಆಗ್ಬಹುದು ಎಂಬ ಫೋಬಿಯಾ ಯಶ್ ಗೆ ಇರಬಹುದು. ಇಲ್ಲಾ ಗಾಸಿಪ್ ಮಾಡುವವರ ಬಾಯಿಗೆ 'ಸಿಹಿ ಕಡಲೆಕಾಯಿ' ಆಗಬಾರದು ಎಂಬ ಕನ್ಸರ್ನ್ ಅವರಿಗೆ ಇರಬಹುದು.

ಏನೇ ಇದ್ರೂ, ತಮ್ಮ 'ಪ್ರೇಮ ಪರ್ವ'ದ ಬಗ್ಗೆ ಇಷ್ಟು ದಿನ 'ನೋ ಕಾಮೆಂಟ್' ಎನ್ನುತ್ತಿದ್ದ ಯಶ್ ಈಗ ಮನ ಬಿಚ್ಚಿ ಮಾತನಾಡಿದ್ದಾರೆ. ಮುಂದೆ ಓದಿ....

ಯಶ್ ಮಾತನಾಡಿದ್ದು ಎಲ್ಲಿ.?

ಯಶ್ ಮಾತನಾಡಿದ್ದು ಎಲ್ಲಿ.?

ಕಲರ್ಸ್ ಸೂಪರ್ ವಾಹಿನಿಗೆ ಪ್ರಚಾರ ರಾಯಭಾರಿ ಆಗಿರುವ ಯಶ್, ಅದೇ ಚಾನೆಲ್ ನ ಲಾಂಚ್ ಕಾರ್ಯಕ್ರಮದಲ್ಲಿ ತಮ್ಮ 'ಪ್ರೀತಿ' ಹಾಗೂ 'ಪ್ರೇಯಸಿ' ಬಗ್ಗೆ ಮಾತನಾಡಿದ್ದಾರೆ. [ಗೋವಾದಲ್ಲಿ ಯಶ್-ರಾಧಿಕಾ ಪಂಡಿತ್ ಮಾಡಿದ್ದೇನು?]

ಯಶ್ ಜೊತೆ ಸೂಪರ್ ಓವರ್ ಗೇಮ್.!

ಯಶ್ ಜೊತೆ ಸೂಪರ್ ಓವರ್ ಗೇಮ್.!

ಕಲರ್ಸ್ ಸೂಪರ್ ವಾಹಿನಿಯ ಲಾಂಚ್ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ನಡುವೆ ಸೂಪರ್ ಓವರ್ ಕ್ರಿಕೆಟ್ ಆಟ ನಡೆಯಿತು. ಅದರಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ನಡುವೆ ಕ್ರೇಜಿ ಸ್ಟಾರ್ ರವಿಚಂದ್ರನ್ ಕೇಳುವ ಪ್ರಶ್ನೆಗಳಿಗೆ ಯಶ್ ಉತ್ತರ ನೀಡ್ಬೇಕಿತ್ತು. [ಗೋವಾ ಬೀಚ್ ನಲ್ಲಿ ಯಶ್-ರಾಧಿಕಾ ಮೋಜು-ಮಸ್ತಿ]

ವೈಯುಕ್ತಿಕ ಬದುಕಿನ ಬಗ್ಗೆ ಪ್ರಶ್ನೆ ಕೇಳಿದ ರವಿಚಂದ್ರನ್

ವೈಯುಕ್ತಿಕ ಬದುಕಿನ ಬಗ್ಗೆ ಪ್ರಶ್ನೆ ಕೇಳಿದ ರವಿಚಂದ್ರನ್

''ನೀನು ಇಂಡಸ್ಟ್ರಿಗೆ ಬಂದಾಗಿನಿಂದಲೂ ಒಂದೇ ಹುಡುಗಿ ಹೆಸರು ನಿನ್ನ ಜೊತೆ ಕೇಳಿ ಬರುವುದು. ಅದು ನಿಜಾನಾ.? ಯಾವಾಗ ನಿಜ ಆಗುತ್ತೆ.?'' ಅಂತ ಬೌಲಿಂಗ್ ಮಾಡುವುದರ ಜೊತೆಗೆ ರವಿಮಾಮ ಪ್ರಶ್ನೆ ಎಸೆದರು.

ಯಶ್ ಕೊಟ್ಟ ಉತ್ತರ

ಯಶ್ ಕೊಟ್ಟ ಉತ್ತರ

''ಒಳ್ಳೆಯದ್ದು ಅಲ್ಲವಾ ಸರ್ ಒಂದೇ ಹೆಸರು ಇದ್ರೆ.! ತುಂಬಾ ಹೆಸರು ಬರುವುದಕ್ಕಿಂತ.!'' ಅಂತ ಯಶ್ ಉತ್ತರ ನೀಡಿದ್ರು.

ರವಿಚಂದ್ರನ್ - ಯಶ್ ನಡುವಿನ ಸಂಭಾಷಣೆ

ರವಿಚಂದ್ರನ್ - ಯಶ್ ನಡುವಿನ ಸಂಭಾಷಣೆ

ರವಿಚಂದ್ರನ್ - ''ಅದು ತುಂಬಾ ಒಳ್ಳೆಯದು. ತುಂಬಾ ಕಷ್ಟ ಕೂಡ. ಅದನ್ನ ಮೇನ್ಟೇನ್ ಮಾಡ್ತಿದ್ಯಲ್ಲಾ. ಅದಕ್ಕೆ ಮೊದಲು ನಿನ್ನ ಮೆಚ್ಚಿಕೊಳ್ಳಬೇಕು.

ಯಶ್ - ಥ್ಯಾಂಕ್ಯು ಸರ್.

ಯಶ್ ಗೆ ರವಿಮಾಮ ಹ್ಯಾಟ್ಸ್ ಆಫ್

ಯಶ್ ಗೆ ರವಿಮಾಮ ಹ್ಯಾಟ್ಸ್ ಆಫ್

''ಯಶಸ್ಸು ಸಿಕ್ಕಿದ ಮೇಲೆ ಜೊತೆಯಲ್ಲಿ ಇರೋರನ್ನ ಮರೆಯಬಾರದು. ಟಿವಿಯಲ್ಲಿ ಇದ್ದಾಗ ನೀನು ಜೊತೆಯಲ್ಲಿದ್ದೆ. ಅದನ್ನ ಇಲ್ಲಿಯವರೆಗೂ ಉಳಿಸಿಕೊಂಡಿದ್ಯಲ್ಲಾ. ಅದಕ್ಕೆ ನಿನಗೆ ಒಂದು ಹ್ಯಾಟ್ಸ್ ಆಫ್ ನನ್ನ ಕಡೆಯಿಂದ'' - ರವಿಚಂದ್ರನ್

ಯಶ್ ನಂಬಿಕೆ ಏನು.?

ಯಶ್ ನಂಬಿಕೆ ಏನು.?

''ಒಂದೇ ಒಂದು ಆಸೆ. ಲೈಫ್ ನಲ್ಲಿ ನಮಗೆ ಗೊತ್ತಿಲ್ಲದೇ ಸಾವಿರಾರು ತಪ್ಪುಗಳನ್ನು ಮಾಡಿದ್ದೀವಿ. ಆದ್ರೆ ಒಂದು ಸಲ ಬುದ್ಧಿ ಬಂದಮೇಲೆ ಮನುಷ್ಯ ಒಂದು ನಿರ್ಧಾರ ಮಾಡ್ತಾನೆ. ಆ ನಿರ್ಧಾರಕ್ಕೆ ಲೈಫ್ ಲಾಂಗ್ ನಿಂತುಕೊಂಟ್ರೆ, ಯಾವತ್ತೂ ವಾಲ್ಯು ಇರುತ್ತೆ ಅನ್ನೋದು ನನ್ನ ನಂಬಿಕೆ'' - ಯಶ್

ಪ್ರೀತಿ ಮಾಡ್ತಿರೋದು ಒಪ್ಪಿಕೊಂಡಂಗಾಯ್ತು.!

ಪ್ರೀತಿ ಮಾಡ್ತಿರೋದು ಒಪ್ಪಿಕೊಂಡಂಗಾಯ್ತು.!

ಅಲ್ಲಿಗೆ ರಾಕಿಂಗ್ ಸ್ಟಾರ್ ಯಶ್ ಪ್ರೇಮದ ಅಮಲಿನಲ್ಲಿ ತೇಲುತ್ತಿರುವುದು ಖಚಿತ ಅಂತಾಯ್ತು.

ಹುಡುಗಿ ಯಾರು ಅಂತ ಹೇಳಲೇ ಇಲ್ಲ.!

ಹುಡುಗಿ ಯಾರು ಅಂತ ಹೇಳಲೇ ಇಲ್ಲ.!

'ಮಿಸ್ಟರ್ ರಾಮಾಚಾರಿ' ಯಶ್ ಗೆ ಮಿಸಸ್ ಆಗುವವರು ಯಾರು ಅಂತ ಸ್ಪೆಷಲ್ ಆಗಿ ನಾವು ನಿಮಗೆ ಹೇಳಬೇಕಿಲ್ಲ. ಅದೊಂಥರಾ ಒಪನ್ ಸೀಕ್ರೆಟ್ ಇದ್ದ ಹಾಗೆ.

More from Filmibeat

English summary
Rocking Star Yash openly spoke about his love life during the chat with Crazy Star V.Ravichandran on Colors Super Channel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X