ಮಂಡ್ಯ ಜನರಿಗಾಗಿ ರಾಕ್ ಲೈನ್ ವೆಂಕಟೇಶ್ ಕೈಗೊಂಡ ಹೊಸ ನಿರ್ಧಾರ
Recommended Video
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅಂಬರೀಶ್ ಅವರು ಭರ್ಜರಿ ಜಯ ಕಂಡಿದ್ದರು. ಇದು ಸುಮಲತಾ ಅವರ ಗೆಲುವಲ್ಲ, 'ಇದು ಮಂಡ್ಯ ಜನರ ಗೆಲುವು, ಅಂಬರೀಶ್ ಅವರ ಗೆಲುವು' ಎಂದು ಸಕ್ಕರೆ ನಾಡಿನ ಜನರಿಗೆ ಅರ್ಪಿಸಿದರು.
ಸುಮಲತಾ ಅವರ ಪರವಾಗಿ ಜೋಡೆತ್ತುಗಳಾಗಿ ಶ್ರಮಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಇಬ್ಬರು 'ಸ್ವಾಭಿಮಾನ ವಿಜಯೋತ್ಸವ' ವೇದಿಕೆಯಲ್ಲಿ ಮಂಡ್ಯ ಜನರ ಪಾದಕ್ಕೆ ನಮಸ್ಕರಿಸಿದರು. ಸುಮಲತಾ ಅವರ ಗೆಲುವು ಸ್ವಾಭಿಮಾನದ ಗೆಲುವು ಎಂದು ಬಿಂಬಿಸಿದರು.
ಸುಮಲತಾ ಅವರನ್ನ ಗೆಲ್ಲಿಸಿದ್ದಕ್ಕಾಗಿ ಮಂಡ್ಯ ಜನರಿಗೆ ಏನಾದರೂ ಮಾಡಬೇಕು ಎಂಬ ಯೋಚನೆ ಮಾಡಿದ ರಾಕ್ ಲೈನ್ ವೆಂಕಟೇಶ್ ತಮ್ಮ ಸಿನಿಮಾಗಳ ಮೂಲಕ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

''ಇನ್ನು ಮುಂದೆ ರಾಕ್ ಲೈನ್ ವೆಂಕಟೇಶ್ ಮಾಡುವ ಪ್ರತಿಯೊಂದು ಚಿತ್ರದ ಟೈಟಲ್ ಕಾರ್ಡ್ ನಲ್ಲಿ 'ಮಂಡ್ಯ ಜಿಲ್ಲೆಯ ಸ್ವಾಭಿಮಾನ ಜನರ ಆಶೀರ್ವಾದದೊಂದಿಗೆ' ಎಂದು ಸಿನಿಮಾ ಆರಂಭಿಸುವುದಕ್ಕೆ ನಾನು ನಿರ್ಧರಿಸಿದ್ದೇನೆ'' ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ತಿಳಿಸಿದರು.
ಅಂಬರೀಶ್ ಅವರ ಆಪ್ತರಾಗಿದ್ದ ರಾಕ್ ಲೈನ್ ವೆಂಕಟೇಶ್, ಸುಮಲತಾ ಅವರ ಗೆಲುವಿಗಾಗಿ ಶ್ರಮಿಸಿದ್ದರು. ಸುಮಲತಾ ಅವರ ಪ್ರಚಾರ, ರಾಜಕೀಯ ಬೆಳವಣಿಗೆಯ ಹಿಂದೆ ಇವರು ಕೂಡ ಇದ್ದರು.


Click it and Unblock the Notifications











