»   » ದುನಿಯಾ ವಿಜಯ್ ಗೆ ಮೋಸ ಮಾಡ್ತಾರಂತೆ ಕನ್ನಡದ ಈ ನಟಿ

ದುನಿಯಾ ವಿಜಯ್ ಗೆ ಮೋಸ ಮಾಡ್ತಾರಂತೆ ಕನ್ನಡದ ಈ ನಟಿ

Posted By:
Subscribe to Filmibeat Kannada

ಕನ್ನಡದ ಸ್ಟಾರ್ ನಟರ ಸಾಲಿನಲ್ಲಿ ದುನಿಯಾ ವಿಜಯ್ ಕೂಡ ಒಬ್ಬರು. ಇಂತಹ ನಟನಿಗೆ ಈಗ ಕನ್ನಡದ ನಟಿ ರೂಪಶ್ರೀ ಮೋಸ ಮಾಡುತ್ತೇನೆ ಅಂತ ಹೇಳಿದ್ದಾರೆ. ಆದ್ರೆ,ರೂಪಶ್ರೀ ಅವರ ಈ ಹೇಳಿಕೆ ಸೀರಿಯಸ್ ಅಲ್ಲ, ಅದು ತಮಾಷೆಗೆ ಸೀಮಿತ.

ಇತ್ತೀಚೆಗಷ್ಟೆ ರೂಪಶ್ರೀ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕಾರ್ಯಕ್ರಮದ Rapid Fire ಸುತ್ತಿನಲ್ಲಿ ಅಕುಲ್ ''ನೀವು ಜಗ್ಗೇಶ್, ದುನಿಯಾ ವಿಜಯ್ ಮತ್ತು ಹುಚ್ಚ ವೆಂಕಟ್ ರಲ್ಲಿ ಯಾವ ನಟನನ್ನು ಸಾಯಿಸ್ತೀರಾ? ಯಾವ ನಟನಿಗೆ ಮೋಸ ಮಾಡ್ತೀರಾ? ಹಾಗೂ ಯಾವ ನಟನೊಂದಿಗೆ ಮದುವೆ ಆಗ್ತೀರಾ?'' ಎಂದುಕೇಳಿದರು.

Roopashri spoke about Duniya Vijay in 'Super talk time'

ಅಕುಲ್ ಪ್ರಶ್ನೆಗೆ ಉತ್ತರಿಸಿದ ನಟಿ ರೂಪಶ್ರೀ ಮೂರು ಹೆಸರುಗಳ ಪೈಕಿ ''ನಾನು ದುನಿಯಾ ವಿಜಯ್ ಅವರಿಗೆ ಮೋಸ ಮಾಡುತ್ತೇನೆ. ಹುಚ್ಚ ವೆಂಕಟ್ ಅವರನ್ನು ಸಾಯಿಸುತ್ತೇನೆ ಹಾಗೂ ಜಗ್ಗೇಶ್ ಜೊತೆ ಮದುವೆ ಆಗುತ್ತೇನೆ'' ಎಂದರು.

ನಟಿ ರೂಪಶ್ರೀ ಅವರ 'ಸೂಪರ್ ಟಾಕ್ ಟೈಂ' ಸಂಚಿಕೆ ಆಗಸ್ಟ್ 18 ರಂದು ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗಿತ್ತು. ರೂಪಶ್ರೀ ಅವರೊಂದಿಗೆ ನಟ ಬುಲೆಟ್ ಪ್ರಕಾಶ್ ಮತ್ತು ನಟಿ ಅನಿತಾ ಭಟ್ ಕೂಡ ಕಾರ್ಯಕ್ರಮದ ಅತಿಥಿಗಳಾಗಿದ್ದರು.

English summary
Kannada Actress Roopashri spoke about Duniya Vijay in Colors Super Channel's popular show 'Super talk time'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada