For Quick Alerts
  ALLOW NOTIFICATIONS  
  For Daily Alerts

  'ಸಾನ್ಯ ಬರ್ತ್‌ಡೇಗೆ ಬೆಡ್‌ ಡೆಕೋರೇಷನ್‌ ಮಾಡಿದ್ರಂತೆ ರೂಪೇಶ್': ಕಾಲೆಳೆದ ಕಿಚ್ಚ

  |

  ಕನ್ನಡ ಕಿರುತೆರೆಯ ಅತ್ಯಂತ ದೊಡ್ಡ ರಿಯಾಟಿಲಿ ಶೋ ಬಿಗ್‌ ಬಾಸ್‌ ಸೀಸನ್‌ 9ಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದಿನಿಂದ (ಸೆಪ್ಟೆಂಬರ್ 24) ಸಂಜೆ 9 ಗಂಟೆಗೆ ಬಿಗ್‌ ಬಾಸ್ ಸೀಸನ್‌ 9ಕ್ಕೆ ಚಾಲನೆ ಸಿಗಲಿದ್ದು ಪ್ರತಿದಿನ ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ರಿಂದ ಪ್ರಸಾರಗೊಳ್ಳಲಿದೆ. ಈಗಾಗಲೇ ಬಿಗ್‌ ಬಾಸ್‌ ಸೀಸನ್ 9ಕ್ಕೆ ಭರ್ಜರಿ ತಯಾರಿ ನಡೆದಿದ್ದು, ಸ್ಫರ್ಧಿಗಳು ಕೂಡ ದೊಡ್ಮನೆಯೊಳಗಡೆ ಹೋಗಲು ಸಜ್ಜಾಗಿದ್ದಾರೆ.

  ಕನ್ನಡ ಬಿಗ್ ಬಾಸ್‌ ಓಟಿಟಿಯಿಂದ ನಾಲ್ವರು ಸ್ಫರ್ಧಿಗಳು ಈಗಾಗಲೇ ಬಿಗ್‌ ಬಾಸ್‌ ಸೀಸನ್‌ 9ಕ್ಕೆ ಜಿಗಿದಿದ್ದು, ಸಾನ್ಯಾ ಐಯ್ಯರ್, ರೂಪೇಶ್‌ ಶೆಟ್ಟಿ ಹಾಗೂ ರಾಕೇಶ್‌ ಶೆಟ್ಟಿ ಗಾನ ಬಜಾನದ ಜೊತೆಗೆ ಆರ್ಯವರ್ಧನ್‌ ಗುರೂಜಿ ನಂಬರ್‌ ಲೆಕ್ಕಚಾರವನ್ನು ಕಿರುತೆರೆ ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರಾ ನೋಡಬೇಕಿದೆ. ಆದರೆ ಈ ನಾಲ್ವರು ಸ್ಫರ್ಧಿಗಳು ಹೊಸ ಸ್ಫರ್ಧಿಗಳಿಗೆ ಕಠಿಣ ಸ್ಫರ್ಧೆ ನೀಡುವುದರಲ್ಲಿ ಎರಡು ಮಾತಿಲ್ಲ.

  Bigg Boss Kannada Season 9 Launch Live : ಬಿಗ್‌ಬಾಸ್‌ ಪ್ರಾರಂಭಕ್ಕೆ ಕ್ಷಣಗಣನೆ, ಇಲ್ಲಿದೆ ಸ್ಪರ್ಧಿಗಳ ಪಟ್ಟಿBigg Boss Kannada Season 9 Launch Live : ಬಿಗ್‌ಬಾಸ್‌ ಪ್ರಾರಂಭಕ್ಕೆ ಕ್ಷಣಗಣನೆ, ಇಲ್ಲಿದೆ ಸ್ಪರ್ಧಿಗಳ ಪಟ್ಟಿ

  ಕಿರುತೆರೆ ಪ್ರೇಕ್ಷಕರು ಬಹಳ ನಿರೀಕ್ಷೆಯಿಂದ ಕಾಯುತ್ತಿರುವ ಬಿಗ್ ಬಾಸ್‌ ಸೀಜನ್‌ 9ರ ಲಾಂಚ್‌ ಕಾರ್ಯಕ್ರಮದ ಕೆಲ ವಿಡಿಯೋ ವೈರಲ್‌ ಆಗಿದೆ. ಈ ವಿಡಿಯೋಗಳ ತುಣುಕಿನಲ್ಲಿ ಕಿಚ್ಚ ಸುದೀಪ್‌ ತಮ್ಮ ಹೊಸ ಲುಕ್‌ನಲ್ಲಿ ಸಖತ್‌ ಆಗಿ ಕಾಣಿಸಿಕೊಂಡಿದ್ದು, ನೋಡುಗರು ಫಿದಾ ಆಗಿದ್ದಾರೆ. ಇನ್ನು ಸುದೀಪ್, ಕನ್ನಡ ಬಿಗ್ ಬಾಸ್‌ ಓಟಿಟಿಯಿಂದ ಬಂದ ರೂಪೇಶ್‌ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಇಬ್ಬರನ್ನು ಜೊತೆಯಲ್ಲಿ ಬಿಗ್ ಬಾಸ್‌ ಸೀಸನ್‌ 9ರ ವೇದಿಕೆಗೆ ಕರೆದಿದ್ದು, ಮನೆಯವರ ಮುಂದೆಯೇ ಇಬ್ಬರ ಕಾಲೆಳೆದಿದ್ದಾರೆ. ಸಾನ್ಯಾ ಬಳಿ ಕಿಚ್ಚ ಸುದೀಪ್ ಸಾನ್ಯಾ ಶೆಟ್ಟಿ ಎಂದಾಗ ಹೇಗೆ ಅನಿಸುತ್ತದೆ ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಸಾನ್ಯಾ ಇಷ್ಟು ದಿನ ಐಯ್ಯರ್ ಇಷ್ಟ ಆಗುತ್ತಿತ್ತು. ಆದರೆ ಶೆಟ್ಟಿ ಅಂತಾ ಕೇಳಿಸಿಕೊಂಡ ಮೇಲೆ ಸಾನ್ಯಾ ಶೆಟ್ಟಿನೇ ಇಷ್ಟವಾಗ್ತಿದೆ ಎಂದಿದ್ದಾರೆ.

  ಈ ವೇಳೆ ಸಾನ್ಯಾ ತಾಯಿ ನಟಿ ದೀಪಾ ಐಯ್ಯರ್‌ ತಮಾಷೆಯಿಂದ ಆಕೆಯನ್ನು ಗದರಿದ್ದು, ಕಿಚ್ಚ ಸುದೀಪ್ ನಿಮಗೆ ಶೆಟ್ಟಿ ಇಷ್ಟ ಇಲ್ವಾ ಅಥವಾ ಈ ಶೆಟ್ಟಿನೇ ಇಷ್ಟ ಇಲ್ವಾ ಎಂದು ರೂಪೇಶ್‌ ಅವರನ್ನು ತೋರಿಸಿದ್ದಾರೆ. ಬಳಿಕ ಮಾತು ಮುಂದುವರಿಸಿದ ಸಾನ್ಯಾ ಈ ಮಧ್ಯದಲ್ಲಿ ನನ್ನ ಹುಟ್ಟುಹಬ್ಬ ಬೇರೆ ಬಂದಿತ್ತು. ಆ ದಿನ ರೂಪೇಶ್‌ ಬೆಡ್ ಮೇಲೆ ಹ್ಯಾಪಿ ಬರ್ತ್‌ಡೇ ಸಾನ್ಯಾ ಅಂತಾ ಬೆಡ್‌ ಮೇಲೆ ಡೆಕೋರೇಷನ್‌ ಮಾಡಿದ್ದ ಅಂತಾ ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ. ಈ ವೇಳೆ ಎಲ್ಲರ ಮುಂದೆ ಇಬ್ಬರು ಸ್ಫರ್ಧಿಗಳ ಕಾಲೆಳೆದ ಕಿಚ್ಚ ಸುದೀಪ್‌ ಬರ್ತ್‌ಡೇ ಡೆಕೋರೇಷನ್ ಟೇಬಲ್‌ ಮೇಲೆ ಮಾಡ್ತಾರೆ ಅಲ್ವಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ರೂಪೇಶ್‌ಗೆ ನನ್ನ ರೂಮ್‌ ಕೂಡ ಡೆಕೋರೇಟ್‌ ಮಾಡಿ ಎಂದು ಹೇಳಿ ಎಲ್ಲರನ್ನೂ ನಗಿಸಿದ್ದಾರೆ.

  ಇನ್ನು ಬಿಗ್‌ ಬಾಸ್‌ ಸೀಸನ್ 9ರ ಮೇಲಿನ ಕುತೂಹಲ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿದ್ದು, ಓಟಿಟಿಯಿಂದ ಬಂದವರನ್ನು ಹೊರತುಪಡಿಸಿ ಉಳಿದ ಸ್ಫರ್ಧಿಗಳು ಯಾರಿರಬಹುದು ಎನ್ನುವ ಕುತೂಹಲ ಎಲ್ಲರಲ್ಲಿದೆ. ಈ ಪ್ರಶ್ನೆಗೆ ಉತ್ತರ ಎಂಬಂತೆ ಬಿಗ್‌ ಬಾಸ್ ಸೀಸನ್‌ 9ರ ಸಂಭಾವ್ಯ ಸ್ಥರ್ಧಿಗಳ ಹೆಸರು ಇಲ್ಲಿದೆ. ವೈಷ್ಣವಿ ಗೌಡ, ದೀಪಿಕಾ ದಾಸ್, ಅನುಪಮ ಗೌಡ, ಪ್ರಶಾಂತ್ ಸಂಬರ್ಗಿ, ಅರುಣ್ ಸಾಗರ್, ಮಯೂರಿ, ದಿವ್ಯ ಉರುಡುಗ , ವಿನೋದ್ ಗೊಬ್ರ, ಮಂಗಳ ಗೌರಿ ಕಾವ್ಯ ಶ್ರೀ, ನವಾಜ್, ನೇಹಾ ಗೌಡ, ರೂಪೇಶ್ ರಾಜಣ್ಣ, ಬೈಕರ್ ಐಶ್ವರ್ಯಾ ರಾಯ್, ಅಕ್ಷಯ್ ಬೈರಮುಡಿ ಈ ಬಾರಿ ಬಿಗ್‌ ಬಾಸ್‌ ಮನೆ ಸೇರಲಿದ್ದಾರೆ.

  English summary
  Bigg boss season 9 contestants Roopesh Shetty has celebrated Sanya Iyer birthday in special way,
  Saturday, September 24, 2022, 17:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X