Tulu Movie Circus: ಕಿರುತೆರೆಯಲ್ಲಿ ತುಳು ಸಿನಿಮಾ 'ಸರ್ಕಸ್'.. ವಾರಾಂತ್ಯದಲ್ಲಿ ತುಳು ವೀಕ್ಷಕರಿಗೆ ಭರ್ಜರಿ ಮನರಂಜನೆ!

By ಅನಿತಾ ಬನಾರಿ

ಕನ್ನಡ ಕಿರುತೆರೆ ಇತಿಹಾಸದಲ್ಲಿಯೇ 'ತುಳು' ಭಾಷೆಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿರುವ ಕನ್ನಡದ ಮೊದಲ ವಾಹಿನಿ 'ಸ್ಟಾರ್ ಸುವರ್ಣ'. ಅದಕ್ಕೆ 2010 ರಲ್ಲಿ ಸುವರ್ಣ ವಾಹಿನಿಯು ಪ್ರಸಾರ ಮಾಡುತ್ತಿದ್ದ "ಗೊತ್ತಾನಗ ಪೊರ್ತಾಂಡ್" ಎಂಬ 'ತುಳು' ಧಾರಾವಾಹಿಯೇ ಅದಕ್ಕೆ ಪ್ರಸಕ್ತ ಉದಾಹರಣೆ.

ಕನ್ನಡ ಸಿನಿಮಾ ಜಗತ್ತಿನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿದ 'ಕಾಂತಾರ' ಸಿನಿಮಾವನ್ನು ಕೂಡಾ 'ತುಳು' ಭಾಷೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಪ್ರಸಾರ ಮಾಡುವ ಮೂಲಕ ಮಗದೊಮ್ಮೆ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಈಗ ಈ ವರ್ಷ ತೆರೆಕಂಡ ಸೂಪರ್ ಹಿಟ್ ತುಳು ಸಿನಿಮಾ 'ಸರ್ಕಸ್' ಅನ್ನು ಪ್ರಸಾರ ಮಾಡಲು ಸ್ಟಾರ್ ಸುವರ್ಣ ಸಜ್ಜಾಗಿದೆ.

Roopesh Shetty Starrer Tulu Movie Circus will be telecasting in Star Suvarna

ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ನಾಯಕರಾಗಿ ನಟಿಸಿರುವ ಹಾಸ್ಯಮಯ ತುಳು ಸಿನಿಮಾ 'ಸರ್ಕಸ್' ಕೋಸ್ಟಲ್‌ವುಡ್‌ನಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿರುವುದು ಸಿನಿ ಪ್ರಿಯರಿಗೆ ತಿಳಿದೇ ಇದೆ. ಬರೋಬ್ಬರಿ 13 ದೇಶಗಳಲ್ಲಿ ಬಿಡುಗಡೆಗೊಂಡಿರುವ ಮೊದಲ ತುಳು ಸಿನಿಮಾ ಎಂಬ ಹೆಗ್ಗಳಿಕೆಗೆ 'ಸರ್ಕಸ್' ಸಿನಿಮಾ ಪಾತ್ರವಾಗಿದ್ದು ಇದೀಗ ಈ ಸಿನಿಮಾ ಕಿರುತೆರೆಯಲ್ಲಿ ಮೋಡಿ ಮಾಡಲಿದೆ.

ನಾಯಕ ರೂಪೇಶ್ ಶೆಟ್ಟಿ, ನಾಯಕಿ ರಚನಾ ರೈ ಹೊರತುಪಡಿಸಿ ತುಳುನಾಡಿನ ಹಾಸ್ಯ ದಿಗ್ಗಜರಾದ ಕುಸಲ್ದರಸೆ ನವೀನ್ ಡಿ ಪಡೀಲ್, ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್ ಹಾಗೂ ಉಮೇಶ್ ಮಿಜಾರ್ ರವರ ಕಾಮಿಡಿ ಪಂಚ್‌ಗೆ ಕಿರುತೆರೆ ಪ್ರೇಕ್ಷಕರಂತೂ ಎದ್ದು ಬಿದ್ದು ನಗುವುದರಲ್ಲಿ ಸಂಶಯವಿಲ್ಲ.

Roopesh Shetty Starrer Tulu Movie Circus will be telecasting in Star Suvarna

'ಸರ್ಕಸ್' ಸಿನಿಮಾದ ಟೈಟಲ್ ಸಾಂಗ್ ಅಂತೂ ಯುವ ಜನತೆಯ ಮನಗೆದ್ದಿದ್ದು ಮಾತ್ರವಲ್ಲಸೇ ಸೋಶಿಯಲ್ ಮೀಡಿಯಾದಲ್ಲಿಯೂ ಕೂಡಾ ಅತೀ ಹೆಚ್ಚು ವೈರಲ್ ಆಗಿತ್ತು. ಇದೀಗ ಮೊಟ್ಟ ಮೊದಲ ಬಾರಿಗೆ ಪ್ರೈಮ್ ಟೈಮ್‌ನಲ್ಲಿ ಪ್ರಸಾರವಾಗುತ್ತಿರುವ 'ಸರ್ಕಸ್' ಸಿನಿಮಾವು ಇದೇ ಸೆಪ್ಟೆಂಬರ್ 10 ರಂದು ಸಂಜೆ 6 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಒಟ್ಟಿನಲ್ಲಿ ತುಳು ಭಾಷೆಗೆ ಪ್ರಾಮುಖ್ಯತೆ ನೀಡುತ್ತಾ ಬರುತ್ತಿರುವ ಕಾರಣ ಸ್ಟಾರ್ ಸುವರ್ಣ ವಾಹಿನಿಯು ಕರಾವಳಿ ಜನತೆಗೆ ಇನ್ನಷ್ಟು ಹತ್ತಿರವಾಗುತ್ತಿದೆ. ತುಳುನಾಡಿನ ಸುಂದರ ಕಥೆಯನ್ನು ಒಳಗೊಂಡಿರುವ ಈ ಸೂಪರ್ ಹಿಟ್ ಸಿನಿಮಾವನ್ನು ಈ ವಾರಾಂತ್ಯದಲ್ಲಿ ಪ್ರಸಾರ ಮಾಡುತ್ತಿದ್ದು, ವೀಕ್ಷಕರಿಂದ ಪ್ರತಿಕ್ರಿಯೆ ಹೇಗಿರುತ್ತೆ? ಅನ್ನೋದು ನೋಡಬೇಕಿದೆ.

More from Filmibeat

English summary
Roopesh Shetty Starrer Tulu Movie Circus telecasting in Star Suvarna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X