ಜಗತ್ತು ಗೆದ್ದ 'RRR' ಸಾಯಿ ಪಲ್ಲವಿ ಮುಂದೆ ಮಂಡಿ ಊರಿತು!
ರಾಜಮೌಳಿ ನಿರ್ದೇಶಿಸಿ ಜೂ ಎನ್‌ಟಿಆರ್-ರಾಮ್ ಚರಣ್ ತೇಜ ನಟನೆಯ 'RRR' ಸಿನಿಮಾ ಈ ವರ್ಷದ ಸೂಪರ್-ಡೂಪರ್ ಹಿಟ್ ಸಿನಿಮಾಗಳಲ್ಲಿ ಒಂದು. ಭಾರತದಲ್ಲಿ ಕನ್ನಡದ 'ಕೆಜಿಎಫ್ 2' ಮುಂದೆ ಸೋತಿತಾದರೂ ನೆಟ್‌ಫ್ಲಿಕ್ಸ್ ಮೂಲಕ ವಿದೇಶದಲ್ಲಿ ಭಾರಿ ಸದ್ದು ಮಾಡಿತು ಈ ಸಿನಿಮಾ.
ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆದ ಬಳಿಕ ಹಾಲಿವುಡ್‌ನ ಖ್ಯಾತ ನಿರ್ದೇಶಕರು, ಬರಹಗಾರರೆಲ್ಲ 'RRR' ಬಗ್ಗೆ ಭಾರಿ ಪ್ರಶಂಸೆಗಳನ್ನು ಮಾಡಿದರು. ಈ ಬಾರಿ ಆಸ್ಕರ್‌ಗೂ ಈ ಸಿನಿಮಾ ನಾಮಿನೇಟ್ ಆಗುವ ಸಾಧ್ಯತೆ ಇದೆ.
ನೆಟ್‌ಫ್ಲಿಕ್ಸ್ ಸ್ಟ್ರೀಮಿಂಗ್ ಲೆಕ್ಕಾಚಾರದಲ್ಲಿ ಹಾಲಿವುಡ್ ಸಿನಿಮಾ, ವೆಬ್ ಸರಣಿಗಳನ್ನೇ ಹಿಂದಿಕ್ಕಿ ಟಾಪ್ ಟ್ರೆಂಡಿಂಗ್‌ನಲ್ಲಿದ್ದ 'RRR' ಸಿನಿಮಾ ಸಾಯಿ ಪಲ್ಲವಿಯ ಹಳೆಯ ಸಿನಿಮಾವನ್ನು ಸೋಲಿಸುವಲ್ಲಿ ವಿಫಲವಾಗಿದೆ! ನಂಬಲು ತುಸು ಕಷ್ಟ ಎನಿಸಿದರೂ ಇದು ನಿಜ.

ಟಿವಿಯಲ್ಲಿ ಮೋಡಿ ಮಾಡಲಿಲ್ಲ RRR
v

RRR ಸಿನಿಮಾ ಎಷ್ಟು ಟಿಆರ್‌ಪಿ ಗಳಿಸಿದೆ?
'RRR' ಸಿನಿಮಾ ಟಿವಿಯಲ್ಲಿ ಪ್ರಸಾರವಾದಾಗ 19.32 ಟಿಆರ್‌ಪಿ ಗಳಿಸಿತ್ತು. ತೆಲುಗಿನ ಕೆಲವು ಸಿನಿಮಾಗಳಿಗೆ ಹೋಲಿಸಿದರೆ ಇದು ಬಹಳ ಕಡಿಮೆ. ತೆಲುಗಿನಲ್ಲಿ ಈ ವರೆಗೆ ಅತಿ ಹೆಚ್ಚು ಟಿಆರ್‌ಪಿ ಗಳಿಸಿರುವ ದಾಖಲೆ ಇರುವುದು ಅಲ್ಲು ಅರ್ಜುನ್ ನಟನೆಯ 'ಅಲಾ ವೈಕುಂಟಪುರಂಲೋ' ಸಿನಿಮಾಕ್ಕೆ ಈ ಸಿನಿಮಾ ಮೊದಲ ಬಾರಿ ಟಿವಿಯಲ್ಲಿ ಪ್ರಸಾರವಾದಾಗ 29.4 ಟಿಆರ್‌ಪಿ ದಾಖಲಿಸಿತ್ತು. ಈ ಸಿನಿಮಾಕ್ಕೆ ಹೋಲಿಸಿದರೆ ಬಹಳ ಕಡಿಮೆ ಟಿಆರ್‌ಪಿಯನ್ನು RRR ಸಿನಿಮಾ ದಾಖಲಿಸಿದೆ.

'RRR'ಗಿಂತ ಹೆಚ್ಚು ಟಿಆರ್‌ಪಿ ಗಳಿಸಿದ ಸಿನಿಮಾಗಳಿವು
'ಅಲಾ ವೈಕುಂಟಪುರಂಲೋ' ಸಿನಿಮಾದ ಬಳಿಕದ ಸ್ಥಾನ ಮಹೇಶ್ ಬಾಬು ನಟನೆಯ 'ಸರಿಲೇರು ನೀಕೆವ್ವರು' ಸಿನಿಮಾಕ್ಕೆ ಧಕ್ಕಿದೆ. ಈ ಸಿನಿಮಾ 23.4 ಟಿಆರ್‌ಪಿ ಗಳಿಸಿದೆ. 'ಬಾಹುಬಲಿ 2' 22.7 ಟಿಆರ್‌ಪಿ, 'ಶ್ರೀಮಂತುಡು' 22.54 ಟಿಆರ್‌ಪಿ, 'ಪುಷ್ಪ' 22.54, 'ದುವ್ವಾಡ ಜಗನ್ನಾಥ' 21.7 ಟಿಆರ್‌ಪಿ, 'ಬಾಹುಬಲಿ 1' 21.54, ಸಾಯಿ ಪಲ್ಲವಿ ನಟನೆಯ 'ಫಿದಾ' ಸಿನಿಮಾ 21.30 ಹಾಗೂ ವಿಜಯ್ ದೇವರಕೊಂಡ ನಟನೆಯ 'ಗೀತಾ ಗೋವಿಂದಂ' ಸಿನಿಮಾ 20.08 ಟಿಆರ್‌ಪಿ ರೇಟಿಂಗ್ ಗಳಿಸಿದೆ. ಈ ಸಿನಿಮಾಗಳೆಲ್ಲದರ ಬಳಿಕದ ಸ್ಥಾನ RRRಗೆ ದೊರೆತಿದೆ.

ಬೇರೆ ಭಾಷೆಗಳಲ್ಲಿ ಪ್ರಸಾರವಾಗಿಲ್ಲ
ಈಗ ತೆಲುಗು ಭಾಷೆಯಲ್ಲಿ ಮಾತ್ರವೇ 'RRR' ಸಿನಿಮಾ ಟಿವಿಯಲ್ಲಿ ಪ್ರಸಾರವಾಗಿದೆ. ಇತರೆ ಭಾಷೆಗಳಲ್ಲಿ ಇನ್ನೂ ಪ್ರಸಾರವಾಗಬೇಕಿದೆ. ಹಾಗಾಗಿ ಬೇರೆ ಭಾಷೆಗಳಲ್ಲಿ ಈ ಸಿನಿಮಾ ಹೇಗೆ ಪ್ರದರ್ಶನ ಕಾಣಲಿದೆ ಎಂಬ ನಿರೀಕ್ಷೆ ಇದೆ. ಇದೇ ಸಮಯಕ್ಕೆ ಕನ್ನಡದ ಸೂಪರ್ ಡೂಪರ್ ಹಿಟ್ ಸಿನಿಮಾ 'ಕೆಜಿಎಫ್ 2' ಸಹ ಟಿವಿಯಲ್ಲಿ ಪ್ರಸಾರವಾಗಲಿದೆ. ಕೆಲವೇ ದಿನಗಳಲ್ಲಿ 'ಕೆಜಿಎಫ್ 2' ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಆ ಸಿನಿಮಾ ಎಷ್ಟು ಟಿಆರ್‌ಪಿ ಗಳಿಸಲಿದೆ ನೋಡಬೇಕಿದೆ.


Click it and Unblock the Notifications











