For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ವಿರುದ್ಧವೇ ಅಸಮಾಧಾನ ಹೊರಹಾಕಿದ ಬಿಗ್ ಬಾಸ್ ಸ್ಪರ್ಧಿ

  |

  ಹಿಂದಿ ಕಿರುತೆರೆಯ ಜನಪ್ರಿಯ ಶೋಗಳಲ್ಲಿ ಒಂದಾಗಿರುವ ಬಿಗ್ ಬಾಸ್ ರಿಯಾಲಿಟಿ ಶೋ ಪ್ರಾರಂಭವಾಗಿದೆ. ಕೊರೊನಾ ನಡುವೆಯೂ ಬಿಗ್ ಬಾಸ್ ಅನ್ನು ಯಶಸ್ವಿಯಾಗಿ ನಡೆಸಿಕೊಂಡು ಬರ್ತಿದ್ದಾರೆ ಆಯೋಜಕರು. ಈ ಬಾರಿ ಕೂಡ ನಟ ಸಲ್ಮಾನ್ ಖಾನ್ ಬಿಗ್ ಬಾಸ್ ನಿರೂಪಕರಾಗಿ ಕಾಣಿಸಿಕೊಂಡಿದ್ದಾರೆ.

  ಈ ಬಾರಿಯ ಬಿಗ್ ಬಾಸ್ ವೇದಿಕೆಯಲ್ಲೂ ಸಲ್ಮಾನ್ ಖಾನ್ ಕೋಪ, ಸ್ಪರ್ಧಿಗಳನ್ನು ತರಾಟೆಗೆ ತೆಗೆದುಕೊಳ್ಳುವುದು, ಸಮಾಷೆ, ಕಾಲೆಳೆಯುವುದು ಮುಂದುವರೆದಿದೆ. ಆದರೆ ಸಲ್ಮಾನ್ ಖಾನ್ ಬಿಗ್ ಮನೆಯಲ್ಲಿರುವ ಸ್ಪರ್ಧಿಯೊಬ್ಬರಿಗೆ ಹೇಳಿರುವ ಮಾತು ಈಗ ಬಿಗ್ ಬಾಸ್ ಮನೆಯ ಸ್ಪರ್ಧಿಯ ಕೋಪಕ್ಕೆ ಕಾರಣವಾಗಿದೆ. ಅಲ್ಲದೆ ಬಿಗ್ ಬಾಸ್ ಯಿಂದ ಹೊರನಡೆಯುವುದಾಗಿ ಹೇಳಿದ್ದಾರೆ.

  ಬಿಗ್‌ಬಾಸ್ ಮನೆಯಲ್ಲಿ ಗಾಯಕಿ ಮೇಲೆ ಹಲ್ಲೆ: ಮನೆ ಸುರಕ್ಷಿತವಿಲ್ಲ?ಬಿಗ್‌ಬಾಸ್ ಮನೆಯಲ್ಲಿ ಗಾಯಕಿ ಮೇಲೆ ಹಲ್ಲೆ: ಮನೆ ಸುರಕ್ಷಿತವಿಲ್ಲ?

  ಬಿಗ್ ಬಾಸ್ ಸೀಸನ್ 14ರಲ್ಲಿ ಸ್ಪರ್ಧಿಗಳಾಗಿ ರುಬಿನಾ ದಿಲೈಕ್ ಮತ್ತು ಅಭಿನವ್ ಶುಕ್ಲಾ ದಂಪತಿ ಭಾಗಿಯಾಗಿದ್ದಾರೆ. ಇತ್ತೀಚಿಗೆ ಸಲ್ಮಾನ್ ಅಭಿನವ್ ಬಗ್ಗೆ 'ಈ ಸಾಮಾನನ್ನು ನೀವು ತೆಗೆದುಕೊಂಡು ಬಂದಿದ್ದೀರಿ' ಎಂದು ರುಬಿನಾ ಬಳಿ ತಮಾಷೆ ಮಾಡಿದ್ದಾರೆ. ತನ್ನ ಗಂಡನನ್ನು ಸಲ್ಮಾನ್ ಖಾನ್ ಲಗೇಜ್ ಗೆ ಹೋಲಿಸಿದ್ದಾರೆ ಎಂದು ರುಬಿನಾ ಸಲ್ಮಾನ್ ಖಾನ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

  ಸಲ್ಮಾನ್ ಖಾನ್ ಮಾತಿನಿಂದ ಬೇಸರದಲ್ಲಿದ್ದ ರುಬಿನಾರನ್ನು ಗಮನಿಸಿದ ಬಿಗ್ ಬಾಸ್ ಕನ್ಫೆಶನ್ ರೂಮಿಗೆ ಕರೆಸಿದ್ದಾರೆ. ಆಗ ರುಬಿನಾ ಸಲ್ಮಾನ್ ಖಾನ್ ಮಾತಿನಿಂದ ಬೇಸರವಾಗಿರುವುದಾಗಿ ಹೇಳಿದ್ದಾರೆ. 'ಪತಿಯನ್ನು ಲಗೇಜ್ ಗೆ ಹೋಲಿಸಿರುವುದು ಇಷ್ಟವಾಗಿಲ್ಲ, ಗೌರವ ಇಲ್ಲದ ಕಡೆ ಇರಲು ಇಷ್ಟವಿಲ್ಲ' ಎಂದು ಹೇಳಿ ಬಿಗ್ ಬಾಸ್ ಮನೆಯಿಂದ ಹೊರನಡೆಯುವುದಾಗಿ ಹೇಳಿದ್ದಾರೆ.

  ಬಾಲ ನಟಿಯಾಗಿ ನಟಿಸಿದ್ದ ದೃಶ್ಯ ಲೀಕ್ ಆಗಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ನಟಿ | Sona Abhraham | Filmibeat

  ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಗ್ ಬಾಸ್, ಇಲ್ಲಿ ಯಾರನ್ನು ಆಗೌರವಗೊಳಿಸುವ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪತಿಗಾಗಿ ಸಲ್ಮಾನ್ ಖಾನ್ ರನ್ನು ಖಂಡಿಸಿದ ರುಬಿನಾಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಲ್ಮಾನ್ ಖಾನ್ ವಿರುದ್ಧ ಧೈರ್ಯವಾಗಿ ಮಾತನಾಡಿ ಬಿಗ್ ಬಾಸ್ ಮನೆಯಲ್ಲಿ ಇರುವ ರುಬಿನಾಗೆ ಶಹಭಾಷ್ ಎನ್ನುತ್ತಿದ್ದಾರೆ.

  English summary
  Bigg Boss 14 contestant Rubina Dilaik complaints about Salman khan's comments.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X