twitter
    For Quick Alerts
    ALLOW NOTIFICATIONS  
    For Daily Alerts

    ಈ ಸಲ ಕನ್ನಡದ ಕೋಟ್ಯಧಿಪತಿಯಲ್ಲಿ ಒಂದೇ ಒಂದು ಬದಲಾವಣೆ.!

    |

    ಕನ್ನಡದ ಕೋಟ್ಯಧಿಪತಿ ನಾಲ್ಕನೇ ಆವೃತ್ತಿ ಜೂನ್ 22ರಿಂದ ಕಲರ್ಸ್ ಕನ್ನಡದಲ್ಲಿ ಆರಂಭವಾಗುತ್ತಿದೆ. ಕಳೆದ ಮೂರು ಸೀಸನ್ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬಂದಿತ್ತು. ಇದೇ ಮೊದಲ ಬಾರಿಗೆ ಕಲರ್ಸ್ ಕನ್ನಡದಲ್ಲಿ ಕನ್ನಡದ ಕೋಟ್ಯಧಿಪತಿ ಶೋ ಟೆಲಿಕಾಸ್ಟ್ ಆಗ್ತಿದೆ.

    ಒಂದು ಚಾನಲ್ ನಿಂದ ಇನ್ನೊಂದು ಚಾನಲ್ ಗೆ ಒಂದು ಕಾರ್ಯಕ್ರಮ ಬದಲಾಗಿರುವುದು ಇದೇ ಮೊದಲಲ್ಲ. ಇದಕ್ಕೂ ಮುಂಚೆ ಬಿಗ್ ಬಾಸ್ ಶೋ ಕೂಡ ಸುವರ್ಣದಿಂದ ಕಲರ್ಸ್ ಕನ್ನಡಕ್ಕೆ ಶಿಫ್ಟ್ ಆಗಿತ್ತು. ಹೀಗೆ ವಾಹಿನಿ ಬದಲಾದಾಗ ಹಳೇ ಕಾರ್ಯಕ್ರಮವನ್ನ ಯಥಾವತ್ತಾಗಿ ಉಳಿಸಿಕೊಳ್ಳಬೇಕು ಎಂಬ ನಿಯಮ ಇಲ್ಲ.

    'ಕೋಟ್ಯಧಿಪತಿ' ಮಾತ್ರವಲ್ಲ ಪುನೀತ್ ಕೈಯಲ್ಲಿ ಇನ್ನು ಮೂರು ಟಿವಿ ಶೋ ಇದೆ.! 'ಕೋಟ್ಯಧಿಪತಿ' ಮಾತ್ರವಲ್ಲ ಪುನೀತ್ ಕೈಯಲ್ಲಿ ಇನ್ನು ಮೂರು ಟಿವಿ ಶೋ ಇದೆ.!

    ಆ ಶೋನಲ್ಲಿ ಯಾವುದೇ ರೀತಿಯ ಹೊಸ ನಿಯಮಗಳು, ಹೊಸ ಡಿಸೈನ್, ಹೊಸದಾಗಿ ಪ್ರಸೆಂಟ್ ಮಾಡಬಹುದು. ಈಗ ಕನ್ನಡದ ಕೋಟ್ಯಧಿಪತಿಯಲ್ಲಿ ಇಂತಹದ್ದೇ ಬದಲಾವಣೆ ಇದ್ಯಾ ಎಂಬ ಕುತೂಹಲ, ಅನುಮಾನ ಕಾಡ್ತಿದೆ. ಇದಕ್ಕೆ ಉತ್ತರಿಸಿದ ಕಲರ್ಸ್ ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಬದಲಾವಣೆ ಯಾವುದು ಇಲ್ಲ, ಹೊಸದೊಂದು ನಿಯಮ ಸೇರ್ಪಡೆಯಾಗಿದೆ ಎಂದಿದ್ದಾರೆ. ಹಾಗಿದ್ರೆ, ಯಾವುದು ಆ ಒಂದು ಹೊಸ ನಿಯಮ?

    ಹದಿನೈದು ಪ್ರಶ್ನೆಗಳು ಒಂದು ಕೋಟಿ.!

    ಹದಿನೈದು ಪ್ರಶ್ನೆಗಳು ಒಂದು ಕೋಟಿ.!

    ಕನ್ನಡದ ಕೋಟ್ಯಧಿಪತಿಯಲ್ಲಿ ಒಟ್ಟು ಹದಿನೈದು ಪ್ರಶ್ನೆಗಳನ್ನ ಕೇಳಲಾಗುತ್ತೆ. ಒಂದು ಸಾವಿರ ರೂಪಾಯಿಯಿಂದ ಹಿಡಿದು ಒಂದು ಕೋಟಿವರೆಗೂ ಪ್ರಶ್ನೆ ಇದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಕಳೆದ ಮೂರು ಆವೃತ್ತಿಯಂತೆ ಹಳೇ ಫಾರ್ಮೆಟ್ ಈಗಲೂ ಮುಂದುವರಿಯಲಿದೆ.

    ಪುನೀತ್ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ಒಪ್ಪಿಕೊಂಡ ಕಾರಣ ಬಹಿರಂಗ ಪುನೀತ್ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ಒಪ್ಪಿಕೊಂಡ ಕಾರಣ ಬಹಿರಂಗ

    ಫಾಸ್ಟೆಸ್ಟ್ ಫಿಂಗರ್ ಆಯ್ಕೆ

    ಫಾಸ್ಟೆಸ್ಟ್ ಫಿಂಗರ್ ಆಯ್ಕೆ

    ಕನ್ನಡದ ಕೋಟ್ಯಧಿಪತಿಯ ಹಾಟ್ ಸೀಟ್ ಗೆ ಆಯ್ಕೆ ಮಾಡುವ ವಿಧಾನದಲ್ಲೂ ಯಾವುದೇ ಬದಲಾವಣೆ ಇಲ್ಲ. ಫಾಸ್ಟೆಸ್ಟ್ ಫಿಂಗರ್ ಮಾದರಿಯಲ್ಲಿ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುವುದು.ಭೂಗೋಳ ಶಾಸ್ತ್ರ, ರಾಜಕೀಯ ಶಾಸ್ತ್ರ, ಸಿನಿಮಾಗಳ ಕುರಿತಂತೆ ಪ್ರಶ್ನೆಗಳನ್ನ ಇಲ್ಲಿ ಕೇಳಲಾಗುವುದು.

    ನಾಲ್ಕು ಲೈಫ್ ಲೈನ್.!

    ನಾಲ್ಕು ಲೈಫ್ ಲೈನ್.!

    ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಒಟ್ಟು ಮೂರು ಲೈಫ್ ಲೈನ್ ಬಳಸುವ ಅವಕಾಶ ಇತ್ತು. ಈ ಬಾರಿಯ ಸೇರ್ಪಡೆಯಾಗಿರುವ ನಿಯಮ ಏನಪ್ಪಾ ಅಂದ್ರೆ ಮೂರು ಬದಲಾಗಿ ನಾಲ್ಕು ಲೈಫ್ ಲೈನ್ ಮಾಡಲಾಗಿದೆಯಂತೆ. ಆಡಿಯೆನ್ಸ್ ಪೋಲ್, ಫೋನೋ ಎ ಫ್ರೆಂಡ್ ಮತ್ತು ಫಿಫ್ಟಿ-ಫಿಫ್ಟಿ ಎಂಬ ಮೂರು ಲೈಫ್ ಲೈನ್ ಇತ್ತು. ಇದನ್ನ ಯಾವಾಗ ಬೇಕಾದರೂ ಬಳಸಿಕೊಳ್ಳಬಹುದಿತ್ತು. ಆದರೆ ಈ ಸಲ ನಾಲ್ಕನೇ ಲೈಫ್ ಲೈನ್ ಕೂಡ ಇದೆಯಂತೆ.

    ನಾಲ್ಕನೇ ಲೈಫ್ ಲೈನ್ ಬಳಸುವುದು ಹೇಗೆ?

    ನಾಲ್ಕನೇ ಲೈಫ್ ಲೈನ್ ಬಳಸುವುದು ಹೇಗೆ?

    ನಾಲ್ಕನೇ ಲೈಫ್ ಲೈನ್ ಹೆಸರು ಡಬಲ್ ಡಿಪ್ ಎಂದು ಹೇಳಲಾಗ್ತಿದೆ. ಇದನ್ನ 3.5 ಲಕ್ಷ ಗೆದ್ದ ಮೇಲಷ್ಟೇ ಬಳಸಬಹುದಂತೆ. ಈ ಬಗ್ಗೆ ಹೆಚ್ಚಿನ ವಿವರ ನೀಡಿಲ್ಲ. ಸದ್ಯಕ್ಕೆ ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಕೊಟ್ಟಿರುವ ನಾಲ್ಕು ಆಯ್ಕೆಗಳಲ್ಲಿ ಎರಡು ಆಯ್ಕೆಗಳನ್ನ ತೆಗೆಯಲಾಗುತ್ತೆ. ಉಳಿದ ಎರಡಲ್ಲಿ ಸರಿಯಾದ ಉತ್ತರ ಯಾವುದು ಎಂದು ಗುರುತಿಸಿಬೇಕು. ಇದನ್ನ ಬಿಟ್ಟರೇ ಬೇರೆ ಏನು ಹೊಸತನ ಈ ಶೋನಲ್ಲಿ ಇಲ್ಲ. ಹೊಸ ಹೊಸ ಪ್ರಶ್ನೆಗಳು, ಪುನೀತ್ ಅವರು ಇರ್ತಾರೆ ಎಂಬುದೇ ಪ್ರಮುಖ ಆಕರ್ಷಣೆ.

    English summary
    Kannadada Kotyadhipati session 4 starts from june 22nd. puneeth rajkumar hosting the fourth edition of Kannadada Kotyadhipati.
    Wednesday, June 19, 2019, 17:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X