Ginirama: ಮತ್ತೊಂದು ಜನಪ್ರಿಯ ಧಾರಾವಾಹಿ ಮುಕ್ತಾಯ? ಶೀಘ್ರದಲ್ಲಿಯೇ 'ಗಿಣಿರಾಮ' ನಿಗೆ ಬ್ರೇಕ್

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಜೊತೆಜೊತೆಯಲಿ' ಶೀಘ್ರದಲ್ಲಿ ಮುಕ್ತಾಯಗೊಳ್ಳಲಿದೆ. ಕಿರುತೆರೆ ವೀಕ್ಷಕರು ಜನಪ್ರಿಯ ಧಾರಾವಾಹಿಗಳು ಹೀಗೆ ಒಂದರ ಹಿಂದೊಂದು ಎಂಡ್ ಆಗುತ್ತಿರೋ ಶಾಕಿಂಗ್ ಸುದ್ದಿಯನ್ನು ಅರಗಿಸಿಕೊಳ್ಳಬೇಕಿದೆ. ಈಗ ಮಗದೊಂದು ಜನಪ್ರಿಯ ಧಾರಾವಾಹಿ ಮುಕ್ತಾಯಗೊಳ್ಳಲಿದೆ.

ಅದೇನೆಂದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಉತ್ತರ ಕನ್ನಡ ಸೊಬಗಿನ 'ಗಿಣಿರಾಮ' ಧಾರಾವಾಹಿ ತನ್ನ ಪ್ರಸಾರ ನಿಲ್ಲಿಸಲಿದೆ. ಈಗಾಗಲೇ ಧಾರಾವಾಹಿ ತಂಡ ಕ್ಲೈಮ್ಯಾಕ್ಸ್ ಸಂಚಿಕೆಯ ಶೂಟಿಂಗ್ ನ ತಯಾರಿಯಲ್ಲಿದ್ದು ಈ ಧಾರಾವಾಹಿ ಆದಷ್ಟು ಬೇಗ ಮುಕ್ತಾಯ ಕಂಡರೆ ಅದರಲ್ಲಿ ಆಶ್ಚರ್ಯವೇನಿಲ್ಲ.

Rumour is that Another Kannada Serial Ginirama will be ending soon

ಟಿ ಆರ್ ಪಿ ಕಡಿಮೆಯೇ ಕಾರಣ

'ಗಿಣಿರಾಮ' ಧಾರಾವಾಹಿಯಲ್ಲಿ ಕನ್ನಡತನ ಎದ್ದು ಕಾಣುತ್ತಿತ್ತು. ಉತ್ತರ ಕರ್ನಾಟಕದ ಭಾಷೆಯ ಶೈಲಿಯ ಮನರಂಜನೆಯನ್ನು ನೀಡಿತ್ತು. ಹೀಗಾಗಿ ಈಗಾಗಲೇ ಯಶಸ್ವಿಯಾಗಿ 740 ಸಂಚಿಕೆ ಪೂರೈಸಿದೆ. ಆದ್ರೀಗ 'ಗಿಣಿರಾಮ' ಧಾರಾವಾಹಿಯು ಟಿ ಆರ್ ಪಿ ಕಡಿಮೆಯಾಗುತ್ತಿದೆ. ಈ ಕಾರಣದಿಂದಾಗಿ ಇನ್ನು ಮುಂದೆ ತನ್ನ ಪ್ರಸಾರ ನಿಲ್ಲಿಸುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಧಾರಾವಾಹಿಯ ತಂಡದವರಾಗಲೀ, ವಾಹಿನಿಯವರಾಗಲೀ ಈ ಬಗ್ಗೆ ಯಾವುದೇ ರೀತಿಯ ಅಧಿಕೃತ ಮಾಹಿತಿಯನ್ನು ಹೊರಹಾಕಿಲ್ಲ.

'ಮರಾಠಿ' ಧಾರಾವಾಹಿಯೊಂದರ ರಿಮೇಕ್

ಆಗಸ್ಟ್ 17, 202೦ರಂದು 'ಗಿಣಿರಾಮ' ತನ್ನ ಪಯಣ ಶುರು ಮಾಡಿತ್ತು. ಈಗ' ಗಿಣಿರಾಮ'ನಿಗೆ ಇದೀಗ ಮೂರರ ಹರೆಯ. 'Jeev Zala Yeda Pisa' ಎಂಬ ಮರಾಠಿ ಧಾರಾವಾಹಿಯ ರಿಮೇಕ್‌ ಕನ್ನಡದ ಈ 'ಗಿಣಿರಾಮ'. ಹಾಗಿದ್ದರೂ, ಕನ್ನಡದ ನೆಟಿವಿಟಿಗೆ ತಕ್ಕಂತೆ ಕಥೆಯಲ್ಲಿ ಬದಲಾವಣೆ ಮಾಡಿಕೊಂಡು ಧಾರಾವಾಹಿಯನ್ನು ಪ್ರಸಾರ ಮಾಡಲಾಗಿತ್ತು.

Rumour is that Another Kannada Serial Ginirama will be ending soon

'ಗಿಣಿರಾಮ'ದ ಕಥಾಹಂದರವೇನು?

ಬೇರೆಯವರು ಮಾಡಿದ ಮೋಸಕ್ಕೆ ಒಳಗಾಗಿ ನಾಯಕಿ ಮಹತಿ ಮದುವೆಯಾಗಬೇಕಿದ್ದ ಹುಡುಗ ಸಾವನ್ನಪ್ಪುತ್ತಾನೆ. ಮೊಟ್ಟ ಮೊದಲಿನಿಂದಲೂ ತಾನು ದ್ವೇಷಿಸುತ್ತಿದ್ದ ನಾಯಕ ಶಿವರಾಮ್‌ನಿಂದ ತಾಳಿ ಕಟ್ಟಿಸಿಕೊಳ್ಳುವ ಪರಿಸ್ಥಿತಿ ಮಹತಿಗೆ ಬರುತ್ತದೆ. ಇಷ್ಟವಿಲ್ಲದೆ ಅವರಿಬ್ಬರೂ ಒಂದಾಗುತ್ತಾರೆ. ಮುಂದೆ ಮಹತಿ ಹಾಗೂ ಶಿವರಾಮ್ ಅವರ ನಡುವೆ ಸ್ನೇಹ ಬೆಳೆದು ಅದು ಪ್ರೀತಿಯಾಗಿ ಬದಲಾಗುತ್ತದೆ.

ಇದರ ನಡುವೆ ಆಯಿಸಾಹೇಬ ಎಂದರೆ ದೇವರಕ್ಕಿಂತಲೂ ಜಾಸ್ತಿ ಎಂದೇ ಭಾವಿಸುತ್ತಿದ್ದ ಶಿವರಾಮ್‌ಗೆ ಆಯಿಸಾಹೇಬ್‌ನ ಕರಾಳಮುಖವನ್ನು ಕೂಡಾ ಮಹತಿ ಪರಿಚಯಿಸುತ್ತಾಳೆ. ಇದೀಗ ಧಾರಾವಾಹಿ ಮುಗಿಯುವ ಹಂತಕ್ಕೆ ಬಂದಿದ್ದು ಆಯಿಸಾಹೇಬರ ಮಗಳು ಮಹತಿ ಎಂಬ ಸುದ್ದಿ ಹೊರಬರಲಿದೆ.

More from Filmibeat

English summary
Rumour is that Another Kannada Serial Ginirama will be ending soon, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X