ರನ್ನರ್ ಅಪ್ To ಗೋಲ್ಡನ್ ಗರ್ಲ್ ; 20 ಲಕ್ಷ ಮೌಲ್ಯದ ಚಿನ್ನ ಖರೀದಿ ಮಾಡಿದ ಬಿಗ್ ಬಾಸ್ ರಕ್ಷಿತಾ
''ಬಿಗ್ ಬಾಸ್'' ಕೇವಲ ಕಾರ್ಯಕ್ರಮ ನಡೆಸಿಕೊಡುವ ಸ್ಟಾರ್ ನಿರೂಪಕರಿಗೆ ಮಾತ್ರ ಚಿನ್ನದ ಮೊಟ್ಟೆ ಇಡುವ ಕೋಳಿ ಅಲ್ಲ. ಬದಲಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಫರ್ಧಿಗಳಿಗೆ ಕೂಡ ಇಲ್ಲಿ ಭಾರೀ ಹಣವನ್ನು ನೀಡಲಾಗುತ್ತೆ. ಕೆಲವರು ಇಲ್ಲಿ ವಾರಕ್ಕೆ ಲಕ್ಷ ಎಣಿಸಿದರೆ ಇನ್ನೂ ಕೆಲವರ ಸಂಭಾವನೆ ವಾರದ ಲೆಕ್ಕ ತಪ್ಪಿ ಹೋಗುವಷ್ಟಿರುತ್ತೆ. ''ಬಿಗ್ ಬಾಸ್''ನಲ್ಲಿ ಹೇಗಾದರೂ ಮಾಡಿ ಭಾಗವಹಿಸಬೇಕು ಎಂದು ಹಲವರು ಕನಸು ಕಾಣಲು ಇದು ಕೂಡ ಪ್ರಮುಖ ಕಾರಣ.
ಇಂತಹ ''ಬಿಗ್ ಬಾಸ್'' ಕಾರ್ಯಕ್ರಮದಲ್ಲಿ ಕಳೆದ ಬಾರಿ ರನ್ನರ್ ಅಪ್ ಆಗಿದ್ದ ರಕ್ಷಿತಾ ಸದ್ಯ ₹20 ಲಕ್ಷದ ಚಿನ್ನವನ್ನು ಖರೀದಿ ಮಾಡಿದ್ದಾರೆ. ಹೌದು, ಅಸಲಿಗೆ ಗಿಲ್ಲಿಗೆ ತೀವೃ ಪೈಪೋಟಿಯನ್ನು ನೀಡಿದ ರಕ್ಷಿತಾ ರನ್ನರ್ ಅಪ್ ಆಗಿ ಹೊರ ಹೊಮ್ಮಿದ ನಂತರ ₹5 ಲಕ್ಷ ಹಣ ಸಿಕ್ಕಿತ್ತು. ಆದರೆ ಇದೇ ಸಮಯದಲ್ಲಿ ₹20 ಲಕ್ಷದ ವೋಚರ್ ಕೂಡ ರಕ್ಷಿತಾ ಅವರನ್ನು ಅರಸಿಕೊಂಡು ಬಂದಿತ್ತು.

ಗ್ರಾಂಡ್ ಫಿನಾಲೆ ವೇದಿಕೆಯಲ್ಲಿ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕರಾದ ಟಿ. ಎ. ಶರವಣ ₹20 ಲಕ್ಷದ ಗಿಫ್ಟ್ ವೋಚರ್ ನ ರಕ್ಷಿತಾಗೆ ನೀಡಿದ್ದರು. ಈ ಮೂಲಕ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು. ಈಗ ರಕ್ಷಿತಾ ತಮಗೆ ಸಿಕ್ಕಿದ್ದ ₹20 ಲಕ್ಷ ಮೌಲ್ಯದ ಗಿಫ್ಟ್ ವೋಚರ್ ಉಪಯೋಗಿಸಿದ್ದಾರೆ.
ಅಂದ್ಹಾಗೇ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಗಿಲ್ಲಿ ಅವರನ್ನು ಒಳಗೊಂಡಂತೆ ರಘು, ಕಾವ್ಯ, ರಕ್ಷಿತಾ ಬೆಂಗಳೂರಿನ ಕನಕಪುರ ರಸ್ತೆಯ ರಘುವನಹಳ್ಳಿಯಲ್ಲಿ ಟಿ.ಎ. ಶರವಣ ಅವರ ಮಾಲೀಕತ್ವದ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ ನೂತನ ಮಳಿಗೆ ಉದ್ಘಾಟನಾ ಸಮಾರಂಭಕ್ಕೆ ತೆರಳಿದ್ದರು. ಇದೇ ಸಮಯದಲ್ಲಿ ರಕ್ಷಿತಾ ಅಲ್ಲಿಯೇ ತಮ್ಮ ಗಿಫ್ಟ್ ವೋಚರ್ ಬಳಸಿ ಚಿನ್ನವನ್ನು ಖರೀದಿ ಮಾಡಿರುವ ಸಾಧ್ಯತೆ ಇದೆ.
ಇನ್ನು ಚಿನ್ನ ಖರೀದಿ ಮಾಡಿದ ನಂತರ ತಮ್ಮ ಖುಷಿಯನ್ನು ಹಂಚಿಕೊಂಡಿರುವ ರಕ್ಷಿತಾ ಚಿನ್ನ ಖರೀದಿ ಮಾಡಲು ನಾನು ಇವತ್ತು ಸಾಯಿ ಗೋಲ್ಡ್ ಪ್ಯಾಲೇಸ್‌ಗೆ ಬಂದಿದ್ದೇನೆ,ರನ್ನರ್ ಅಪ್ ಆಗಿದ್ದಕ್ಕೆ ಸಿಕ್ಕ 20 ಲಕ್ಷ ರೂ. ಮೌಲ್ಯದ ವೋಚರ್ ನನಗೆ ಸಿಕ್ಕಿತ್ತು. ನಾನು ಅದನ್ನು ಈಗ ಬಳಸಿದ್ದೇನೆ ಎಂದು ಸಂಭ್ರಮಿಸಿದ್ದಾರೆ. ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕರಾದ ಟಿ. ಎ. ಶರವಣ ಅವರಿಗೆ ಧನ್ಯವಾದವನ್ನು ಕೂಡ ಹೇಳಿದ್ದಾರೆ.
ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರಕ್ಷಿತಾ ಅವರ ಈ ಚಿನ್ನದ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಹಲವರು ರಕ್ಷಿತಾ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅದೃಷ್ಟ ದೇವತೆ..ಇನ್ಮುಂದೆ ಶ್ರೀ ಸಾಯಿ ಪ್ಯಾಲೇಸ್ ಅದೃಷ್ಟ ತೆಗೆದಂತೆ.. ಇವಳು ತುಂಬಾ ಅದೃಷ್ಟ..ಕೃಷ್ಣ ಸುಂದರಿ ಬುದ್ಧಿವಂತೆ ನಮ್ಮ ರಕ್ಷಿತಾ.. ಎಂದೆಲ್ಲ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಹಲವರು ಹಾರ್ಟ್ ಎಮೋಜಿಯನ್ನು ಕಳುಹಿಸುವ ಮೂಲಕ ತಮ್ಮ ಅಭಿಮಾನದ ಪ್ರದರ್ಶನವನ್ನು ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇನ್ನುಳಿದಂತೆ ಕೆಲ ದಿನಗಳ ಹಿಂದೆಯಷ್ಟೇ ತಮ್ಮ ''ಬಿಗ್ ಬಾಸ್'' ಪ್ರಯಾಣ ನೆನೆದು ರಕ್ಷಿತಾ ಭಾವುಕರಾಗಿದ್ದರು. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಲೇಖನ ಬರೆದಿದ್ದರು. ನನ್ನ ಜೀವನದಲ್ಲಿ ಎಂದಿಗೂ ಮರೆತೇ ಹೋಗಲಾರದ ದಿನ - ಬಿಗ್ ಬಾಸ್ ಮನೆಯಲ್ಲಿನ ಕೊನೆಯ ದಿನ. ಮೂರು ತಿಂಗಳುಗಳ ಕಾಲ ಎಲ್ಲವೂ ಇತ್ತು - ಸಂತೋಷ, ಕಣ್ಣೀರು, ನೋವು, ಅಸೂಯೆ, ಪ್ರೀತಿ ಮತ್ತು ಬೆಳವಣಿಗೆ. ಸ್ಪರ್ಧೆಯಾಗಿ ಆರಂಭವಾದ ಈ ಮನೆ, ಸಮಯದೊಂದಿಗೆ ನಿಜವಾದ ಮನೆಯಾಗಿಬಿಟ್ಟಿತು. ಭಾವನೆಗಳು, ಬಾಂಧವ್ಯ ಮತ್ತು ಅನೇಕ ನೆನಪುಗಳಿಂದ ಕಟ್ಟಿದ ಮನೆ ಅದು ಎಂದು ರಕ್ಷಿತಾ ಶೆಟ್ಟಿ ಬರೆದುಕೊಂಡಿದ್ದರು.


Click it and Unblock the Notifications











