ಅತಿ ಹೆಚ್ಚು ಸಂಭಾವನೆ ಪಡೆವ ಭಾರತದ ಟಿವಿ ತಾರೆ ಈಕೆ!

ಸಿನಿಮಾ ನಟ-ನಟಿಯರ ಸಂಭಾವನೆ ಅಷ್ಟು ಕೋಟಿಯಂತೆ ಇಷ್ಟು ಕೋಟಿಯಂತೆ ಎಂಬ ಸುದ್ದಿಗಳು ಆಗಾಗ್ಗೆ ಪ್ರಸಾರವಾಗುತ್ತಿರುತ್ತವೆ. ಸಾಮಾಜಿಕ ಜಾಲತಾಣದಲ್ಲಿಯೂ ಕಾಣಿಸಿಕೊಳ್ಳುತ್ತವೆ. ಆದರೆ ಕಿರುತೆರೆ ನಟ-ನಟಿಯರ ಸಂಭಾವನೆ ಬಗ್ಗೆ ವಿಶೇಷ ಚರ್ಚೆ ನಡೆಯುವುದು ತೀರ ಅಪರೂಪ.

ಸಿನಿಮಾಗಳಿಗೆ ಅದರಲ್ಲೂ ಸ್ಟಾರ್ ನಟ-ನಟಿಯರಿಗೆ ಹೋಲಿಸಿದರೆ ಟಿವಿಯ ಸ್ಟಾರ್ ನಟ-ನಟಿಯರ ಸಂಭಾವನೆ ಕಡಿಮೆಯೇ. ಹಾಗೆಂದು ಕಳಪೆ ಸಂಭಾವನೆಯನ್ನೇನೂ ಅವರು ಪಡೆಯುವುದಿಲ್ಲ. ಒಂದು ಧಾರಾವಾಹಿ ನಡೆವ ಅಷ್ಟೂ ದಿನದ ಸಂಭಾವನೆ ಒಟ್ಟು ಲೆಕ್ಕ ಮಾಡಿದರೆ ಸಿನಿಮಾ ನಟ-ನಟಿಯರ ಸಂಭಾವನೆಗಿಂತಲೂ ಹೆಚ್ಚಿನ ಸಂಭಾವನೆಯನ್ನೇ ಅವರು ಪಡೆದಿರುತ್ತಾರೆ!

ಟಿವಿ ಲೋಕದಲ್ಲಿ ಅದರದ್ದೇ ಆದ ಸ್ಟಾರ್ ನಟ ಸ್ಟಾರ್ ನಟಿಯರಿದ್ದಾರೆ. ಸಿನಿಮಾದಂತೆ ಅತಿಯಾದ ಪುರುಷ ಪಾರುಪತ್ಯ ಇಲ್ಲದ ಟಿವಿ ಜಗತ್ತಿನಲ್ಲಿ ನಟಿಯರೇ ಹೆಚ್ಚು ಜನಪ್ರಿಯತೆ ಹೊಂದಿದ ಕಲಾವಿದರು ಎನಿಸಿಕೊಂಡಿದ್ದಾರೆ. ಹಾಗಿದ್ದರೆ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ಟಿವಿ ಕಲಾವಿದೆ ಅಥವಾ ಕಲಾವಿದ ಯಾರು? ಇಲ್ಲಿದೆ ಉತ್ತರ.

ಹಿಂದಿ ಧಾರಾವಾಹಿ ನಟಿ ರೂಪಾಲಿ ಗಂಗೂಲಿ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ಟಿವಿ ನಟಿ ಎಂಬ ಖ್ಯಾತಿ ಗಳಿಸಿದ್ದಾರೆ. ಈ ಹಿಂದಿನ ಹಲವು ಖ್ಯಾತನಾಮರನ್ನು ರೂಪಾಲಿ ಗಂಗೂಲಿ ಹಿಂದಿಕ್ಕಿದ್ದಾರೆ. ಅವರು ತಮ್ಮ ಹೊಸ ಧಾರಾವಾಹಿ 'ಅನುಪಮಾ'ಗಾಗಿ ಭಾರಿ ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆಯುತ್ತಿದ್ದಾರೆ.

ರೂಪಾಲಿ ಪಡೆಯುತ್ತಿರುವ ಸಂಭಾವನೆ ಎಷ್ಟು?

ರೂಪಾಲಿ ಪಡೆಯುತ್ತಿರುವ ಸಂಭಾವನೆ ಎಷ್ಟು?

ಈ ಹಿಂದೆ ಕೆಲವು ಹಿಟ್ ಧಾರಾವಾಹಿಗಳನ್ನು ನೀಡಿರುವ ರೂಪಾಲಿ ಗಂಗೂಲಿ ಇದೀಗ 'ಅನುಪಮಾ' ಹೆಸರಿನ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಧಾರಾವಾಹಿಯ ಒಂದು ಎಪಿಸೋಡ್‌ಗೆ ಅಥವಾ ಒಂದು ದಿನಕ್ಕೆ ಬರೋಬ್ಬರಿ 3 ಲಕ್ಷ ರುಪಾಯಿ ಹಣವನ್ನು ಸಂಭಾವನೆಯಾಗಿ ಪಡೆಯುತ್ತಿದ್ದಾರೆ. ಇಷ್ಟು ದೊಡ್ಡ ಮೊತ್ತದ ಸಂಭಾವನೆಯನ್ನು ಭಾರತದ ಇನ್ಯಾವ ಟಿವಿ ಸ್ಟಾರ್ ಸಹ ಪಡೆಯುತ್ತಿಲ್ಲ.

ದಿಗ್ಗಜರನ್ನು ಹಿಂದಿಕ್ಕಿದ ರೂಪಾಲಿ

ದಿಗ್ಗಜರನ್ನು ಹಿಂದಿಕ್ಕಿದ ರೂಪಾಲಿ

ಈ ಹಿಂದೆ ನಟರಾದ ರಾಮ್ ಕಪೂರ್, ರೋನಿತ್ ರಾಯ್, ಸುಶಾಂತ್ ಸಿಂಗ್ ರಜಪೂತ್ (ದಿವಂಗತ) ಅವರುಗಳು ಅತಿಹೆಚ್ಚು ಸಂಭಾವನೆ ಪಡೆವ ನಟರಾಗಿದ್ದರು. ರೂಪಾಯಿ ಸಹ ಈ ಹಿಂದೆ ದಿನವೊಂದಕ್ಕೆ 1.50 ಲಕ್ಷ ರುಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಿದ್ದರು. ಆದರೆ ಸತತ ಹಿಟ್ ಧಾರಾವಾಹಿಗಳು, ಹಾಗೂ ಟಿವಿ ಪ್ರೇಕ್ಷಕರಿಗೆ ವಿಶೇಷ ಪ್ರೇಮಗಳಿಸಿರುವ ರೂಪಾಲಿ ತಮ್ಮ ಸಂಭಾವನೆಯನ್ನು ದ್ವಿಗುಣಗೊಳಿಸಿಕೊಂಡಿದ್ದಾರೆ.

44 ವರ್ಷ ವಯಸ್ಸಿನ ರೂಪಾಲಿ ಗಂಗೂಲಿ

44 ವರ್ಷ ವಯಸ್ಸಿನ ರೂಪಾಲಿ ಗಂಗೂಲಿ

ರೂಪಾಲಿ ಗಂಗೂಲಿಗೆ ಈಗ 44 ವರ್ಷ ವಯಸ್ಸು. ಟಿವಿ ಉದ್ಯಮದಲ್ಲಿ ರೂಪಾಲಿಗಿಂತಲೂ ಕಿರಿಯರು, ಸೌಂದರ್ಯವತಿಯರು ಹಲವರಿದ್ದಾರೆ ಆದರೆ ರೂಪಾಲಿಗೆ ಇರುವ ಜನಪ್ರಿಯತೆ, ಪ್ರೇಕ್ಷಕರೊಟ್ಟಿಗೆ ಆಪ್ತ ಬಂಧ ಇನ್ಯಾವ ಹೊಸ ನಟಿಯರಿಗೆ ಇಲ್ಲ. ಹಾಗಾಗಿ ರೂಪಾಲಿ ಟಿವಿ ಉದ್ಯಮದ ಬಹು ಜನಪ್ರಿಯ ತಾರೆ ಎನಿಸಿಕೊಂಡಿದ್ದಾರೆ. ಹಲವು ಹಿರಿಯ ಹಾಗೂ ಕಿರಿಯ ಟಿವಿ ತಾರೆಗಳನ್ನು ಹಿಂದಿಕ್ಕಿ ರೂಪಾಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟಿ ಎನಿಸಿಕೊಂಡಿದ್ದಾರೆ.

ಹಲವು ಸೂಪರ್ ಹಿಟ್ ಧಾರಾವಾಹಿಗಳಲ್ಲಿ ನಟನೆ

ಹಲವು ಸೂಪರ್ ಹಿಟ್ ಧಾರಾವಾಹಿಗಳಲ್ಲಿ ನಟನೆ

1985 ರಲ್ಲಿ ಸಿನಿಮಾದಲ್ಲಿ ನಟಿಸಲು ಆರಂಭಿಸಿದ ರೂಪಾಲಿಗೆ ಅದೃಷ್ಟ ಖುಲಾಯಿಸಿದ್ದು ಮಾತ್ರ ಧಾರಾವಾಹಿ ಉದ್ಯಮದಲ್ಲಿ. 2000 ನೇ ಇಸವಿಯಲ್ಲಿ ಪ್ರಸಾರವಾದ 'ಸುಕನ್ಯ' ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದ ರೂಪಾಲಿ ಬಳಿಕ 2003ರಲ್ಲಿ ಪ್ರಸಾರವಾದ 'ಸಂಜೀವಿನಿ' ಹೆಸರಿನ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಬಳಿಕ ಸೂಪರ್ ಹಿಟ್ ಧಾರಾವಾಹಿ 'ಸಾರಾಭಾಯಿ v/s ಸಾರಾಭಾಯಿ', 'ಬಾ ಬಹು ಔರ್ ಬೇಬಿ', 'ಕಹಾನಿ ಘರ್‌ ಘರ್‌ ಕಿ', 'ಸಪ್ನಾ ಬಾಬುಲ್‌ ಕ ಬಿದಾಯಿ', 'ಅದಾಲತ್', 'ಪರ್ವರಿಶ್' 'ಸಾರಾಭಾಯಿ v/s ಸಾರಾಭಾಯಿ 2', 'ಯೆ ರಿಶ್ತಾ ಕ್ಯಾ ಕೆಹಲಾತಾ ಹೈ', 'ಕಸೌತಿ ಜಿಂದಗಿ ಕಿ' ಈಗ 'ಅನುಪಮಾ' ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Actress Rupali Ganguly became highest paid TV actress of India. She charging 3 lakh rs per day for new serial Anupama.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X