'ಪಾರು' ಧಾರಾವಾಹಿಗೆ ಬಂದ 'ಮಿಲಿಟರಿ ಮಾವ' ಎಸ್.ನಾರಾಯಣ್.!

Recommended Video

ಸ್ಮಾಲ್ ಸ್ಕ್ರೀನ್ ನಲ್ಲಿ ಮಿಂಚೋಕೆ ರೆಡಿಯಾದ್ರು ಎಸ್ ನಾರಾಯಣ್ | S NARAYAN | PAARU | ONEINDIA KANNADA

ಕನ್ನಡ ಚಿತ್ರರಂಗಕ್ಕೆ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ನಟ, ನಿರ್ದೇಶಕ, ನಿರ್ಮಾಪಕ, ಗೀತ ಸಾಹಿತಿ 'ಕಲಾ ಸಾಮ್ರಾಟ್' ಎಸ್.ನಾರಾಯಣ್. ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಎಸ್.ನಾರಾಯಣ್ 'ಮನಸು ಮಲ್ಲಿಗೆ' ಸಿನಿಮಾ ಬಿಡುಗಡೆ ಆದ್ಮೇಲೆ ಗಾಂಧಿನಗರದಲ್ಲಿ ಕಾಣಿಸಿಕೊಂಡಿದ್ದು ಅಪರೂಪ.

ಹಾಗಾದ್ರೆ, ಎಸ್.ನಾರಾಯಣ್ ಈಗೇನು ಮಾಡುತ್ತಿದ್ದಾರೆ ಅಂತ ಕೇಳಿದಾಗ ಒಂದು ಬ್ರೇಕಿಂಗ್ ನ್ಯೂಸ್ ಕಿರುತೆರೆ ಲೋಕದಿಂದ ಬಂದಿದೆ. ಸ್ಮಾಲ್ ಸ್ಕ್ರೀನ್ ದುನಿಯಾದಲ್ಲಿ ಎಸ್.ನಾರಾಯಣ್ ಮಿನುಗಲಿದ್ದಾರೆ. ಜೀ ಕನ್ನಡ ವಾಹಿನಿಯ ಜನಪ್ರಿಯ 'ಪಾರು' ಧಾರಾವಾಹಿಯಲ್ಲಿ ಎಸ್.ನಾರಾಯಣ್ ಕಾಣಿಸಿಕೊಳ್ಳಲಿದ್ದಾರೆ. 'ಪಾರು' ಸೀರಿಯಲ್ ನ ಮುಂಬರುವ ಸಂಚಿಕೆಗಳಲ್ಲಿ ಎಸ್.ನಾರಾಯಣ್ ಗೆ ಬಹು ಮುಖ್ಯ ಪಾತ್ರವಿದೆ. ಮುಂದೆ ಓದಿರಿ...

ಇದು ಹೊಸದೇನೂ ಅಲ್ಲ.!

ಇದು ಹೊಸದೇನೂ ಅಲ್ಲ.!

ಅಸಲಿಗೆ, ಎಸ್.ನಾರಾಯಣ್ ಗೆ ಕಿರುತೆರೆ ಲೋಕ ಹೊಸದೇನೂ ಅಲ್ಲ. ವರ್ಷಗಳ ಹಿಂದೆಯೇ 'ಸುಮತಿ', 'ಭಗೀರತಿ', 'ಅಂಬಿಕಾ' ಅಂತ ಪ್ರಖ್ಯಾತ ಧಾರಾವಾಹಿಗಳನ್ನ ಎಸ್.ನಾರಾಯಣ್ ನಿರ್ದೇಶನ ಮಾಡಿದ್ದರು. ಆದ್ರೀಗ, 'ಪಾರು' ಸೀರಿಯಲ್ ನಲ್ಲಿ ಎಸ್.ನಾರಾಯಣ್ ಬಣ್ಣ ಹಚ್ಚಿ ನಟನೆ ಮಾಡಲಿದ್ದಾರೆ.

'ಮಿಲಿಟರಿ ಮಾವ'

'ಮಿಲಿಟರಿ ಮಾವ'

'ಪಾರು' ಧಾರಾವಾಹಿಯಲ್ಲಿ ಎಸ್.ನಾರಾಯಣ್ ನಿವೃತ್ತ ಮಿಲಿಟರಿ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತುಂಬಾ ಸ್ಟ್ರಿಕ್ಟ್ 'ರಣಕಲ್ ವೀರಯ್ಯ ದೇವ'ನ ಪಾತ್ರಕ್ಕೆ ಎಸ್.ನಾರಾಯಣ್ ಜೀವ ತುಂಬಲಿದ್ದಾರೆ. ಕಥೆ ಮತ್ತು ಪಾತ್ರದ ವಿವರ ನೀಡದ ಕೂಡಲೆ ಎಸ್.ನಾರಾಯಣ್ ಗ್ರೀನ್ ಸಿಗ್ನಲ್ ಕೊಟ್ಟು 'ಪಾರು' ಸೀರಿಯಲ್ ಸೆಟ್ ಗೆ ಹಾಜರ್ ಆಗಿದ್ದಾರೆ.

ಇನ್ಮುಂದಿನ ಕಥೆ ಏನು.?

ಇನ್ಮುಂದಿನ ಕಥೆ ಏನು.?

ಶ್ರೀಮಂತರಿಗೆ ಮನುಷ್ಯತ್ವ ಇಲ್ಲವೇ ಇಲ್ಲ ಎನ್ನುವುದನ್ನು ನಂಬಿರುವ ವ್ಯಕ್ತಿ ರಣಕಲ್ ವೀರಯ್ಯ ದೇವ. ಹೀಗಿರುವಾಗ, ಶ್ರೀಮಂತರ ಕುಟುಂಬದ ಹುಡುಗ ಪ್ರೀತಮ್ ಜೊತೆಗೆ ಪ್ರೀತಿಯಲ್ಲಿ ಬೀಳುತ್ತಾಳೆ ರಣಕಲ್ ವೀರಯ್ಯ ದೇವನ ಪುತ್ರಿ ಜನನಿ. ಪ್ರೀತಮ್ ಹಿನ್ನಲೆ ತಿಳಿದುಕೊಂಡ ರಣಕಲ್ ವೀರಯ್ಯ ದೇವ ಮದುವೆಗೆ ಒಪ್ಪಿಗೆ ಕೊಡಲ್ಲ. ರಣಕಲ್ ವೀರಯ್ಯ ದೇವನ ಮನವೊಲಿಸಲು ಹಳ್ಳಿಯಲ್ಲಿ ಜನನಿ, ಪ್ರೀತಮ್, ಪಾರು ಏನೆಲ್ಲ ಸರ್ಕಸ್ ಮಾಡುತ್ತಾರೆ ಎಂಬುದೇ ಮುಂದಿನ 'ಪಾರು' ಅಧ್ಯಾಯ.

ದೊಡ್ಡ ತಾರಾಬಳಗ

ದೊಡ್ಡ ತಾರಾಬಳಗ

'ಪಾರು' ಧಾರಾವಾಹಿಯಲ್ಲಿ ಅಖಿಲಾಂಡೇಶ್ವರಿ ಆಗಿ ವಿನಯ ಪ್ರಸಾದ್, ಮೋಕ್ಷಿತಾ ಪೈ, ಶಾಂಭವಿ ವೆಂಕಟೇಶ್, ಸಿದ್ದು, ಶರತ್, ರೋಹಿಣಿ ಕೃಷ್ಣ, ಮಾನ್ಸಿ ಜೋಷಿ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ. ಗುರು ಪ್ರಸಾದ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೀಗ ಇದೇ ತಂಡಕ್ಕೆ ಎಸ್.ನಾರಾಯಣ್ ಸೇರಿಕೊಂಡಿದ್ದಾರೆ.

More from Filmibeat

English summary
Kannada Director S Narayan to act in TV Serial Paaru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X