»   » 'ಸರಿಗಮಪ-13' ಗ್ರ್ಯಾಂಡ್ ಫಿನಾಲೆ ತಲುಪಿದ 6 ಲಕ್ಕಿ ಗಾಯಕರು

'ಸರಿಗಮಪ-13' ಗ್ರ್ಯಾಂಡ್ ಫಿನಾಲೆ ತಲುಪಿದ 6 ಲಕ್ಕಿ ಗಾಯಕರು

Posted By:
Subscribe to Filmibeat Kannada

ಜೀ-ಕನ್ನಡದಲ್ಲಿ ಪ್ರಸಾರವಾಗುವ ಖ್ಯಾತ ರಿಯಾಲಿಟಿ ಶೋ 'ಸರಿಗಮಪ ಸೀಸನ್-13' ಫಿನಾಲೆ ಹಂತಕ್ಕೆ ತಲುಪಿದೆ. ಶನಿವಾರ ಮತ್ತು ಭಾನುವಾರ ನಡೆದ ಸೆಮಿಫೈನಲ್ ನಲ್ಲಿ ಸರಿಗಮಪ ಫಿನಾಲೆ ವೇದಿಕೆಗೆ 6 ಜನ ಲಕ್ಕಿ ಗಾಯಕರು ಆಯ್ಕೆ ಆಗಿದ್ದಾರೆ.

ಮೈಸೂರಿನ ಶ್ರೀ ಹರ್ಷ, ಮಂಡ್ಯದ ಧನುಷ್, ಸುನೀಲ್, ಮೆಹೆಬೂಬ್ ಸಾಬ್, ಅರವಿಂದ್, ಹಾಗೂ ದೀಕ್ಷಾ ಫಿನಾಲೆ ವೇದಿಕೆಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

Sa Ri Ga Ma Pa Season 13 Finale Candidates

ಫಿನಾಲೆಯ ಅಂತಿಮ ಸುತ್ತಿನಲ್ಲಿ ಒಟ್ಟು 6 ಜನ ಪ್ರತಿಭಾನ್ವಿತ ಗಾಯಕರಿದ್ದು, ಯಾರ ಮಡಲಿಗೆ ವಿಜಯಲಕ್ಷ್ಮಿ ಒಲಿಯಲಿದ್ದಾಳೆ ಎಂಬ ಕುತೂಹಲ ಸಂಗೀತ ಪ್ರೇಮಿಗಳನ್ನ ಕಾಡುತ್ತಿದೆ. ಇದೇ ಮೊದಲ ಭಾರಿಗೆ ಸರಿಗಮಪ ಫಿನಾಲೆ ನೇರಪ್ರಸಾರವಾಗಲಿದ್ದು, ಜುಲೈ 30 ರಂದು ಸಂಜೆ 6 ಗಂಟೆಯಿಂದ ಜೀ ಕನ್ನಡದಲ್ಲಿ ಮೂಡಿ ಬರಲಿದೆ.

ಅನುಶ್ರೀ ಈ ಕಾಯಕ್ರಮವನ್ನ ನಿರೂಪಣೆ ಮಾಡುತ್ತಿದ್ದು, ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್ ಹಾಗೂ ವಿಜಯ್ ಪ್ರಕಾಶ್ ತೀರ್ಪುಗಾರರಾಗಿದ್ದಾರೆ.

English summary
Popular Reality tv Shows on Zee Kannada Sa Ri Ga Ma Pa Season 13 Reach's Finale Stage. Here is the Finale Candidates list

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada