'ಸರಿಗಮಪ-15'ಗೆ ಹಳೆ ಜಡ್ಜ್ ವಾಪಸ್: ಯಾರು ಗೊತ್ತಾ.?
ಕಿರುತೆರೆಯ ಖ್ಯಾತ ಕಾರ್ಯಕ್ರಮ ಸರಿಗಮಪ ಸೀಸನ್ 15 ಮತ್ತೆ ಆರಂಭವಾಗ್ತಿದೆ. ಈಗಾಗಲೇ ಪ್ರೋಮೋ ಪ್ರಸಾರವಾಗ್ತಿದ್ದು, ಈ ಮಧ್ಯೆ ಸರ್ಪ್ರೈಸ್ ಸುದ್ದಿಯೊಂದನ್ನ ನೀಡಿದೆ.
15ನೇ ಆವೃತ್ತಿಯ ಸರಿಗಮಪ ಕಾರ್ಯಕ್ರಮಕ್ಕೆ ಹಳೆ ತೀರ್ಪುಗಾರರೊಬ್ಬರ ಕಂಬ್ಯಾಕ್ ಮಾಡಿದ್ದಾರೆ. ಹೌದು, ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಈ ಆವೃತ್ತಿಗೆ ಮರಳಿದ್ದಾರೆ.
ಕಳೆದ ಆವೃತ್ತಿಯಲ್ಲಿ ರಾಜೇಶ್ ಕೃಷ್ಣನ್ ಭಾಗವಹಿಸಿರಲಿಲ್ಲ. ಬೇರೆ ಕಾರಣಗಳಿಂದ ಮೆಲೋಡಿ ಕಿಂಗ್ ಅಲಭ್ಯರಾಗಿದ್ದರು. ಎಂದಿನಂತೆ ಅರ್ಜುನ್ ಜನ್ಯ, ವಿಜಯ ಪ್ರಕಾಶ್ ಮತ್ತು ಮಹಾಗುರು ಹಂಸಲೇಖ ಅವರು ನಡೆಸಿಕೊಟ್ಟಿದ್ದರು.

ಈಗ ಮೂರು ಜನ ತೀರ್ಪುಗಾರರ ಜೊತೆ ರಾಜೇಶ್ ಕೃಷ್ಣನ್ ಅವರು ಕೂಡ ಕಾರ್ಯಕ್ರಮದಲ್ಲಿ ಇರಲಿದ್ದಾರೆ. ಇದೇ ಶನಿವಾರದಿಂದ ರಾತ್ರಿ 7.30ಕ್ಕೆ ಸರಿಗಮಪ ಸೀಸನ್ 15 ಆರಂಭವಾಗುತ್ತಿದ್ದು, ಅನುಶ್ರೀ ನಿರೂಪಣೆ ಮಾಡಲಿದ್ದಾರೆ.
More from Filmibeat
English summary
Zee Kannada popular singing show sa ri ga ma pa season 15 starts from 29th september.


Click it and Unblock the Notifications











