ಆಗಸ್ಟ್ 15ಕ್ಕೆ ಬಹು ನಿರೀಕ್ಷಿತ ಟಿವಿ ಸರಣಿ ಸೆಕ್ರೆಡ್ ಗೇಮ್ಸ್ ಸೀಸನ್ 2

By ಜೇಮ್ಸ್ ಮಾರ್ಟಿನ್

ನೆಟ್ ಫ್ಲಿಕ್ಸ್ ನ ಜನಪ್ರಿಯ ವೆಬ್ ಸರಣಿ 'ಸೇಕ್ರೆಡ್ ಗೇಮ್ಸ್' ನ ಎರಡನೇ ಸೀಸನ್ ಆರಂಭ ದಿನಾಂಕವನ್ನು ಕೊನೆಗೂ ಪ್ರಕಟಿಸಲಾಗಿದೆ. ಜುಲೈ ತಿಂಗಳಿನಲ್ಲೇ ಪ್ರಸಾರ ಕಾಣಬೇಕಿದ್ದ ಈ ವಿವಾದಿತ ಸರಣಿ ಈಗ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ.

ವಿಕ್ರಮ್ ಚಂದ್ರ ಎಂಬವರ ಕಾದಂಬರಿ ಆಧಾರಿತ ಕಥೆಯನ್ನು ಅನುರಾಗ್ ಕಶ್ಯಪ್ ನಿರ್ದೇಶಿಸಿದ್ದಾರೆ. ಇನ್ನು ಸೈಫ್ ಅಲಿ ಖಾನ್, ನವಾಜುದ್ದೀನ್ ಸಿದ್ದಿಕಿ ಹಾಗೂ ರಾಧಿಕಾ ಅಪ್ಟೆ ಮುಖ್ಯ ಭೂಮಿಕೆಯಲ್ಲಿದ್ದ ವೆಬ್​ ಸರಣಿ ವೀಕ್ಷಕರ ಮನ ಗೆದ್ದಿದೆ.

 Sacred Games 2 to premiere on August 15

ಈ ಬಾರಿ ರಣವೀರ್ ಶೋರೆ ಹಾಗೂ ಕಲ್ಕಿ ಕೋಚ್ಲಿನ್ ಸೇರ್ಪಡೆಗೊಂಡಿದ್ದಾರೆ. ರಾಧಿಕಾ ಪಾತ್ರ ಮೊದಲ ಸೀಸನ್ ನಲ್ಲಿ ಹತ್ಯೆಯಾಗಿದೆ. ಗಣೇಶ್ ಗಾಯ್ತೊಂಡೆ ಪಾತ್ರಧಾರಿ ಆತ್ಮಹತ್ಯೆ ಮಾಡಿಕೊಂಡಿದ್ದರೂ, ಸೀಸನ್ 2 ಟ್ರೈಲರ್ ನಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿದ್ದು, ಕಚೇರಿಯ ಕೆಲಸದಲ್ಲಿ ನಿರತನಾಗಿರುವಂತೆ ತೋರಿಸಲಾಗಿದೆ.

ಮಿಕ್ಕಂತೆ ಸರ್ದಾರ್ ಸಿಂಗ್ ಜೊತೆ ಗಾಯ್ತೊಂಡೆ ಮಾತುಕತೆ, ಅಂತಾರಾಷ್ಟ್ರೀಯ ಮಟ್ಟಕ್ಕೇರಿದ ಆಧಾತ್ಮ ಗುರುವನ್ನು ತೋರಿಸಲಾಗಿದೆ. ಬಂಟಿ ಕಾಣಿಸಿಕೊಂಡರೂ ಡಿಸಿಪಿ ಪಾರಾಲುಕರ್ ಸುಳಿವಿಲ್ಲ. ಬಲಿದಾನ, ಹೋರಾಟ ಹೀಗೆ ಪದಗಳು ಕೇಳಿ ಬಂದಿದ್ದು, ಕೊನೆಯಲ್ಲಿ ಇಡೀ ಸೀಸನ್ ನ ಮುಖ್ಯ ವಾಕ್ಯ ಎನಿಸಿಕೊಂಡಿದ್ದ 'ದೇವರನ್ನು ನಂಬುತ್ತೀಯಾ?' ಎಂಬ ವಾಕ್ಯದೊಂದಿಗೆ ಸೀಸನ್ 2 ನ ಟ್ರೈಲರ್ ಅಂತ್ಯಗೊಳಿಸಲಾಗಿದೆ.

ವಿವಾದಕ್ಕೀಡಾಗಿತ್ತು: ನೆಟ್ ಫ್ಲಿಕ್ಸ್ ನ ವೆಬ್ ಸರಣಿ 'ಸೇಕ್ರೆಡ್ ಗೇಮ್ಸ್'ನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಅವಮಾನಿಸುವಂಥ ಡೈಲಾಗ್ ಇದೆ ಎಂದು ಆರೋಪಿಸಲಾಗಿತ್ತು. ಪಶ್ಚಿಮಬಂಗಾಳದ ಕಾಂಗ್ರೆಸ್ ನಾಯಕರೊಬ್ಬರು ನಟ ನವಾಝುದ್ದೀನ್ ಸಿದ್ದಿಕಿ, ನೆಟ್‌ಫ್ಲಿಕ್ಸ್ ಹಾಗೂ ವೆಬ್ ಸರಣಿಯ ನಿರ್ಮಾಪಕರ ವಿರುದ್ಧ ಕೋಲ್ಕತ್ತಾ ಪೊಲೀಸರ ಬಳಿ ದೂರು ದಾಖಲಿಸಿದ್ದರು. ಈ ಬಗ್ಗೆ ರಾಜೀವ್ ಗಾಂಧಿ ಅವರ ಪುತ್ರ ರಾಹುಲ್ ಗಾಂಧಿ ಅವರು ಪ್ರತಿಕ್ರಿಯಿಸಿ, ಟಿವಿ ಸರಣಿಯಿಂದ ನನ್ನ ತಂದೆಯ ವ್ಯಕ್ತಿತ್ವವನ್ನು ಅಳೆಯಲಾಗದು ಎಂದಿದ್ದರು.

More from Filmibeat

English summary
The second season of critically-acclaimed original series "Sacred Games" is set to premiere on August 15, the streaming service announced on Tuesday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X