ರಾಮಕೃಷ್ಣ ಆಶ್ರಮದ ಮುಂದೆ ಕಾಫಿ, ಟೀ ಮಾರಿದ ಅಜಯ್ ರಾವ್

Recommended Video

ಬೆಂಗಳೂರಿನ ರಾಮಕೃಷ್ಣ ಆಶ್ರಮದ ಮುಂದೆ ಟೀ ಕಾಫೀ ಮಾರಾಟ ಮಾಡಿದ ಅಜಯ್ ರಾವ್ | FILMIBEAT KANNADA

'ತಾಯಿಗೆ ತಕ್ಕ ಮಗ' ಚಿತ್ರದಲ್ಲಿ ಆಂಗ್ರಿ ಯಂಗ್ ಮ್ಯಾನ್ ನಂತೆ ಅಬ್ಬರಿಸಿದ್ದ 'ಕೃಷ್ಣ' ಅಜಯ್ ರಾವ್ ಇದೀಗ ರಾಮಕೃಷ್ಣ ಆಶ್ರಮದ ಮುಂದೆ ಕಾಫಿ/ಟೀ ಮಾರಿದ್ದಾರೆ.

ಓ.. ಇದು ಯಾವುದೋ ಚಿತ್ರದ ಚಿತ್ರೀಕರಣ ಇರಬೇಕು ಅಂತ ಭಾವಿಸಬೇಡಿ. ಅಜಯ್ ರಾವ್ 'ಕ್ಯಾಮರಾ ಮುಂದೆ' ಕಾಫಿ ಮತ್ತು ಟೀ ಮಾರಾಟ ಮಾಡಿರಬಹುದು. ಆದ್ರೆ, ಕೇವಲ 'ಶೂಟಿಂಗ್'ಗಾಗಿ ಅಲ್ಲ... ಒಬ್ಬರ ಒಳಿತಿಗಾಗಿ.!

ಹೌದು, ಓರ್ವ ಹುಡುಗನ ವಿದ್ಯಾಭ್ಯಾಸಕ್ಕಾಗಿ ನಟ ಅಜಯ್ ರಾವ್ ಒಂದು ದಿನದ ಮಟ್ಟಿಗೆ ಕಾಫಿ, ಟೀ ಸೇಲ್ ಮಾಡಿದ್ದಾರೆ. ಅದು ಉದಯ ಟಿವಿಯ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಮೂಲಕ. ಮುಂದೆ ಓದಿರಿ...

ಈ ವಾರದ ಅತಿಥಿ

ಈ ವಾರದ ಅತಿಥಿ

'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಕಳೆದ ಸಂಚಿಕೆಯಲ್ಲಿ ನಟಿ ಹರಿಪ್ರಿಯಾ ರೈತ ಕುಟುಂಬಕ್ಕಾಗಿ ಫ್ರೂಟ್ ಸಲಾಡ್ ಮಾರಾಟ ಮಾಡಿದ್ದರು. ಇದೀಗ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಅತಿಥಿಯಾಗಿ ನಟ ಅಜಯ್ ರಾವ್ ಭಾಗವಹಿಸಿದ್ದಾರೆ.

ಕಾಫಿ/ಟೀ ಮಾರಿದ ಅಜಯ್ ರಾವ್

ಕಾಫಿ/ಟೀ ಮಾರಿದ ಅಜಯ್ ರಾವ್

'ಸದಾ ನಿಮ್ಮೊಂದಿಗೆ' ಕಾರ್ಯಕ್ರಮಕ್ಕಾಗಿ ರಾಮಕೃಷ್ಣ ಆಶ್ರಮದ ಮುಂದೆ ನಟ ಅಜಯ್ ರಾವ್ ಕಾಫಿ/ಟೀ ಮಾರಾಟ ಮಾಡಿ ಹಣ ಸಂಗ್ರಹಿಸಿದ್ದಾರೆ.

ವಿಕಲಚೇತನ ಹುಡುಗನಿಗೆ ಸಹಾಯ

ವಿಕಲಚೇತನ ಹುಡುಗನಿಗೆ ಸಹಾಯ

ಚಂದನ್ ಎಂಬ ವಿಕಲಚೇತನ ಹುಡುಗನಿಗಾಗಿ ನಟ ಅಜಯ್ ರಾವ್ ಸಹಾಯ ಮಾಡಿದ್ದಾರೆ. ರೈಲಿನಿಂದ ಇಳಿಯುವ ಭರದಲ್ಲಿ ತನ್ನ ಎರಡು ಕಾಲುಗಳನ್ನು ಚಿಕ್ಕವಯಸ್ಸಿನಲ್ಲಿ ಚಂದನ್ ಕಳೆದುಕೊಂಡಿದ್ದ. ಈ ಹುಡುಗನ ವಿದ್ಯಾಭ್ಯಾಸಕ್ಕಾಗಿ ಅಜಯ್ ರಾವ್ ಸಹಾಯ ಹಸ್ತ ಚಾಚಿದ್ದಾರೆ.

ಹಣಕಾಸಿನ ತೊಂದರೆ

ಹಣಕಾಸಿನ ತೊಂದರೆ

ಚನ್ನಪಟ್ಟಣದಲ್ಲಿ ಓದುತ್ತಿರುವ ಚಂದನ್ ವಿದ್ಯಾಭ್ಯಾಸಕ್ಕೆ ಹಣದ ತೊಂದರೆ ಇದೆ. ಹೀಗಾಗಿ, ಚಂದನ್ ಗಾಗಿ ಕಾಫಿ, ಟೀ ಮಾರಿ ಅಜಯ್ ರಾವ್ ಹಣ ಗಳಿಸಿದ್ದಾರೆ.

ಪ್ರಸಾರ ಯಾವಾಗ.?

ಪ್ರಸಾರ ಯಾವಾಗ.?

ರಾಮಕೃಷ್ಣ ಆಶ್ರಮದ ಮುಂದೆ ಅಜಯ್ ರಾವ್ ಕಾಫಿ, ಟೀ ಮಾರಾಟ ಮಾಡಿ ಸಂಗ್ರಹಿಸಿದ ಹಣ ಎಷ್ಟು.? ಎಂಬುದನ್ನು ಈ ವಾರದ ಸಂಚಿಕೆಯಲ್ಲಿ ನೋಡಬಹುದು. 'ಸದಾ ನಿಮ್ಮೊಂದಿಗೆ' ಇದೇ ಭಾನುವಾರ ರಾತ್ರಿ 9 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರ ಆಗಲಿದೆ.

More from Filmibeat

English summary
Kannada Actor Ajay Rao sells coffee, tea in front of Ramakrishna Ashrama for a new show called 'Sada Nimmondige'. This show will telecast on every Sunday 9PM at Udaya TV.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X