ಇದೇ ರಿಯಾಲಿಟಿ: ಬೀದಿಬದಿಯಲ್ಲಿ ಮೂಸಂಬಿ ಜ್ಯೂಸ್ ಮಾರಿದ ಧನಂಜಯ್.!
Recommended Video

ಬಡತನ ಹಾಗೂ ನೋವಿನಿಂದ ಬಳಲುತ್ತಿರುವ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವ ಶೋ 'ಸದಾ ನಿಮ್ಮೊಂದಿಗೆ'. ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿರುವ ಈ ಶೋನಲ್ಲಿ ಈಗಾಗಲೇ ರಶ್ಮಿಕಾ ಮಂದಣ್ಣ, ಶ್ರೀಮುರಳಿ ಹಾಗೂ ಸೃಜನ್ ಲೋಕೇಶ್ ಭಾಗವಹಿಸಿದ್ದಾರೆ.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಪಲ್ಲವಿಯವರಿಗೆ ತಮ್ಮ ಕೈಲಾದ ಸಹಾಯ ಮಾಡೋದಕ್ಕೆ ಪೆಟ್ರೋಲ್ ಬಂಕ್ ನಲ್ಲಿ ನಟಿ ರಶ್ಮಿಕಾ ಮಂದಣ್ಣ ಕೆಲಸ ಮಾಡಿದ್ದರು.
ರೈತರ ಕುಟುಂಬಕ್ಕೆ ಸಹಾಯ ಮಾಡಲು ನಟ ಶ್ರೀಮುರಳಿ ರಸ್ತೆಬದಿಯಲ್ಲಿ ಕಬ್ಬಿನ ಹಾಲು ಮಾರಿದ್ದರು. ಹಾಗೇ, ಎಲೆಕ್ಟ್ರಿಕ್ ಶಾಕ್ ನಿಂದ ತನ್ನ ಎರಡು ಕೈ ಹಾಗೂ ಒಂದು ಕಾಲು ಕಳೆದುಕೊಂಡಿದ್ದ ನಾಗೇಶ್ ಗೋಸ್ಕರ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಭೇಲ್ ಪೂರಿ, ಪಾನಿ ಪೂರಿ, ಮಸಾಲ ಪೂರಿಯನ್ನು ಮಾರಿ ಅವರಿಗೆ ಆಸರೆ ಆಗಿದ್ದರು.
ಇನ್ನೂ ಈ ವಾರದ ಸಂಚಿಕೆ ಮತ್ತಷ್ಟು ಕುತೂಹಲಕಾರಿ ಆಗಿದೆ. ಯಾಕಂದ್ರೆ, ಈ ವಾರ 'ಸದಾ ನಿಮ್ಮೊಂದಿಗೆ' ಇರಲು ಬರ್ತಿದ್ದಾರೆ ನಟ ಧನಂಜಯ್. ಮುಂದೆ ಓದಿರಿ...

ಕಷ್ಟದಲ್ಲಿ ಇರುವ ರವಿ ಕುಟುಂಬ
ದೋಣಿ ಹತ್ತಿ ಮೀನು ಹಿಡಿದು ಜೀವನ ಸಾಗಿಸುತ್ತಿದ್ದ ಮನೆಯ ಯಜಮಾನ ರವಿ ಸ್ಟ್ರೋಕ್ ನಿಂದಾಗಿ ಬಲಗೈ ಸ್ವಾಧೀನ ಕಳೆದು ಕೊಂಡಿರುವುದರಿಂದ ತನ್ನ ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಆದರೆ, ಅವರ ಇಬ್ಬರು ಹೆಣ್ಣು ಮಕ್ಕಳೇ ತಂದೆಯ ಹಾಗೆ ಬೆಳಗಿನ ಜಾವ ಐದು ಗಂಟೆಗೆ ಕಬಿನಿ ಹಿನ್ನೀರಿನಲ್ಲಿ ಮೀನು ಹಿಡಿದು ಮಾರಿ ಅದರಿಂದ ಬಂದ ಹಣದಿಂದ ತಂದೆಯ ಚಿಕಿತ್ಸೆ ಮತ್ತು ಮನೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅದರ ಜೊತೆಗೆ ತಮ್ಮಿಬ್ಬರ ವಿದ್ಯಾಭ್ಯಾಸವನ್ನು ಬಿಡದೆ ಸಂಸಾರವನ್ನು ನಡೆಸುತ್ತಾ ಬರುತ್ತಿದ್ದಾರೆ.

ರವಿ ಕುಟುಂಬಕ್ಕೆ ಧನಂಜಯ್ ಸಹಾಯ ಹಸ್ತ
ಈಗ ಕುಟುಂಬದ ನಿರ್ವಹಣೆಯ ಜೊತೆಗೆ ವಿದ್ಯಾಭ್ಯಾಸ ಮುಂದುವರೆಸಲು ಆ ಮಕ್ಕಳಿಗೆ ಸಾಕಷ್ಟು ಸಮಸ್ಯೆಗಳು ಉದ್ಭವಿಸಿವೆ. ಇಂತಹ ಕುಟುಂಬಕ್ಕೆ ಸಹಾಯ ಹಸ್ತ ನೀಡಲು ಈ ವಾರದ 'ಸದಾ ನಿಮ್ಮೊಂದಿಗೆ' ಸಂಚಿಕೆಯಲ್ಲಿ 'ಟಗರು' ಖ್ಯಾತಿಯ ಡಾಲಿ ಧನಂಜಯ್ ಜನಸಾಮಾನ್ಯರಲ್ಲಿ ಸಾಮಾನ್ಯರಂತೆ ಕೆಲಸ ಮಾಡಿ ಸಂಕಷ್ಟದಲ್ಲಿರುವ ರವಿ ಕುಟುಂಬಕ್ಕೆ ಕೈ ಜೋಡಿಸಿದ್ದಾರೆ.

ಮೂಸಂಬಿ ಜ್ಯೂಸ್ ಮಾರಿದ ಧನಂಜಯ್
ಎನ್.ಆರ್.ಕಾಲೋನಿಯ ಬಸ್ ನಿಲ್ದಾಣದ ಬಳಿಯಲ್ಲಿ ಮೂಸಂಬಿ ಜ್ಯೂಸ್ ಮಾರುತ್ತಾ ಹೆಲ್ತ್ ಟಿಪ್ಸ್ ಕೊಡುತ್ತಾ ಡಾಲಿ ಧನಂಜಯ್ ಹಣವನ್ನು ಸಂಗ್ರಹಿಸಿ ರವಿ ಮಕ್ಕಳ ವಿದ್ಯಾಭ್ಯಾಸ ಮುಂದುವರೆಸಲು ಕೈ ಜೋಡಿಸಿದ್ದಾರೆ.

ರವಿ ಕುಟುಂಬಕ್ಕೆ ಸಿಕ್ಕ ಹಣ ಎಷ್ಟು.?
ಡಾಲಿ ಧನಂಜಯ್ ಸಂಗ್ರಹಿಸಿ ರವಿ ಕುಟುಂಬಕ್ಕೆ ಕೊಟ್ಟ ಹಣವೆಷ್ಟು.? ಎಂಬುದು ಇದೇ ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರ ಆಗುವ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಗೊತ್ತಾಗುತ್ತೆ.


Click it and Unblock the Notifications











