ವಿ.ವಿ.ಪುರಂನಲ್ಲಿ ಬಾದಾಮಿ ಹಾಲು ಮಾರಿದ ಪ್ರಜ್ವಲ್ ದೇವರಾಜ್

Recommended Video

ಬೆಂಗಳೂರಿನ ವಿ ವಿ ಪುರಂ ನಲ್ಲಿ ಬಾದಾಮಿ ಹಾಲು ಮಾರಿದ ಪ್ರಜ್ವಲ್ ದೇವರಾಜ್ | Filmibeat Kannada

ಮನರಂಜನೆ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿರುವ ಕಾರ್ಯಕ್ರಮ ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿರುವ 'ಸದಾ ನಿಮ್ಮೊಂದಿಗೆ'. ಕಷ್ಟದಲ್ಲಿ ಇರುವವರಿಗೆ ಸಹಾಯ ಹಸ್ತ ಚಾಚುವ ಉದ್ದೇಶ ಈ ಕಾರ್ಯಕ್ರಮದ್ದು.

ತೆರೆ ಮೇಲಿನ ಹೀರೋ-ಹೀರೋಯಿನ್ ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನೊಂದ ಕುಟುಂಬದವರಿಗೆ ಆಸರೆ ಆಗಿ ಭೇಷ್ ಎನಿಸಿಕೊಂಡಿದ್ದಾರೆ. ಜನಸಾಮಾನ್ಯರಂತೆ ಒಂದು ದಿನದ ಮಟ್ಟಿಗೆ ಕೆಲಸ ಮಾಡಿ, ಅದರಿಂದ ಬಂದ ಹಣವನ್ನ ನಟ-ನಟಿಯರು ಸಂಕಷ್ಟದಲ್ಲಿ ಇರುವವರಿಗೆ 'ಸದಾ ನಿಮ್ಮೊಂದಿಗೆ' ಮೂಲಕ ನೀಡಿದ್ದಾರೆ.

ಈಗಾಗಲೇ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ, ವಿಜಯ್ ರಾಘವೇಂದ್ರ, ಶ್ರೀಮುರಳಿ, ಚಿರಂಜೀವಿ ಸರ್ಜಾ, ರಾಗಿಣಿ ದ್ವಿವೇದಿ, ಶ್ರೀಮುರಳಿ, ಶರಣ್, ಮಾನ್ವಿತಾ ಹರೀಶ್, ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಹಲವರು ಅತಿಥಿಗಳಾಗಿ ಪಾಲ್ಗೊಂಡಿದ್ದಾರೆ. ಈಗ ನಟ ಪ್ರಜ್ವಲ್ ದೇವರಾಜ್ ಸರದಿ. ಮುಂದೆ ಓದಿರಿ...

ಈ ವಾರದ ಅತಿಥಿ ಪ್ರಜ್ವಲ್ ದೇವರಾಜ್

ಈ ವಾರದ ಅತಿಥಿ ಪ್ರಜ್ವಲ್ ದೇವರಾಜ್

'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಹಿಂದಿನ ಸಂಚಿಕೆಯಲ್ಲಿ ಲಕ್ಷ್ಮಿ ಹಾಗೂ ಗಿರಿಜಾ ಲೋಕೇಶ್ ಬಂಡಿ ಮಹಾಕಾಳಮ್ಮ ದೇವಸ್ಥಾನದ ಪೂಜಾ ಸಾಮಾಗ್ರಿಗಳನ್ನು ಮಾರಿ ಮಡಿಕೇರಿಯ ಜಯಂತಿ ಕುಟುಂಬಕ್ಕೆ ಸಹಾಯ ಮಾಡಿದ್ದರು. ಈ ವಾರದ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಭಾಗವಹಿಸಿದ್ದಾರೆ.

ಸತೀಶ್ ಪುತ್ರಿಗೆ ಸಹಾಯ

ಸತೀಶ್ ಪುತ್ರಿಗೆ ಸಹಾಯ

ಟೀ ವ್ಯಾಪಾರಿ ಸತೀಶ್ ಪುತ್ರಿಗೆ ಸಹಾಯ ಮಾಡಲು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಸತೀಶ್ ಪುತ್ರಿಗೆ ಏನಾಗಿದೆ.?

ಸತೀಶ್ ಪುತ್ರಿಗೆ ಏನಾಗಿದೆ.?

ಸತೀಶ್ ಅವರ ಐದು ವರ್ಷದ ಪುತ್ರಿಗೆ ಕಿವಿ ಕೇಳುವುದಿಲ್ಲ. ಮಾತು ಬರುವುದಿಲ್ಲ. ಆಕೆಯ ಶಸ್ತ್ರಚಿಕಿತ್ಸೆಗೆ ಹಣದ ಅವಶ್ಯಕತೆ ಇದೆ. ಈ ಮಗುವಿಗೆ ಸಹಾಯ ಮಾಡಲು ಪ್ರಜ್ವಲ್ ದೇವರಾಜ್ ಮುಂದಾಗಿದ್ದಾರೆ.

ಬಾದಾಮಿ ಹಾಲು ಮಾರಿದ ಪ್ರಜ್ವಲ್

ಬಾದಾಮಿ ಹಾಲು ಮಾರಿದ ಪ್ರಜ್ವಲ್

ಸತೀಶ್ ಪುತ್ರಿಗೆ ಸಹಾಯ ಮಾಡಲು ಬೆಂಗಳೂರಿನ ವಿವಿ ಪುರಂನಲ್ಲಿ ಬಾದಾಮಿ ಹಾಲನ್ನು ಮಾರಿ, ಅದರಿಂದ ಬಂದ ಹಣವನ್ನು ಪ್ರಜ್ವಲ್ ನೀಡಿದ್ದಾರೆ. ಅಲ್ಲದೇ, ವೈಯುಕ್ತಿಕವಾಗಿಯೂ ಸತೀಶ್ ಪುತ್ರಿಗೆ ಪ್ರಜ್ವಲ್ ದೇವರಾಜ್ ಹಣ ಸಹಾಯ ಮಾಡಿದ್ದಾರೆ.

ಪ್ರಜ್ವಲ್ ಸಂಗ್ರಹ ಮಾಡಿದ ಹಣ ಎಷ್ಟು.?

ಪ್ರಜ್ವಲ್ ಸಂಗ್ರಹ ಮಾಡಿದ ಹಣ ಎಷ್ಟು.?

ಬಾದಾಮಿ ಹಾಲನ್ನು ಮಾರಿ ಪ್ರಜ್ವಲ್ ದೇವರಾಜ್ ಸಂಗ್ರಹ ಮಾಡಿದ ಹಣ ಎಷ್ಟು.? ಸತೀಶ್ ಕುಟುಂಬದ ಕೈ ಸೇರಿದ ಹಣವೆಷ್ಟು.? ಎಂಬುದನ್ನು ಈ ವಾರದ ಸಂಚಿಕೆಯಲ್ಲಿ ನೀವೇ ನೋಡಿರಿ... 'ಸದಾ ನಿಮ್ಮೊಂದಿಗೆ' ಇದೇ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರ ಆಗಲಿದೆ.

More from Filmibeat

English summary
Kannada Actor Prajwal Devaraj sells Badam Milk in VV Puram for a new show called 'Sada Nimmondige'. This show will telecast on every Sunday 9PM at Udaya TV.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X