ಎಳನೀರು ವ್ಯಾಪಾರಿಗಾಗಿ ಎಳನೀರು ಮಾರಿದ ಲವ್ಲಿ ಸ್ಟಾರ್ ಪ್ರೇಮ್
Recommended Video

'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಸಾಮಾನ್ಯ ಜನರಿಗೆ ಸಹಾಯ ಮಾಡಲು ಧ್ರುವ ಸರ್ಜಾ ಆಟೋ ಓಡಿಸಿದ್ದರು. ನಟಿ ರಶ್ಮಿಕಾ ಮಂದಣ್ಣ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿದ್ದರು. ರೈತರ ಕುಟುಂಬಕ್ಕೆ ಸಹಾಯ ಮಾಡಲು ಶ್ರೀಮುರಳಿ ಕಬ್ಬಿನ ಹಾಲು ಮಾರಿದ್ದರು.
ಕುಟುಂಬವೊಂದಕ್ಕೆ ಧನ ಸಹಾಯ ಮಾಡಲು ಸೃಜನ್ ಲೋಕೇಶ್ ಭೇಲ್ ಪೂರಿ ಮಾರಾಟ ಮಾಡಿದ್ದರು. ನಟ ಧನಂಜಯ್ ಮೂಸಂಬಿ ಜ್ಯೂಸ್ ಮಾರಿದ್ದರೆ, ಪ್ರಿಯಾಂಕಾ ಉಪೇಂದ್ರ ಹೂ ಮಾರಾಟ ಮಾಡಿದ್ದರು. ಇನ್ನೂ ರಿಯಲ್ ಸ್ಟಾರ್ ಉಪೇಂದ್ರ ಹೋಟೆಲ್ ನಲ್ಲಿ ಒಂದು ದಿನ ಮಟ್ಟಿಗೆ ಕೆಲಸ ನಿರ್ವಹಿಸಿದ್ದರು.
ಇದೇ ಕಾರ್ಯಕ್ರಮದಲ್ಲಿ ಪ್ರಿಯಾಮಣಿ, ವಿಜಯ್ ರಾಘವೇಂದ್ರ ಹಾಗೂ ಚಿರಂಜೀವಿ ಸರ್ಜಾ ಭಾಗವಹಿಸಿ ಸಹಾಯ ಹಸ್ತ ಚಾಚಿದ್ದರು. ಇದೀಗ ಲವ್ಲಿ ಸ್ಟಾರ್ ಪ್ರೇಮ್ ಸರದಿ. ಮುಂದೆ ಓದಿರಿ...

ಈ ವಾರದ ಅತಿಥಿ ಲವ್ಲಿ ಸ್ಟಾರ್ ಪ್ರೇಮ್
'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಈ ವಾರದ ಅತಿಥಿಯಾಗಿ ಲವ್ಲಿ ಸ್ಟಾರ್ ಪ್ರೇಮ್ ಭಾಗವಹಿಸಿದ್ದಾರೆ. ಎಳನೀರು ಮಾರಾಟ ಮಾಡುವ ಕುಟುಂಬಕ್ಕೆ ಸಹಾಯ ಮಾಡಲು ಪ್ರೇಮ್ ಮುಂದಾಗಿದ್ದಾರೆ.

ಎಳನೀರು ವ್ಯಾಪಾರಿಗೆ ಸಹಾಯ
ಕಳೆದ ವಾರದ 'ಸದಾ ನಿಮ್ಮೊಂದಿಗೆ' ಸಂಚಿಕೆಯಲ್ಲಿ ಚಿರಂಜೀವಿ ಸರ್ಜಾ ಅವರು ಟ್ಯಾಕ್ಸಿ ಡ್ರೈವರ್ ಶಿವರಾಜ್ ಅವರ ಮಕ್ಕಳಿಗೆ ಇರುವ ಥಲಾಸೀಮಿಯ ಖಾಯಿಲೆಗೋಸ್ಕರ ಗ್ಯಾರೇಜಲ್ಲಿ ಕೆಲಸ ಮಾಡಿ ದುಡ್ಡು ಸಂಪಾದಿಸಿ ಕೊಟ್ಟಿದ್ದರು. ಅಲ್ಲದೇ ಚಿರು ಸರ್ಜಾ ಶಿವರಾಜ್ ಅವರಿಗೆ ತನ್ನ ಕೈಯಿಂದ 50,000 ರೂಗಳನ್ನು ನೀಡಿದ್ದರು. ಈ ವಾರ ಎಳೆನೀರು ವ್ಯಾಪಾರಿಗೆ ಪ್ರೇಮ್ ಸಹಾಯ ಮಾಡಲಿದ್ದಾರೆ.

ರಸ್ತೆಬದಿಯಲ್ಲಿ ಎಳನೀರು ಮಾರುವ ದೇವರಾಜ್
ದೇವರಾಜ್ ಮೂಲತಃ ರೈತಾಪಿ ಕುಟುಂಬದವರು. ಕಬ್ಬಿನ ಗದ್ದೆ ಮಾಡುವ ಕನಸಿಗೆ 70,000 ಸಾಲ ಮಾಡಿ ಕಬ್ಬು ಬೆಳೆ ಕೈಕೊಟ್ಟಿದ್ದರಿಂದ ಊರು ಬಿಡುವಂತಹ ಪರಿಸ್ಥಿತಿ ಬಂತು. ಆಗ ಬೆಂಗಳೂರಿಗೆ ಬಂದ ದೇವರಾಜ್, ಇಂದಿನ ವರೆಗೂ ರಸ್ತೆ ಬದಿಯಲ್ಲಿ ಎಳೆನೀರು ಮಾರುತ್ತಿದ್ದಾರೆ.

ದೇವರಾಜ್ ಜೀವನೋಪಾಯ
ದೇವರಾಜ್ ಅವರಿಗೆ 3 ಜನ ಹೆಣ್ಮಕ್ಕಳಿದ್ದಾರೆ. ಅವರ ವಿದ್ಯಾಭ್ಯಾಸ ಮತ್ತು ಅವರ ಮುಂದಿನ ಜೀವನಕ್ಕಾಗಿ ಹಣವನ್ನು ಹೊಂದಿಸಲು ಆಗುತ್ತಿಲ್ಲ. ಈ ವಿಷಯದ ಹಿನ್ನಲೆ ಲವ್ಲಿ ಸ್ಟಾರ್ ಪ್ರೇಮ್, ದೇವರಾಜ್ ರಂತೆ ಎಳೆನೀರನ್ನು ಮಾರಿ ಅವರ ಜೀವನೋಪಾಯಕ್ಕೆ ಸಹಾಯ ಹಸ್ತ ನೀಡಿದ್ದಾರೆ.

ಪ್ರೇಮ್ ಸಂಪಾದಿಸಿದ ಹಣವೆಷ್ಟು.?
ಎಳನೀರು ಮಾರಾಟ ಮಾಡುವ ಮೂಲಕ ಹಾಗಾದರೆ ಪ್ರೇಮ್ ಗಳಿಸಿದ ಒಟ್ಟು ಹಣವೆಷ್ಟು? ದೇವರಾಜ್ ಜೀವನಕ್ಕೆ ದೊರೆತ ಹಣವೆಷ್ಟು? ಎಂಬುದನ್ನ ಈ ವಾರದ ಸಂಚಿಕೆಯಲ್ಲಿ ನೋಡಬಹುದು. 'ಸದಾ ನಿಮ್ಮೊಂದಿಗೆ' ಇದೇ ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.


Click it and Unblock the Notifications











