ಕಲಾವಿದನಿಗೆ ಸಹಾಯ ಮಾಡಿದ ಗಾಯಕ ರಾಜೇಶ್ ಕೃಷ್ಣನ್

ಒಂದೊಳ್ಳೆ ಆಶಯದೊಂದಿಗೆ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿರುವ ಕಾರ್ಯಕ್ರಮ 'ಸದಾ ನಿಮ್ಮೊಂದಿಗೆ'. ಈ ಕಾರ್ಯಕ್ರಮದ ಮೂಲಕ ಕನ್ನಡ ಚಿತ್ರ ತಾರೆಯರು ಕಷ್ಟದಲ್ಲಿ ಇರುವವರಿಗೆ ಸ್ಪಂದಿಸುತ್ತಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ, ರೋರಿಂಗ್ ಸ್ಟಾರ್ ಶ್ರೀಮುರಳಿ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಪ್ರಿಯಾಂಕಾ ಉಪೇಂದ್ರ, ರಾಗಿಣಿ ದ್ವಿವೇದಿ, ವಿಜಯ್ ರಾಘವೇಂದ್ರ, ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ಸ್ಟಾರ್ ಗಳು 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನಸಾಮಾನ್ಯರಂತೆ ಒಂದು ದಿನದ ಮಟ್ಟಿಗೆ ಕೆಲಸ ಮಾಡಿ, ನೊಂದವರಿಗೆ ಸಹಾಯ ಮಾಡಿದ್ದಾರೆ.

ಇದೀಗ ಇದೇ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಗಾಯಕ ಹಾಗೂ ನಟ ರಾಜೇಶ್ ಕೃಷ್ಣನ್ ಭಾಗವಹಿಸಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ, ಓದಿರಿ....

ಈ ವಾರದ ಅತಿಥಿ

ಈ ವಾರದ ಅತಿಥಿ

'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಕಳೆದ ಸಂಚಿಕೆಯಲ್ಲಿ ತುಪ್ಪದ ಹುಡುಗಿ ರಾಗಿಣಿ, ವಿನೋದ್ ಎಂಬ ಅಂಧನಿಗೋಸ್ಕರ ಮಾವಿನಕಾಯಿ, ಸೌತೆಕಾಯಿ ಮಾರಾಟ ಮಾಡಿ ಹಣ ಸಂಪಾದಿಸಿ ಸಹಾಯ ಮಾಡಿದ್ದರು. ಅದೇ ರೀತಿ ಈ ವಾರದ ನಮ್ಮ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಭಾಗವಹಿಸಿರುವವರು 'ಸದಾ ನಿಮ್ಮೊಂದಿಗೆ' ಧ್ವನಿ (ಸದಾ ನಿಮ್ಮೊಂದಿಗೆ ಶೀರ್ಷಿಕೆ ಗೀತೆ ಗಾಯಕ) ರಾಜೇಶ್ ಕೃಷ್ಣನ್.

ಕಲಾವಿದನ ಕಷ್ಟಕ್ಕೆ ಸ್ಪಂದಿಸಿದ ರಾಜೇಶ್ ಕೃಷ್ಣನ್

ಕಲಾವಿದನ ಕಷ್ಟಕ್ಕೆ ಸ್ಪಂದಿಸಿದ ರಾಜೇಶ್ ಕೃಷ್ಣನ್

ಗಾಯಕ ರಾಜೇಶ್ ಕೃಷ್ಣನ್ ಒಬ್ಬ ಕಲಾವಿದರಾಗಿ ಮತ್ತೊಬ್ಬ ಕಲಾವಿದನ ಕಷ್ಟಕ್ಕೆ ಸ್ಪಂದಿಸಿದ್ದಾರೆ. ನಾಗರಾಜ್ ಎಂಬ ಅದ್ಭುತ ಚಿತ್ರ ಕಲಾವಿದನ ಸಂಕಷ್ಟಕ್ಕೆ ರಾಜೇಶ್ ಕೃಷ್ಣನ್ ಸಹಾಯ ಹಸ್ತ ಚಾಚಿದ್ದಾರೆ.

ನಾಗರಾಜ್ ಅವರ ಸಮಸ್ಯೆ ಏನು.?

ನಾಗರಾಜ್ ಅವರ ಸಮಸ್ಯೆ ಏನು.?

ಚಿತ್ರ ಕಲಾವಿದ ನಾಗರಾಜ್ ಆರೋಗ್ಯದಲ್ಲಿ ಏರುಪೇರಾಗಿ ಓಪನ್ ಹಾರ್ಟ್ ಸರ್ಜರಿಯಾಗಿದೆ. ವೈದ್ಯರು ಈಗ ಸ್ವಲ್ಪ ಸಮಯದವರೆಗೆ ವಿಶ್ರಾಂತಿ ಪಡೆಯಲು ಹೇಳಿದ್ದರಿಂದ ಕುಟುಂಬದ ಆಧಾರ ಸ್ತಂಬವಾಗಿರುವ ಇವರಿಗೆ ಚಿಂತೆಗೀಡು ಮಾಡಿದೆ.

ಸಂಗೀತ ಕಾರ್ಯಕ್ರಮ ಕೊಟ್ಟ ರಾಜೇಶ್ ಕೃಷ್ಣನ್

ಸಂಗೀತ ಕಾರ್ಯಕ್ರಮ ಕೊಟ್ಟ ರಾಜೇಶ್ ಕೃಷ್ಣನ್

ನಾಗರಾಜ್ ಅವರ ಜೀವನಕ್ಕೆ ಚಿತ್ರಕಲೆಯೇ ಆಧಾರ. ಈ ಕಲೆಯಿಂದಲೇ ಹೆಂಡತಿ ಹಾಗೂ ಮಕ್ಕಳನ್ನ ಸಾಕಬೇಕಾಗಿದೆ. ಈಗಾಗಲೇ ಒಬ್ಬ ಹೆಣ್ಣು ಮಗಳ ಮದುವೆ ಮಾಡಿದ್ದಾರೆ. ಈಗ ಇವರ ಕಷ್ಟಕ್ಕೆ ಸಹಾಯ ಮಾಡಲು ಗಾಯಕ ರಾಜೇಶ್ ಕೃಷ್ಣನ್ ಶೇಷಾದ್ರಿಪುರಂ ಕಾಲೇಜ್ ನಲ್ಲಿ ಸಂಗೀತ ಕಾರ್ಯಕ್ರಮವನ್ನು ನೀಡಿದ್ದಾರೆ. ಅಲ್ಲಿ ಅವರಿಗೆ ಬಂದ ಹಣವನ್ನು ನಾಗರಾಜರವರ ಜೀವನಕ್ಕಾಗಿ ಸಹಾಯ ಮಾಡಿದ್ದಾರೆ.

ಸಂಗ್ರಹವಾದ ಹಣ ಎಷ್ಟು.?

ಸಂಗ್ರಹವಾದ ಹಣ ಎಷ್ಟು.?

ಶೇಷಾದ್ರಿಪುರಂ ಕಾಲೇಜ್ ನಲ್ಲಿ ಸಂಗ್ರಹವಾದ ಹಣವೆಷ್ಟು? ಎಂಬುದನ್ನು ಈ ವಾರದ 'ಸದಾ ನಿಮ್ಮೊಂದಿಗೆ' ಸಂಚಿಕೆಯಲ್ಲಿ ನೋಡಬೇಕು. "ಸದಾ ನಿಮ್ಮೊಂದಿಗೆ" ಇದೇ ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

More from Filmibeat

English summary
Kannada Actress Rajesh Krishnan helps Nagaraj for a new show called 'Sada Nimmondige'. This show will telecast on every Sunday 9PM at Udaya TV.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X