ವಿಜಯನಗರದ ಫುಟ್ ಪಾತ್ ನಲ್ಲಿ ರಂಗಾಯಣ ರಘು ತರಕಾರಿ ಮಾರಿದ್ದು ಯಾಕೆ.?
ಬೆಂಡೇಕಾಯಿ, ಬದನೇಕಾಯಿ, ಸೌತೇಕಾಯಿ, ಸೋರೇಕಾಯಿ... ಯಾವುದು ಬೇಕು ತಗೊಳ್ಳಿ.. ತಾಜಾ ತಾಜಾ ತರಕಾರಿ... ಎನ್ನುತ್ತ ಬೆಂಗಳೂರಿನ ವಿಜಯನಗರದ ಫುಟ್ ಪಾತ್ ಮೇಲೆ ಹಾಸ್ಯ ನಟ ರಂಗಾಯಣ ರಘು ತರಕಾರಿ ಮಾರುತ್ತಿದ್ದರು.
ಇದು ಯಾವುದೋ.. ಸಿನಿಮಾ ಶೂಟಿಂಗ್ ಇರಬೇಕು.. ಹಾಸ್ಯ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿರಬೇಕು ಅಂತ ಭಾವಿಸಬೇಡಿ. ರಂಗಾಯಣ ರಘು ತರಕಾರಿ ಮಾರುತ್ತಿದ್ದನ್ನ ಚಿತ್ರೀಕರಣ ಮಾಡಲಾಗುತ್ತಿತ್ತು. ಆದ್ರೆ, ಯಾವುದೋ ಸಿನಿಮಾಗಾಗಿ ಅಲ್ಲ.. ಬದಲಾಗಿ ರಿಯಾಲಿಟಿ ಶೋಗಾಗಿ.
ಹೌದು, ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿರುವ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಲು ರಂಗಾಯಣ ರಘು ತರಕಾರಿ ಮಾರಾಟ ಮಾಡಿದ್ದಾರೆ. ಮುಂದೆ ಓದಿರಿ...

ಈ ವಾರದ ಅತಿಥಿ
'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಕಳೆದ ವಾರದ ಸಂಚಿಕೆಯಲ್ಲಿ ಪರಶುರಾಮ್ ಗಾಗಿ ಆಶಿಕಾ ರಂಗನಾಥ್ ಸ್ವೀಟ್ ಕಾರ್ನ್ ಸೇಲ್ ಮಾಡಿದ್ದರು. ಈ ವಾರ ಕಾರ್ಯಕ್ರಮದ ಅತಿಥಿಯಾಗಿ ರಂಗಾಯಣ ರಘು ಭಾಗವಹಿಸಿದ್ದಾರೆ.

ಯಾರಿಗಾಗಿ ರಂಗಾಯಣ ರಘು ಸಹಾಯ.?
ಮೈತ್ರಿ ಎಂಬ ಮುಗ್ಧ ಹೆಣ್ಣು ಮಗಳಿಗಾಗಿ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ರಂಗಾಯಣ ರಘು ಭಾಗವಹಿಸಿದ್ದಾರೆ. ಮೈತ್ರಿ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲು ರಂಗಾಯಣ ರಘು ತರಕಾರಿ ಮಾರಾಟ ಮಾಡಿದ್ದಾರೆ.

ಮೈತ್ರಿಗೆ ಇರುವ ಸಮಸ್ಯೆ ಏನು.?
ಮೈತ್ರಿ ತಂದೆ ಕುಡಿತದ ದಾಸನಾಗಿ ಮನೆ ಬಿಟ್ಟು ಹೋಗಿದ್ದಾರೆ. ಇನ್ನೂ ದಿನಗೂಲಿ ಕೆಲಸ ಮಾಡುವ ಮೈತ್ರಿ ತಾಯಿ ಮೂಳೆ ನೋವಿನಿಂದ ಬಳಲುತ್ತಿದ್ದಾರೆ. ತಾಯಿಯ ಚಿಕಿತ್ಸೆ ಹಾಗೂ ವಿದ್ಯಾಭ್ಯಾಸಕ್ಕಾಗಿ ಈಗಾಗಲೇ ಮೈತ್ರಿ ಒಂದುವರೆ ಲಕ್ಷ ಸಾಲ ಮಾಡಿಕೊಂಡಿದ್ದಾರೆ.

ಓದಿಗಾಗಿ ಸಹಾಯ ಮಾಡಿ
ಇನ್ನಾರು ತಿಂಗಳ ಓದಿಗಾಗಿ ಸಹಾಯ ಮಾಡಿ ಎಂಬುದು ಮೈತ್ರಿ ಬೇಡಿಕೆ. ಮೈತ್ರಿ ವಿದ್ಯಾಭ್ಯಾಸಕ್ಕೆ ಸಹಾಯ ಆಗಲು ರಂಗಾಯಣ ರಘು ಒಂದು ದಿನದ ಮಟ್ಟಿಗೆ ತರಕಾರಿ ಮಾರಾಟ ಮಾಡಿದ್ದಾರೆ.

ರಂಗಾಯಣ ರಘು ಗಳಿಸಿದ ಹಣ ಎಷ್ಟು.?
ವಿಜಯನಗರದಲ್ಲಿ ತರಕಾರಿ ಮಾರಾಟ ಮಾಡಿ ರಂಗಾಯಣ ರಘು ಗಳಿಸಿದ ಹಣ ಎಷ್ಟು.? ಎಂಬುದನ್ನು ಈ ವಾರದ ಸಂಚಿಕೆಯಲ್ಲಿ ನೋಡಿರಿ.. 'ಸದಾ ನಿಮ್ಮೊಂದಿಗೆ' ಇದೇ ಭಾನುವಾರ ರಾತ್ರಿ 9ಕ್ಕೆ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರ ಆಗಲಿದೆ.


Click it and Unblock the Notifications











