ಚಿಕ್ಕ ಹುಡುಗನ ಆರೋಗ್ಯಕ್ಕಾಗಿ ಪೆನ್ನು ಮಾರಿದ 'ಅಧ್ಯಕ್ಷ' ಶರಣ್
Recommended Video

ತೆರೆ ಮೇಲಿನ ಹೀರೋಗಳು ನಿಜ ಜೀವನದಲ್ಲೂ 'ದೊಡ್ಡ ಹೀರೋ'ಗಳಾಗಿ ಕಾಣಿಸಿಕೊಳ್ಳುತ್ತಿರುವುದು 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ. ಜನಸಾಮಾನ್ಯರಂತೆ ಹಾದಿ ಬೀದಿಯಲ್ಲಿ ಚಿಲ್ಲರೆ ವ್ಯಾಪಾರ ಮಾಡಿ, ಕಷ್ಟದಲ್ಲಿ ಇರುವವರಿಗೆ ಕನ್ನಡ ಚಿತ್ರರಂಗದ ತಾರೆಯರು ಸ್ಪಂದಿಸುತ್ತಿದ್ದಾರೆ.
ಈಗಾಗಲೇ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ಶ್ರೀಮುರಳಿ, ವಿಜಯ್ ರಾಘವೇಂದ್ರ, ಲವ್ಲಿ ಸ್ಟಾರ್ ಪ್ರೇಮ್, ಧ್ರುವ ಸರ್ಜಾ, ಚಿರಂಜೀವಿ ಸರ್ಜಾ ಭಾಗವಹಿಸಿದ್ದಾರೆ.
ನಟರು ಮಾತ್ರ ಅಲ್ಲದೇ ಹೀರೋಯಿನ್ ಗಳಾದ ಪ್ರಿಯಾಮಣಿ, ಪ್ರಿಯಾಂಕ ಉಪೇಂದ್ರ, ಮಾನ್ವಿತಾ ಹರೀಶ್ ಸೇರಿದಂತೆ ಹಲವರು 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಹಸ್ತ ಚಾಚಿದ್ದಾರೆ. ಇದೀಗ ನಟ ಶರಣ್ ಸರದಿ. ಮುಂದೆ ಓದಿರಿ...

ಈ ವಾರದ ಅತಿಥಿ
ಕಳೆದ ವಾರದ 'ಸದಾ ನಿಮ್ಮೊಂದಿಗೆ' ಸಂಚಿಕೆಯಲ್ಲಿ ಮಾನ್ವಿತಾ ಹರೀಶ್ ಅವರು ಧನಲಕ್ಷ್ಮೀ ಅವರಿಗೋಸ್ಕರ ಕಲ್ಲಂಗಡಿ ಹಣ್ಣು ಮಾರಿ ಸಹಾಯ ಮಾಡಿದ್ರು. ಈ ವಾರದ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ 'ಅಧ್ಯಕ್ಷ' ಶರಣ್ ಅತಿಥಿಯಾಗಿ ಬಂದಿದ್ದಾರೆ.

ಲವಣ್ ಗೆ ಸಹಾಯ ಮಾಡಲು ಮುಂದಾದ ಶರಣ್
ಶರಣ್ ಅವರು ಲವಣ್ ಎಂಬ ಚಿಕ್ಕ ಹುಡುಗನಿಗಾಗಿ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಲವಣ್ ಕಾಯಿಲೆಯಿಂದ ಬಳಲುತ್ತಿದ್ದರೂ, 9 ವರ್ಷದ ಈ ಹುಡುಗ ಗೋಲ್ಡ್ ಮೆಡಲಿಸ್ಟ್ ಅನ್ನೋದು ನಿಮಗೆ ಗೊತ್ತಿರಲಿ.

ಲವಣ್ ಗೆ ಇರುವ ಸಮಸ್ಯೆ ಏನು.?
ಲವಣ್ ಗೆ ಕ್ರೋನ್ಸ್ ಎಂಬ ಕಾಯಿಲೆ ಇದೆ. ಈ ಕಾಯಿಲೆಯಿಂದಾಗಿ ದಿನಕ್ಕೆ 18-20 ಬಾರಿ ಬಹಿರ್ದೆಸೆಗೆ ಹೋಗಬೇಕಾಗುತ್ತದೆ. ಲವಣ್ ತಂದೆ ಆಸ್ಪತ್ರೆಗೆ ಅಂತ ಈಗಾಗಲೇ 80 ಲಕ್ಷ ಖರ್ಚು ಮಾಡಿದ್ದಾರೆ. ಆದರೂ ಇನ್ನೂ ಏನು ಪ್ರಯೋಜನ ಆಗಿಲ್ಲ.

ವಾರಕ್ಕೆ 41 ಸಾವಿರ ಬೇಕು.!
ಲವಣ್ ಗಾಗಿ ಆತನ ತಂದೆ ಈಗಾಗಲೇ ಮನೆ ಕೂಡ ಮಾರಿದ್ದಾರೆ. ಲವಣ್ ಆರೋಗ್ಯಕ್ಕಾಗಿ ವಾರಕ್ಕೆ 41 ಸಾವಿರ ಬೇಕಾಗುತ್ತದೆ. ಲವಣ್ ಚಿಕಿತ್ಸೆಗೆ ಸಹಕಾರಿ ಆಗಲು ಶರಣ್ ಮುಂದಾಗಿದ್ದಾರೆ.

ಪೆನ್ನು ಮಾರಿದ ಶರಣ್
ಬೆಂಗಳೂರಿನ ರಾಜಾಜಿ ನಗರದ ಸಿಗ್ನಲ್ ನಲ್ಲಿ ನಿಂತು ಪೆನ್ನು, ನೋಟ್ ಬುಕ್, ಕೀ ಬಂಚ್, ಗಾಗಲ್ಸ್ ಗಳನ್ನು ನಟ ಶರಣ್ ಮಾರಾಟ ಮಾಡಿದ್ದಾರೆ. ಅದರಿಂದ ಬಂದ ಹಣವನ್ನು ಲವಣ್ ಚಿಕಿತ್ಸೆಗೆ ಕೊಡಲಾಗುತ್ತದೆ.

ಪ್ರಸಾರ ಯಾವಾಗ.?
ಲವಣ್ ಗಾಗಿ ಶರಣ್ ದುಡಿದ ಹಣವೆಷ್ಟು? ಎಂಬುದು ಇದೇ ಭಾನುವಾರ ರಾತ್ರಿ 9ಕ್ಕೆ ಪ್ರಸಾರವಾಗುವ ಉದಯ ಟಿವಿಯ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಗೊತ್ತಾಗುತ್ತದೆ.


Click it and Unblock the Notifications











