ಬೀದಿಬೀದಿಯಲ್ಲಿ ಭೇಲ್ ಪೂರಿ ಮಾರಿದ ನಟ ಸೃಜನ್ ಲೋಕೇಶ್.!
Recommended Video

ಸದಾ ನಿಮ್ಮೊಂದಿಗೆ ಕಾರ್ಯಕ್ರಮದ ಕಳೆದ ವಾರದ ಸಂಚಿಕೆಯಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಭಾಗವಹಿಸಿ ರೇಖಾ ಮಹಾಂತೇಶ್ ಕುಟುಂಬಕ್ಕೋಸ್ಕರ ಕಬ್ಬಿನ ಜ್ಯೂಸ್ ಮಾರಾಟ ಮಾಡಿದರು.
ಅದರಿಂದ ಬಂದ ಒಂದೊಂದು ರೂಪಾಯಿಗೂ ಉದಯ ವಾಹಿನಿ 100 ರೂ. ಸೇರಿಸಿ ಒಟ್ಟು 1,55,000 ರೂಪಾಯಿಯನ್ನ ರೇಖಾ ಮಹಾಂತೇಶ್ ಕುಟುಂಬಕ್ಕೆ ನೀಡಿತ್ತು.
ಅದೇ ರೀತಿ ಈ ವಾರದ ಸಂಚಿಕೆಯಲ್ಲಿ ಗಾರೆ ಕೆಲಸ ಮಾಡುವಾಗ ಶಾಕ್ ಹೊಡೆದು 2 ಕೈ, 1 ಕಾಲು ಕಳೆದುಕೊಂಡಿರುವ ನಾಗೇಶ್ ಅವರಿಗೋಸ್ಕರ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್, ತಾವು ಓದಿದ ಶಾಲೆಗೆ ಹೋಗಿ ಅಲ್ಲಿನ ಮಕ್ಕಳಿಗೆ, ಶಿಕ್ಷಕರಿಗೆ ಪಾನಿಪೂರಿ ಮಾರಾಟ ಮಾಡಿದ್ದಾರೆ.

ಹಾಗೇ, ಸಾರ್ವಜನಿಕ ಸ್ಥಳಗಳಲ್ಲಿ ಗಾಡಿಯನ್ನು ನೂಕುತ್ತಾ ರಸ್ತೆಯಲ್ಲಿ ಭೇಲ್ ಪೂರಿ ಮಾರಿದ್ದಾರೆ. ಹಾಗ್ನೋಡಿದ್ರೆ, ಪಾನಿಪೂರಿ ಮಾರೋದು ಇವರ ಬಾಲ್ಯ ವಯಸ್ಸಿನ ಕನಸಾಗಿತ್ತಂತೆ.
ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್ ಗೆ ಹೋಗಿ ಕಾರ್ಯಕ್ರಮದ ಉದ್ದೇಶವನ್ನ ಸೃಜನ್ ಲೋಕೇಶ್ ತಿಳಿಸಿದಾಗ ಅಲ್ಲಿನ ಮಕ್ಕಳು, ಶಿಕ್ಷಕರು ಸಂಪೂರ್ಣವಾಗಿ ಪ್ರೋತ್ಸಾಹ ನೀಡಿದ್ರು. ಹಾಗೆ ಸೃಜನ್ ಅವರು ತಮ್ಮ ಅಭಿಮಾನಿಗಳ ಕೋರಿಕೆಯಂತೆ ಕೆಲವರ ಜೊತೆ ಸ್ಟೆಪ್ ಹಾಕಿ, ಸೆಲ್ಫಿ ತೆಗೆಸಿಕೊಂಡು ಕಾರ್ಯಕ್ರಮದ ಉದ್ದೇಶವನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾದರು.
'ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್' ಭೇಲ್ ಪೂರಿ ಮಾರಿ ತಂದ ಹಣವಾದರೂ ಎಷ್ಟು? ಎಂಬುದು ಇದೇ ಭಾನುವಾರ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications











