ದೋಸೆ ಮಾರಿದ ಉಪೇಂದ್ರ: ಇದು ರಿಯಲ್ ಸ್ಟಾರ್ ಮಾಡಿದ ರಿಯಲ್ ಕೆಲಸ.!
Recommended Video

ತೆರೆಮೇಲೆ ಉದ್ದುದ್ದ ಡೈಲಾಗ್ ಹೊಡೆದು.. ದುಷ್ಟರ ಮಟ್ಟ ಹಾಕಿ.. ಪ್ರೇಕ್ಷಕರಿಂದ ಶಿಳ್ಳೆ ಗಿಟ್ಟಿಸುವ ತಾರೆಯರು ಇದೀಗ ನಿಜಕ್ಕೂ ಕನ್ನಡಿಗರಿಂದ ಚಪ್ಪಾಳೆ ಗಿಟ್ಟಿಸುವ ಕೆಲಸ ಮಾಡುತ್ತಿದ್ದಾರೆ.
ಕಷ್ಟದಲ್ಲಿ ಇರುವವರಿಗೆ ಹಣ ಸಹಾಯ ಮಾಡುವುದು ಮಾತ್ರವಲ್ಲದೆ, ಜನಸಾಮಾನ್ಯರಂತೆ ಹಾದಿ ಬೀದಿಯಲ್ಲಿ ಕೆಲಸ ಮಾಡಿ ಜನರ ಸಂಕಷ್ಟಕ್ಕೆ ಕನ್ನಡ ಸ್ಟಾರ್ ಗಳು ಸ್ಪಂದಿಸುತ್ತಿದ್ದಾರೆ. ಇವೆಲ್ಲವೂ ಸಾಧ್ಯ ಆಗಿರುವುದು ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿರುವ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಿಂದಾಗಿ.!
ಸೃಜನ್ ಲೋಕೇಶ್ ಪ್ರೊಡಕ್ಷನ್ಸ್ ನಲ್ಲಿ ತಯಾರಾಗುತ್ತಿರುವ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಈಗಾಗಲೇ ರೋರಿಂಗ್ ಸ್ಟಾರ್ ಶ್ರೀಮುರಳಿ, 'ಡಾಲಿ' ಧನಂಜಯ್, ಧ್ರುವ ಸರ್ಜಾ, ನಟಿ ರಶ್ಮಿಕಾ ಮಂದಣ್ಣ, ಪ್ರಿಯಾಂಕಾ ಉಪೇಂದ್ರ ಭಾಗವಹಿಸಿ ನೊಂದ ಜೀವಗಳಿಗೆ ಸಹಾಯ ಹಸ್ತ ಚಾಚಿದ್ದರು.
ಇದೀಗ ರಿಯಲ್ ಸ್ಟಾರ್ ಉಪೇಂದ್ರ ಸರದಿ. ಒಬ್ಬರಿಗೆ ಒಳ್ಳೆಯದು ಆಗಲಿ ಎಂಬ ಕಾರಣಕ್ಕೆ ಸ್ಯಾಂಡಲ್ ವುಡ್ ನ 'ರಿಯಲ್' ಸ್ಟಾರ್ ಉಪೇಂದ್ರ ಹೋಟೆಲ್ ವೊಂದರಲ್ಲಿ ಕೆಲಸ ಮಾಡಿದ್ದಾರೆ. ಮುಂದೆ ಓದಿರಿ...

ದೋಸೆ ಮಾರಿದ ಉಪೇಂದ್ರ
ಚಂದನವನದ ರಿಯಲ್ ಸ್ಟಾರ್ ಉಪೇಂದ್ರ ಬೀದಿ ಬದಿಯ ಹೋಟೆಲ್ ನಲ್ಲಿ ಒಂದು ದಿನದ ಮಟ್ಟಿಗೆ ಕೆಲಸ ಮಾಡಿದ್ದಾರೆ. ಹೋಟೆಲ್ ನಲ್ಲಿ ದೋಸೆ ಮಾಡಿ, ಚಿತ್ರಾನ್ನ, ಕಾಫಿ-ಟೀ ಮಾರಾಟ ಮಾಡಿದ್ದಾರೆ.

'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಉಪೇಂದ್ರ ಭಾಗಿ
ಕಳೆದ ವಾರದ 'ಸದಾ ನಿಮ್ಮೊಂದಿಗೆ' ಸಂಚಿಕೆಯಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಹೂವಿನ ವ್ಯಾಪಾರ ಮಾಡಿ ಪುಷ್ಪಲತಾ ಎಂಬ ಮಹಿಳೆಗೆ ಸಹಾಯ ಮಾಡಿದ್ದರು. ಈ ವಾರದ ಸಂಚಿಕೆಯಲ್ಲಿ ಪ್ರಿಯಾಂಕಾ ಪತಿ ಉಪೇಂದ್ರ ಹೋಟೆಲ್ ನಲ್ಲಿ ಕೆಲಸ ಮಾಡುವ ಮೂಲಕ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಕೋಮಲಗೆ ಸಹಾಯ ಮಾಡುವ ಮುಂದೆ ಬಂದ ಉಪೇಂದ್ರ
ತಂದೆ ತಾಯಿಯನ್ನು ಕಳೆದುಕೊಂಡು, ವಿಕಲ ಚೇತನ ಅಕ್ಕ ಮತ್ತು ತಮ್ಮನನ್ನು ಸಾಕಲು ಕಷ್ಟ ಪಡುತ್ತಿರುವ ಕೋಮಲ ಅವರಿಗಾಗಿ ಸಹಾಯ ಮಾಡಲು ಸೂಪರ್ ಸ್ಟಾರ್ ಉಪೇಂದ್ರ ರೆಡಿಯಾಗಿದ್ದಾರೆ.

ನೆರವಾದ ಉಪೇಂದ್ರ
ಹೋಟೆಲ್ ನಲ್ಲಿ ದೋಸೆ, ಇಡ್ಲಿ ಮತ್ತು ಚಿತ್ರಾನ್ನವನ್ನು ತಯಾರಿಸಿ, ಅದನ್ನು ಮಾರಿದ ಹಣದಿಂದ ಕೋಮಲ ಕುಟುಂಬಕ್ಕೆ ಉಪೇಂದ್ರ ನೆರವಾಗಿದ್ದಾರೆ.

ಉಪೇಂದ್ರ ಸಂಪಾದಿಸಿದ ಹಣ ಎಷ್ಟು.?
ಕೋಮಲಗೋಸ್ಕರ ಉಪೇಂದ್ರ ಸಂಪಾದಿಸಿದ ಹಣ ಎಷ್ಟು? ಇದರ ಜೊತೆಗೆ ಉಪೇಂದ್ರ ಈ ಕುಟುಂಬಕ್ಕೆ ಮಾಡಿದ ಸಹಾಯವೇನು? ಎಂಬುದು ಈ ವಾರದ ಸಂಚಿಕೆಯಲ್ಲಿ ತಿಳಿಯಲಿದೆ. 'ಸದಾ ನಿಮ್ಮೊಂದಿಗೆ' ಇದೇ ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications











