ದೇವಸ್ಥಾನದ ಮುಂದೆ ಗೋಲಿ ಸೋಡಾ ಮಾರಿದ 'ಚಿನ್ನಾರಿಮುತ್ತ' ವಿಜಯ್.!

By Harshitha

Recommended Video

ಸದಾ ನಿಮ್ಮೊಂದಿಗೆ ಕಾರ್ಯಕ್ರಮದಲ್ಲಿ ವಿಜಯ್ ರಾಘವೇಂದ್ರ..! | Filmibeat Kannada

ತೆರೆಮೇಲೆ ಭಿನ್ನ-ವಿಭಿನ್ನ ಪಾತ್ರಗಳನ್ನು ಪೋಷಿಸುವುದು ಸುಲಭ. ಆದ್ರೆ, ನಿಜ ಜೀವನದಲ್ಲಿ ಸಾಮಾನ್ಯ ಜನರಂತೆ ಹಾದಿ ಬೀದಿಯಲ್ಲಿ ಚಿಲ್ಲರೆ ವ್ಯಾಪಾರ ಮಾಡುವುದು, ಹೋಟೆಲ್ ನಲ್ಲಿ ಕೆಲಸ ಮಾಡುವುದು, ಹೂ ಮಾರುವುದು ತೀರಾ ಕಷ್ಟ.!

ಹೊಟ್ಟೆ ಪಾಡಿಗಾಗಿ ಶ್ರೀಸಾಮಾನ್ಯರು ನಾನಾ ಕೆಲಸ ಮಾಡುತ್ತಾರೆ. ಮೈಬಗ್ಗಿಸಿ ದುಡಿಯುವ ಜನರ ಕಷ್ಟವನ್ನು ಅರಿವು ಮಾಡಿಕೊಳ್ಳುವುದರ ಜೊತೆಗೆ ಕಷ್ಟದಲ್ಲಿ ಇರುವ ಜನರಿಗೆ ಸಹಾಯ ಮಾಡಲು ನಮ್ಮ ಕನ್ನಡ ತಾರೆಯರು ಮುಂದಾಗಿದ್ದಾರೆ.

'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಮೂಲಕ ಒಂದು ದಿನ ಕಾಮನ್ ಮ್ಯಾನ್ ತರಹ ಬೀದಿ ಬದಿಯಲ್ಲಿ ಕೆಲಸ ಮಾಡಿ, ಅದರಿಂದ ಬರುವ ಹಣಕ್ಕೆ ಮತ್ತಷ್ಟನ್ನು ಸೇರಿಸಿ ನೋವಿನಲ್ಲಿರುವವರ ಕಣ್ಣೀರು ಒರೆಸುವ ಪ್ರಯತ್ನ ಮಾಡುತ್ತಿದ್ದಾರೆ ನಮ್ಮ ಕನ್ನಡದ ಸ್ಟಾರ್ಸ್.

''ನಾವು ತಾರೆಯರು'' ಎಂಬ ಹಮ್ಮು ಬಿಮ್ಮು ಇಲ್ಲದೆ ರೋರಿಂಗ್ ಸ್ಟಾರ್ ಶ್ರೀಮುರಳಿ, 'ಡಾಲಿ' ಧನಂಜಯ್, 'ಆಕ್ಷನ್ ಪ್ರಿನ್ಸ್' ಧ್ರುವ ಸರ್ಜಾ, ನಟಿ ರಶ್ಮಿಕಾ ಮಂದಣ್ಣ, ಪ್ರಿಯಾಂಕಾ ಉಪೇಂದ್ರ, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಮಣಿ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಭಾಗವಹಿಸಿ ನೊಂದ ಹೃದಯಗಳಿಗೆ ಸಹಾಯ ಹಸ್ತ ಚಾಚಿದ್ದರು. ಇದೀಗ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಸರದಿ. ಮುಂದೆ ಓದಿರಿ...

'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ವಿಜಯ್ ರಾಘವೇಂದ್ರ

'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ವಿಜಯ್ ರಾಘವೇಂದ್ರ

'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಈ ವಾರದ ಅತಿಥಿಯಾಗಿ 'ಚಿನ್ನಾರಿ ಮುತ್ತ' ವಿಜಯ್ ರಾಘವೇಂದ್ರ ಭಾಗವಹಿಸಿದ್ದಾರೆ. ಒಬ್ಬರ ಕಷ್ಟಕ್ಕೆ ಸ್ಪಂದಿಸಲು ವಿಜಯ್ ರಾಘವೇಂದ್ರ ಮುಂದಾಗಿದ್ದಾರೆ.

ಗೋಲಿ ಸೋಡಾ ಮಾರಿದ ವಿಜಯ್ ರಾಘವೇಂದ್ರ

ಗೋಲಿ ಸೋಡಾ ಮಾರಿದ ವಿಜಯ್ ರಾಘವೇಂದ್ರ

'ಸದಾ ನಿಮ್ಮೊಂದಿಗೆ' ಕಾರ್ಯಕ್ರಮಕ್ಕಾಗಿ ದೇವಸ್ಥಾನದ ಮುಂದೆ ಬೀದಿ ಬದಿಯಲ್ಲಿ ನಟ ವಿಜಯ್ ರಾಘವೇಂದ್ರ ಗೋಲಿ ಸೋಡಾ ಮಾರಿದ್ದಾರೆ. ಅಜ್ಜಿಯೊಬ್ಬರಿಗೆ ಸಹಾಯ ಮಾಡಲು ಒಂದು ದಿನದ ಮಟ್ಟಿಗೆ ವಿಜಯ್ ರಾಘವೇಂದ್ರ ಗೋಲಿ ಸೋಡಾ ಮಾರಾಟ ಮಾಡಿದ್ದಾರೆ.

ಬೀಬಿ ಜಾನ್ ಗೆ ಸಹಾಯ

ಬೀಬಿ ಜಾನ್ ಗೆ ಸಹಾಯ

'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಮೂಲಕ ಆರ್ಥಿಕ ಸಂಕಷ್ಟದಲ್ಲಿ ಇರುವ ಬೀಬಿ ಜಾನ್ ಎಂಬ ವಯಸ್ಸಾದ ಮಹಿಳೆಗೆ ಸಹಾಯ ಮಾಡಲು ವಿಜಯ್ ರಾಘವೇಂದ್ರ ಮನಸ್ಸು ಮಾಡಿದ್ದಾರೆ.

ಯಾರೀ ಬೀಬಿ ಜಾನ್

ಯಾರೀ ಬೀಬಿ ಜಾನ್

ನದಿಯಲ್ಲಿ ತೆಪ್ಪವನ್ನು ನಡೆಸುತ್ತಾ ಬೀಬಿ ಜಾನ್ ಜೀವನ ನಡೆಸುತ್ತಿದ್ದರು. ಆದ್ರೆ, ಅವರಿಗೆ ಈಗ ವಯಸ್ಸಾಗಿದೆ. ತೆಪ್ಪ ನಡೆಸಲು ಅವರಿಗೆ ಶಕ್ತಿ ಇಲ್ಲ. ಇವರಿಗೆ ಇರುವ ಸಾಕು ಮಗ ಬುದ್ಧಿಮಾಂದ್ಯ. ಜೀವನ ನಡೆಸಲು ಒದ್ದಾಡುತ್ತಿರುವ ಬೀಬಿ ಜಾನ್ ಗೆ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮ ಸಹಾಯ ಮಾಡುತ್ತಿದೆ.

ಚಿನ್ನಾರಿ ಮುತ್ತ ಸಂಪಾದಿಸಿದ ಹಣ ಎಷ್ಟು.?

ಚಿನ್ನಾರಿ ಮುತ್ತ ಸಂಪಾದಿಸಿದ ಹಣ ಎಷ್ಟು.?

ಚಿನ್ನಾರಿ ಮುತ್ತ ಎಷ್ಟು ಗೋಲಿ ಸೋಡಾ ಮಾರಿದ್ದಾರೆ.? ಅದರಿಂದ ಅವರು ಸಂಪಾದಿಸಿದ ಹಣ ಎಷ್ಟು.? ಎಂಬುದನ್ನ ನೀವು ತಿಳಿದುಕೊಳ್ಳಬೇಕು ಅಂದ್ರೆ, ಇದೇ ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿ ನೋಡಿ. ಯಾಕಂದ್ರೆ, 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮ ಪ್ರಸಾರ ಆಗುವುದು ಆಗಲೇ.!

More from Filmibeat

English summary
Kannada Actor Vijay Raghavendra sold Goli Soda for a new show called 'Sada Nimmondige'. This show will telecast on every Sunday 9PM at Udaya TV
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X