'ವಿಕಲಚೇತನ ಟ್ರಸ್ಟ್'ಗಾಗಿ ಕಲ್ಲಂಗಡಿ ಹಣ್ಣು ಮಾರಿದ ನಟಿ ಮಾನ್ವಿತಾ ಹರೀಶ್

Recommended Video

ಸದಾ ನಿಮ್ಮೊಂದಿಗೆ ಎಂದ ಮಾನ್ವಿತಾ ಕಾಮತ್..! | Filmibeat Kannada

ಆರ್ಥಿಕ ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಹಸ್ತ ಚಾಚುವುದೇ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಉದ್ದೇಶ. ಸಾಮಾನ್ಯ ಜನರ ರೀತಿ ತಾರೆಯರು ಒಂದು ದಿನ ಕೆಲಸ ಮಾಡಿ, ಅದರಿಂದ ಬಂದ ಹಣಕ್ಕೆ ಮತ್ತಷ್ಟು ಸೇರಿಸಿ ಜನರ ಕಣ್ಣೀರನ್ನು ಒರೆಸುವ ಕಾರ್ಯಕ್ರಮ 'ಸದಾ ನಿಮ್ಮೊಂದಿಗೆ'.

ಈಗಾಗಲೇ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ನಟ ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ, ರಿಯಲ್ ಸ್ಟಾರ್ ಉಪೇಂದ್ರ, ಪ್ರಿಯಾಂಕ ಉಪೇಂದ್ರ, ಲವ್ಲಿ ಸ್ಟಾರ್ ಪ್ರೇಮ್, ವಿಜಯ್ ರಾಘವೇಂದ್ರ, ಶ್ರೀಮುರಳಿ, ಪ್ರಿಯಾಮಣಿ, ಧನಂಜಯ್ ಸೇರಿದಂತೆ ಹಲವರು ಬೀದಿಬದಿಯಲ್ಲಿ ಕೆಲಸ ಮಾಡಿ ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡಿದ್ದರು.

ಇದೀಗ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾನ್ವಿತಾ ಹರೀಶ್ ಪಾಲ್ಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ, ಓದಿರಿ...

ಈ ವಾರದ ಅತಿಥಿ

ಈ ವಾರದ ಅತಿಥಿ

ಕಳೆದ ವಾರದ 'ಸದಾ ನಿಮ್ಮೊಂದಿಗೆ' ಸಂಚಿಕೆಯಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಅವರು ದೇವರಾಜ್ ಎಂಬ ಎಳನೀರು ವ್ಯಾಪಾರಿಗೋಸ್ಕರ ಎಳನೀರು ಮಾರಿ ಸಹಾಯ ಮಾಡಿದ್ದನ್ನ ನೀವು ನೋಡಿದ್ರಿ. ಇದೀಗ ನಟಿ ಮಾನ್ವಿತಾ ಹರೀಶ್ ಸರದಿ.

ಧನಲಕ್ಷ್ಮಿ ಗೆ ಸಹಾಯ

ಧನಲಕ್ಷ್ಮಿ ಗೆ ಸಹಾಯ

ಈ ವಾರದ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ 'ಕೆಂಡಸಂಪಿಗೆ' ಚೆಲುವೆ ಮಾನ್ವಿತಾ ಹರೀಶ್ ಅವರು ಧನಲಕ್ಷ್ಮಿ ಎಂಬುವರಿಗೆ ಸಹಾಯ ಮಾಡಲು ಭಾಗವಹಿಸಿದ್ದಾರೆ. ಹಾಗೇ, ಟ್ರಸ್ಟ್ ಒಂದಕ್ಕೆ ಸಹಾಯ ಹಸ್ತ ಚಾಚಲು ಮಾನ್ವಿತಾ ಮುಂದಾಗಿದ್ದಾರೆ.

ಪೋಲಿಯೋ ಅಟ್ಯಾಕ್

ಪೋಲಿಯೋ ಅಟ್ಯಾಕ್

ಚಿಕ್ಕ ವಯಸ್ಸಿನಲ್ಲೇ ಪೋಲಿಯೋ ಅಟ್ಯಾಕ್ ಆಗಿ ಬದುಕು ಸಾಗಿಸೋಕೆ ಕಷ್ಟಪಡುತ್ತಿರುವಾಕೆ ಧನಲಕ್ಷ್ಮಿ. ತನ್ನ ಹಾಗೆ ಇರುವ ಬೇರೆ ವಿಕಲಚೇತನರಿಗೆ ಕಷ್ಟ ಬರಬಾರದೆಂದು 'ನಮಿತಾಂಜಲಿ' ಎನ್ನುವ ಗೆಳತಿಯ ಹೆಸರಲ್ಲಿ ಒಂದು ಟ್ರಸ್ಟ್ ಓಪನ್ ಮಾಡಿ ಒಂದಷ್ಟು ವಿಕಲಚೇತನರಿಗೆ ಆಶ್ರಯ ಕೊಟ್ಟಿದ್ದಾರೆ.

ಕುತೂಹಲ ಇದೆ

ಕುತೂಹಲ ಇದೆ

ಇಲ್ಲಿ ಒಂದು ವಿಶೇಷ ಎಂದರೆ ನಮಿತಾಂಜಲಿ ಎನ್ನುವರು ಈ ಧನಲಕ್ಷ್ಮಿಯ ಸ್ನೇಹಿತೆ. ಇವರ ಹೆಸರಿನಲ್ಲಿ ಟ್ರಸ್ಟ್ ಪ್ರಾರಂಭಿಸಿದ್ದು ಏಕೆ? ಎಂಬುದನ್ನು ಈ ವಾರದ ಸಂಚಿಕೆಯಲ್ಲಿ ನೋಡಬಹುದು.

ಕಲ್ಲಂಗಡಿ ಹಣ್ಣು ಮಾರಿದ ಮಾನ್ವಿತಾ

ಕಲ್ಲಂಗಡಿ ಹಣ್ಣು ಮಾರಿದ ಮಾನ್ವಿತಾ

ವಿಕಲಚೇತನ ಟ್ರಸ್ಟ್ ಗೆ ಕೈ ಜೋಡಿಸಲು ಮಾನ್ವಿತಾ ಹರೀಶ್ ಕಲ್ಲಂಗಡಿ ಹಣ್ಣನ್ನು ಬೆಂಗಳೂರಿನ ರಾಜಾಜಿನಗರದಲ್ಲಿ ಮಾರಿದ್ದಾರೆ. ಹಾಗಾದರೆ ಮಾನ್ವಿತಾ ಮಾರಿದ ಕಲ್ಲಂಗಡಿ ಹಣ್ಣಿನ ಒಟ್ಟು ಮೊತ್ತ ಎಷ್ಟು? ಇದೇ ಭಾನುವಾರ ನಿಮಗೆ ಉತ್ತರ ಸಿಗಲಿದೆ.

ಧನಲಕ್ಷ್ಮಿಗೆ ಸಿಕ್ಕ ಹಣ ಎಷ್ಟು.?

ಧನಲಕ್ಷ್ಮಿಗೆ ಸಿಕ್ಕ ಹಣ ಎಷ್ಟು.?

ಧನಲಕ್ಷ್ಮಿಯ ಟ್ರಸ್ಟ್ ಗೆ ಸೇರಿದ ಹಣ ಎಷ್ಟು? ಎಂಬುದು ಈ ವಾರದ 'ಸದಾ ನಿಮ್ಮೊಂದಿಗೆ'ಯಲ್ಲಿ ಗೊತ್ತಾಗುತ್ತೆ. "ಸದಾ ನಿಮ್ಮೊಂದಿಗೆ" ಇದೇ ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

More from Filmibeat

English summary
Kannada Actress Manvitha Harish sold Water Melon for a new show called 'Sada Nimmondige'. This show will telecast on every Sunday 9PM at Udaya TV.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X