ರಸ್ತೆ ಬದಿಯಲ್ಲಿ ಬೊಟ್ಟು, ಬಾಚಣಿಗೆ ಮಾರಿದ ಪಂಚಭಾಷಾ ಚತುರೆ ಪ್ರಿಯಾಮಣಿ
Recommended Video

'ರಾಮ್', 'ವಿಷ್ಣುವರ್ಧನ', 'ಅಣ್ಣ ಬಾಂಡ್', 'ಅಂಬರೀಶ', 'ದನ ಕಾಯೋನು'... ಹೀಗೆ ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡ ಸಿನಿ ಪ್ರಿಯರಿಗೆ ಪ್ರಿಯಾಮಣಿ ಪರಿಚಿತರಾಗಿದ್ದಾರೆ.
ಬರೀ ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಅಲ್ಲ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಚಿತ್ರರಂಗದಲ್ಲಿಯೂ ನಟಿ ಪ್ರಿಯಾಮಣಿ ಸಿಕ್ಕಾಪಟ್ಟೆ ಫೇಮಸ್. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು, ಪಂಚಭಾಷಾ ಚತುರೆ ಆಗಿ ಮಿನುಗುತ್ತಿರುವ ನಟಿ ಪ್ರಿಯಾಮಣಿ ಇದೀಗ ರಸ್ತೆ ಬದಿಯಲ್ಲಿ ಬೊಟ್ಟು, ಬಾಚಣಿಗೆ, ಹೇರ್ ಬ್ಯಾಂಡ್, ಕನ್ನಡಿ ಮಾರಾಟ ಮಾಡಿದ್ದಾರೆ.
ಇದು ಯಾವುದೋ ಸಿನಿಮಾ ಶೂಟಿಂಗ್ ಇರಬೇಕು ಅಂತ ಭಾವಿಸಬೇಡಿ. ಕುಟುಂಬ ಒಂದಕ್ಕೆ ಸಹಾಯ ಆಗಲಿ ಎಂದು ಪ್ರಿಯಾಮಣಿ ಹೀಗೆ 'ರಿಯಲ್' ಆಗಿ ರಸ್ತೆ ಬದಿಯಲ್ಲಿ ಅಲಂಕಾರಿಕ ವಸ್ತುಗಳನ್ನ ಮಾರಿದ್ದಾರೆ. ಅದು 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಮೂಲಕ. ಮುಂದೆ ಓದಿರಿ...

ಪ್ರಿಯಾಮಣಿ ಸರದಿ
ಕೋಮಲ ಕುಟುಂಬಕ್ಕೆ ಒಳಿತಾಗಲಿ ಎಂದು ಕಳೆದ ವಾರ ರಿಯಲ್ ಸ್ಟಾರ್ ಉಪೇಂದ್ರ ದೋಸೆ, ಇಡ್ಲಿ, ಚಿತ್ರಾನ್ನ ಮಾರಿ ಹಣ ಸಹಾಯ ಮಾಡಿದ್ದರು. ಇದೀಗ ಪಂಚಭಾಷಾ ನಟಿ ಪ್ರಿಯಾಮಣಿ ಸರದಿ.

ಅಲಂಕಾರಿಕ ವಸ್ತುಗಳನ್ನು ಮಾರಿದ ಪ್ರಿಯಾಮಣಿ
ಮಂಜುಳಾ-ಸಿದ್ಧರಾಜು ಅವರಿಗೋಸ್ಕರ ಸಹಾಯ ಮಾಡೋದಕ್ಕೆ ಪ್ರಿಯಾಮಣಿ ಮುಂದಾಗಿದ್ದಾರೆ. ಇದಕ್ಕಾಗಿ ರಸ್ತೆ ಬದಿಯಲ್ಲಿ ಅಲಂಕಾರಿಕ ವಸ್ತುಗಳನ್ನು ಪ್ರಿಯಾಮಣಿ ಮಾರಾಟ ಮಾಡಿದ್ದಾರೆ.

ಮಂಜುಳಾ ಅವರ ಸಮಸ್ಯೆ ಏನು.?
ಮಂಜುಳಾ ಅವರಿಗೆ ಕಿಡ್ನಿ ಸಮಸ್ಯೆ ಇದೆ ಮತ್ತು ಮಗನಿಗೆ ಹೃದಯದಲ್ಲಿ ಸಮಸ್ಯೆ ಇದೆ. ಧೋಬಿ ಕೆಲಸ ಮಾಡುತ್ತಿರುವ ಸಿದ್ಧರಾಜುಗೆ ಬರುವ ಹಣ ಕುಟುಂಬ ನಿರ್ವಹಣೆಗೆ ಸಾಲುತ್ತಿಲ್ಲ. ಚಿಕಿತ್ಸೆಗಾಗಿ ಸಾಲ ಮಾಡಿಕೊಂಡಿದ್ದಾರೆ. ಇಂತಹ ಕುಟುಂಬಕ್ಕೆ ನೆರವಾಗಲು ಪ್ರಿಯಾಮಣಿ ಮನಸ್ಸು ಮಾಡಿದ್ದಾರೆ.

ಪ್ರಿಯಾಮಣಿ ಬಳೆ ಮಾರಿದ್ದು ಎಲ್ಲಿ.?
ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದ ಮುಂದೆ ಪ್ರಿಯಾಮಣಿ ಬಳೆ, ರಿಂಗ್, ಹೇರ್ ಬ್ಯಾಂಡ್, ಕ್ಲಿಪ್ ಗಳನ್ನು ಮಾರಾಟ ಮಾಡಿದ್ದಾರೆ. ಅಲ್ಲದೇ, ಅಲ್ಲಿ ನೆರೆದಿದ್ದವರ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ಪ್ರಿಯಾಮಣಿ ಗಳಿಸಿದ ಹಣ ಎಷ್ಟು.?
ಪ್ರಿಯಾಮಣಿ ಗಳಿಸಿದ ಒಟ್ಟು ಹಣವೆಷ್ಟು.? ಮಂಜುಳಾ ಮತ್ತು ಸಿದ್ಧರಾಜು ಕುಟುಂಬಕ್ಕೆ ಸಿಗುವ ಹಣವೆಷ್ಟು.? ಎಂಬುದನ್ನು ಈ ವಾರದ 'ಸದಾ ನಿಮ್ಮೊಂದಿಗೆ' ಸಂಚಿಕೆಯಲ್ಲಿ ನೋಡಬಹುದು.

ಪ್ರಸಾರ ಯಾವಾಗ.?
'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಪ್ರಿಯಾಮಣಿ ಭಾಗವಹಿಸಿರುವ ಸಂಚಿಕೆ ಇದೇ ಭಾನುವಾರ (ಸೆಪ್ಟೆಂಬರ್ 2, 2018) ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications