ಒಂದೊಳ್ಳೆ ಕಾರಣಕ್ಕಾಗಿ ಗಾಂಧಿ ಬಜಾರ್ ನಲ್ಲಿ ಹೂ ಮಾರಿದ ಪ್ರಿಯಾಂಕಾ ಉಪೇಂದ್ರ.!
ಬರೀ ಮನರಂಜನೆ ನೀಡುವುದು ಮಾತ್ರ ಅಲ್ಲ, ಎಂಟರ್ ಟೇನ್ಮೆಂಟ್ ಜೊತೆಗೆ ಜನರಿಗೆ ಸಹಾಯ ಹಸ್ತ ಚಾಚುವುದು ಉದಯ ವಾಹಿನಿಯ ಉದ್ದೇಶ. ಈ ನಿಟ್ಟಿನಲ್ಲಿ ರೂಪುಗೊಂಡ ಕಾರ್ಯಕ್ರಮವೇ 'ಸದಾ ನಿಮ್ಮೊಂದಿಗೆ'.
ಲೋಕೇಶ್ ಪ್ರೊಡಕ್ಷನ್ಸ್ ಮೂಲಕ ರೆಡಿ ಆಗುತ್ತಿರುವ 'ಸದಾ ನಿಮ್ಮೊಂದಿಗೆ' ಶೋ ಪ್ರತಿ ವಾರಾಂತ್ಯದಲ್ಲಿ ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿದೆ. ಇದೇ ಕಾರ್ಯಕ್ರಮಕ್ಕಾಗಿ ನಟಿ ರಶ್ಮಿಕಾ ಮಂದಣ್ಣ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿದ್ದರು.
ರೈತರ ಕುಟುಂಬಕ್ಕೆ ಸಹಾಯ ಆಗಲಿ ಅಂತ ರೋರಿಂಗ್ ಸ್ಟಾರ್ ಶ್ರೀಮುರಳಿ ಕಬ್ಬಿನ ಹಾಲು ಮಾರಿದ್ದರು. ಎಲೆಕ್ಟ್ರಿಕ್ ಶಾಕ್ ನಿಂದ ಕೈಕಾಲು ಕಳೆದುಕೊಂಡಿದ್ದ ನಾಗೇಶ್ ಗಾಗಿ ಸೃಜನ್ ಲೋಕೇಶ್ ಭೇಲ್ ಪೂರಿ, ಪಾನಿ ಪೂರಿ ಮಾರಾಟ ಮಾಡಿದ್ದರು.
ಇನ್ನೂ ಡಾಲಿ ಧನಂಜಯ್ ಕೂಡ ಮೂಸಂಬಿ ಜ್ಯೂಸ್ ಮಾರಿ ರವಿ ಕುಟುಂಬಕ್ಕೆ ಕೈಲಾದ ಸಹಾಯ ಮಾಡಿದ್ದರು. ಇದೀಗ ನಟಿ ಪ್ರಿಯಾಂಕಾ ಉಪೇಂದ್ರ ಸರದಿ. ಮುಂದೆ ಓದಿರಿ...

'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಉಪೇಂದ್ರ
ಉತ್ತಮ ಉದ್ದೇಶ ಹೊಂದಿರುವ ಉದಯ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಉಪೇಂದ್ರ ಮಡದಿ ಪ್ರಿಯಾಂಕಾ ಭಾಗವಹಿಸಿದ್ದಾರೆ.

ಹೂವಿನ ವ್ಯಾಪಾರ ಮಾಡಿದ ಪ್ರಿಯಾಂಕಾ ಉಪೇಂದ್ರ
'ಹೂವೇ.. ಹೂವೇ...' ಅಂತ ಪ್ರಿಯಾಂಕಾ ಹಾಡಿ ಕುಣಿದಿದ್ದನ್ನ ನೀವು ಸಿನಿಮಾದಲ್ಲಿ ನೋಡಿರಬಹುದು. ಇದೀಗ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮಕ್ಕಾಗಿ ಗಾಂಧಿ ಬಜಾರ್ ನಲ್ಲಿ ಹೂವಿನ ವ್ಯಾಪಾರ ಮಾಡಿದ್ದಾರೆ ನಟಿ ಪ್ರಿಯಾಂಕಾ ಉಪೇಂದ್ರ.

ಪುಷ್ಪಲತಾ ಕುಟುಂಬಕ್ಕೆ ಸಹಾಯ
ಪುಷ್ಪಲತಾ ಕುಟುಂಬಕ್ಕೆ ಸಹಾಯ ಆಗಲಿ ಎಂದು ಪ್ರಿಯಾಂಕಾ ಉಪೇಂದ್ರ ಹೂ ಮಾರಿದ್ದಾರೆ. ಪುಷ್ಪಲತಾ ಅವರಿಗೆ 4 ಜನ ಹೆಣ್ಮಕ್ಕಳು. ಬಡತನದಲ್ಲಿ ಜೀವನ ಸಾಗಿಸುತ್ತಿರುವ ಇವರ ಕೊನೆಯ ಮಗಳು ನಯನಾ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ನಯನಾ ಚಿಕಿತ್ಸೆಗಾಗಿ ಪ್ರಿಯಾಂಕಾ ಉಪೇಂದ್ರ ಹೂವಿನ ವ್ಯಾಪಾರ ಮಾಡಿದ್ದಾರೆ.

ಎಷ್ಟು ಸಂಪಾದನೆ ಮಾಡಿದರು.?
ಹೂ ಮಾರಾಟ ಮಾಡಿದ ಪ್ರಿಯಾಂಕಾ ಉಪೇಂದ್ರ ಸಂಪಾದನೆ ಮಾಡಿದೆಷ್ಟು.? ಪುಷ್ಪಲತಾ ಕುಟುಂಬಕ್ಕೆ ಸಿಕ್ಕ ಹಣವೆಷ್ಟು.? ಈ ಪ್ರಶ್ನೆಗಳಿಗೆ ಉತ್ತರ ಬರುವ ಭಾನುವಾರ ರಾತ್ರಿ 9 ಗಂಟೆಗೆ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಸಿಗಲಿದೆ.


Click it and Unblock the Notifications











