ರೀಲ್ ಅಲ್ಲ ರಿಯಲ್: ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿದ ರಶ್ಮಿಕಾ ಮಂದಣ್ಣ
Recommended Video

ಒಂದೇ ವಾರಕ್ಕೆ 'ಸದಾ ನಿಮ್ಮೊಂದಿಗೆ' ರಿಯಾಲಿಟಿ ಶೋ ಕರುನಾಡ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. "ಇದು ರಿಯಾಲಿಟಿ ಶೋ ಅಲ್ಲ. ಇದೇ ರಿಯಲ್ಲಾದ ಶೋ.!" ಎಂದು ಹಿರಿಯ ನಟಿ ಲಕ್ಷ್ಮಿ ಹೇಳಿದ ಮಾತಿಗೆ ಮೊದಲ ಸಂಚಿಕೆಯಲ್ಲಿಯೇ ಸರಿಯಾದ ಅರ್ಥ ಕಲ್ಪಿಸಿದ್ದು ಸರ್ಜಾ ಫ್ಯಾಮಿಲಿಯ 'ಭರ್ಜರಿ' ಹುಡುಗ ಧ್ರುವ ಸರ್ಜಾ.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಆಟೋ ಓಡಿಸಿ, ಆಟೋ ಡ್ರೈವರ್ ಒಬ್ಬರ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದರು. ಇದೇ ರೀತಿಯಲ್ಲಿ ವಾರ ವಾರವೂ ಒಬ್ಬೊಬ್ಬ ಸೆಲೆಬ್ರಿಟಿಗಳಿಂದ ಇಂತಹ ಸಾಮಾಜಿಕ ಕಳಕಳಿಯ ಸಂಚಿಕೆಗಳು ಉದಯ ಟಿವಿಯಲ್ಲಿ ಪ್ರತಿ ಭಾನುವಾರ ರಾತ್ರಿ 9ಕ್ಕೆ ಪ್ರಸಾರ ಆಗಲಿದೆ.
ಈ ವಾರದ ಸಂಚಿಕೆಯಲ್ಲಿ 'ಕಿರಿಕ್ ಹುಡುಗಿ' ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಮುಂದೆ ಓದಿರಿ...

ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿದ ರಶ್ಮಿಕಾ ಮಂದಣ್ಣ
'ಕಿರಿಕ್ ಪಾರ್ಟಿ' ಸಿನಿಮಾ ಮಾಡಿದ್ಮೇಲೆ ಸ್ಟಾರ್ ನಟಿಯಾದ ರಶ್ಮಿಕಾ ಮಂದಣ್ಣ ಇದೀಗ ಓರ್ವ ಹುಡುಗಿಗೆ ಸಹಾಯ ಮಾಡಲು ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿದ್ದಾರೆ.

ಪಲ್ಲವಿಗೆ ಸಹಾಯ ಮಾಡಲು...
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಪಲ್ಲವಿಯವರಿಗೆ ತಮ್ಮ ಕೈಲಾದ ಸಹಾಯ ಮಾಡೋದಕ್ಕೆ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿದ್ದಾರೆ ನಟಿ ರಶ್ಮಿಕಾ ಮಂದಣ್ಣ.

ಮನಃಪೂರ್ವಕವಾಗಿ ಒಪ್ಪಿಕೊಂಡ ರಶ್ಮಿಕಾ
'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಉದ್ದೇಶ ತಿಳಿಸಿದ ತಕ್ಷಣ ಮನಃಪೂರ್ವಕವಾಗಿ ಒಪ್ಪಿಕೊಂಡರು ನಟಿ ರಶ್ಮಿಕಾ ಮಂದಣ್ಣ. ಪಲ್ಲವಿ ತಂದೆ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ, ಅದೇ ಕೆಲಸ ಮಾಡಲು ರಶ್ಮಿಕಾ ಮಂದಣ್ಣ ಮುಂದಾದರು. ರಾಜಾಜಿನಗರದ ಪೆಟ್ರೋಲ್ ಬಂಕ್ ಒಂದಕ್ಕೆ ಭೇಟಿ ಕೊಟ್ಟು, ಆ ಪೆಟ್ರೋಲ್ ಬಂಕ್ ಮಾಲೀಕರ ಹತ್ತಿರ ಹೋಗಿ, ''ನಾನು ನಿಮ್ಮ ಪೆಟ್ರೋಲ್ ಬಂಕ್ ಅಲ್ಲಿ ಒಂದು ದಿನ ಕೆಲಸ ಮಾಡುತ್ತೇನೆ. ಒಂದು ದಿನದ ಸಂಬಳವನ್ನ ನನಗೆ ಕೊಡಿ. ಅದರಿಂದ ಪಲ್ಲವಿಗೆ ಸಹಾಯವಾಗುತ್ತದೆ'' ಎಂದು ಹೇಳಿ ಕೆಲಸ ಮಾಡಲು ಶುರು ಮಾಡಿದರು.

ಲವಲವಿಕೆಯಿಂದ ಕೆಲಸ ಮಾಡಿದ ರಶ್ಮಿಕಾ
ಮೊದಲನೇ ಸಲ ಪೆಟ್ರೋಲ್ ಹಾಕ್ತಿದ್ರೂ, ಯಾವುದೇ ಗಡಿಬಿಡಿ ಇಲ್ಲದೇ ತುಂಬಾ ಲವಲವಿಕೆಯಿಂದ ರಶ್ಮಿಕಾ ಮಂದಣ್ಣ ಕೆಲಸ ಮಾಡಿದ್ರು. ಅಲ್ಲಿಗೆ ಪೆಟ್ರೋಲ್ ಹಾಕಿಸಲು ಬಂದ ಅಭಿಮಾನಿಗಳ ಕೋರಿಕೆಯನ್ನ ಈಡೇರಿಸಿದರು.

ಪಲ್ಲವಿಗೆ ಇದ್ದ ಹಣದ ಅವಶ್ಯಕತೆ ಎಷ್ಟು.?
ಪಲ್ಲವಿಗೋಸ್ಕರ ಆ ಒಂದು ದಿನ ಪೆಟ್ರೋಲ್ ಬಂಕ್ ಅಲ್ಲಿ ಕೆಲಸ ಮಾಡಿ ದುಡಿದ ಹಣವನ್ನು ಪಲ್ಲವಿ ಕುಟುಂಬಕ್ಕೆ ನೀಡಿ ರಶ್ಮಿಕಾ ಮಂದಣ್ಣ ಸಹಾಯ ಮಾಡಿದ್ದಾರೆ. ಪಲ್ಲವಿಯವರಿಗೆ ಎಷ್ಟು ದುಡ್ಡಿನ ಅವಶ್ಯಕತೆ ಇತ್ತು.? ರಶ್ಮಿಕಾ ಅವರು ಎಷ್ಟು ಸಂಪಾದನೆ ಮಾಡಿಕೊಟ್ರು ಎಂಬುದನ್ನ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಮುಖಾಂತರ ಇದೇ ಭಾನುವಾರ ರಾತ್ರಿ 9ಕ್ಕೆ ಉದಯ ವಾಹಿನಿಯಲ್ಲಿ ವೀಕ್ಷಿಸಿ..


Click it and Unblock the Notifications











