ಆ ಮಕ್ಕಳಿಗಾಗಿ ಬಹುದೊಡ್ಡ ಸಹಾಯ ಮಾಡಿದ ಉಪೇಂದ್ರ

By Bharath Kumar

ಸೃಜನ್ ಲೋಕೇಶ್ ಪ್ರೊಡಕ್ಷನ್ಸ್ ನಲ್ಲಿ ಮೂಡಿ ಬರುತ್ತಿರುವ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಈಗಾಗಲೇ ರೋರಿಂಗ್ ಸ್ಟಾರ್ ಶ್ರೀಮುರಳಿ, 'ಡಾಲಿ' ಧನಂಜಯ್, ಧ್ರುವ ಸರ್ಜಾ, ನಟಿ ರಶ್ಮಿಕಾ ಮಂದಣ್ಣ, ಪ್ರಿಯಾಂಕಾ ಉಪೇಂದ್ರ ಭಾಗವಹಿಸಿ ನೊಂದ ಜೀವಗಳಿಗೆ ಸಹಾಯ ಹಸ್ತ ಚಾಚಿದ್ದಾರೆ.

ಈಗ ರಿಯಲ್ ಸ್ಟಾರ್ ಉಪೇಂದ್ರ ಅವರು ಭಾಗವಹಿಸಿ, ಹೋಟೆಲ್ ವೊಂದರಲ್ಲಿ ಕೆಲಸ ಮಾಡಿ ಮೂವರು ಮಕ್ಕಳಿಗೆ ಸಹಾಯ ಮಾಡಿದ್ದಾರೆ. ಬೀದಿ ಬದಿಯ ಹೋಟೆಲ್ ನಲ್ಲಿ ಒಂದು ದಿನದ ಮಟ್ಟಿಗೆ ಕೆಲಸ ಮಾಡಿದ ಉಪ್ಪಿ, ಹೋಟೆಲ್ ನಲ್ಲಿ ದೋಸೆ ಮಾಡಿ, ಚಿತ್ರಾನ್ನ, ಕಾಫಿ-ಟೀ ಮಾರಾಟ ಮಾಡಿದ್ದಾರೆ.

ಇದೆಲ್ಲಾ ಮಾಡಿದ್ದು ಆ ಮೂವರು ಮಕ್ಕಳಿಗಾಗಿ. ಈ ಕೆಲಸದಿಂದ ಉಪೇಂದ್ರ ಅವರಿಗೆ ಸಿಕ್ಕ ಹಣವನ್ನ ಆ ಮಕ್ಕಳಿಗೆ ನೀಡಿದರು. ಆದ್ರೆ, ಆ ಮಕ್ಕಳ ಭವಿಷ್ಯಕ್ಕಾಗಿ ಉಪ್ಪಿ ಮತ್ತೊಂದು ಮಹತ್ವದ ಕೆಲಸ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮುಂದೆ ಓದಿ.....

ಆಟದಿಂದ ಬಂದಿದ್ದು 1.90 ಲಕ್ಷ

ಆಟದಿಂದ ಬಂದಿದ್ದು 1.90 ಲಕ್ಷ

ಹೋಟೆಲ್ ನಲ್ಲಿ ಕೆಲಸ ಮಾಡಿ ಸಂಪಾದನೆ ಮಾಡಿದ ದುಡ್ಡು ಮತ್ತು ಅದಕ್ಕೆ ಸೇರಿಸಿ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ನೀಡಿದ ದುಡ್ಡು ಸೇರಿ 1.90 ಲಕ್ಷವನ್ನ ಮೂವರು ಮಕ್ಕಳಿಗೆ ನೀಡಲಾಯಿತು. ಇದರ ಜೊತೆ ಉಪೇಂದ್ರ ಅವರು ಬಹುದೊಡ್ಡ ಸಹಾಯ ಮಾಡಿ ಗಮನ ಸೆಳೆದರು.

1 ಲಕ್ಷ ನೀಡಿದ ಉಪೇಂದ್ರ

1 ಲಕ್ಷ ನೀಡಿದ ಉಪೇಂದ್ರ

'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಿಂದ ಆ ಮಕ್ಕಳಿಗೆ ಒಟ್ಟು 1.90 ಲಕ್ಷ ಹಣ ನೀಡಲಾಯಿತು. ಈ ಮಕ್ಕಳ ಭವಿಷ್ಯಕ್ಕಾಗಿ ಉಪೇಂದ್ರ ಅವರು ತಮ್ಮ ಸ್ವಂತ ಹಣದಿಂದ ಒಂದು ಲಕ್ಷ ನೆರವು ನೀಡಿದರು. ಅಂದ್ರೆ, ಉಪೇಂದ್ರ ಅವರ ಟ್ರಸ್ಟ್ ಕಡೆಯಿಂದ ಈ ಹಣ ನೀಡುವುದಾಗಿ ಘೋಷಿಸಿದರು.

ಉಪ್ಪಿಗೆ ಸಾಥ್ ನೀಡಿದ ಲಕ್ಷ್ಮಿ

ಉಪ್ಪಿಗೆ ಸಾಥ್ ನೀಡಿದ ಲಕ್ಷ್ಮಿ

'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಿಂದ 1.90 ಲಕ್ಷ ಮತ್ತು ಉಪೇಂದ್ರ ಅವರು ನೀಡಿದ ಒಂದು ಲಕ್ಷದ ಜೊತೆಗೆ ನಟಿ ಹಾಗೂ ಕಾರ್ಯಕ್ರಮದ ನಿರೂಪಕಿ ಲಕ್ಷ್ಮಿ ಅವರು ಹತ್ತು ಸಾವಿರ ಸೇರಿಸಿ, ಒಟ್ಟು ಮೂರು ಲಕ್ಷ ಹಣವನ್ನ ಆ ಮಕ್ಕಳಿಗಾಗಿ ನೀಡಿದರು.

ಯಾರು ಆ ಮಕ್ಕಳು

ಯಾರು ಆ ಮಕ್ಕಳು

ತಂದೆ ತಾಯಿಯನ್ನು ಕಳೆದುಕೊಂಡು, ವಿಕಲ ಚೇತನ ಅಕ್ಕ ಮತ್ತು ತಮ್ಮನನ್ನು ಸಾಕಲು ಕಷ್ಟ ಪಡುತ್ತಿರುವ ಕೋಮಲ ಅವರಿಗೆ ಸೂಪರ್ ಸ್ಟಾರ್ ಉಪೇಂದ್ರ ಸಹಾಯ ಮಾಡಿದ್ದಾರೆ. ಹೋಟೆಲ್ ನಲ್ಲಿ ದೋಸೆ, ಇಡ್ಲಿ ಮತ್ತು ಚಿತ್ರಾನ್ನವನ್ನು ತಯಾರಿಸಿ, ಅದನ್ನು ಮಾರಿದ ಹಣದಿಂದ ಕೋಮಲ ಕುಟುಂಬಕ್ಕೆ ಉಪೇಂದ್ರ ನೆರವಾಗಿದ್ದಾರೆ.

More from Filmibeat

English summary
Kannada Actor Upendra sold Dosa, Chitranna in a Hotel for a new show called 'Sada Nimmondige'. and he donate 1 lakh rupees for Komala.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X