ನಾನು ನಿಮ್ಮನ್ನು ಸಡೆ ಸುಧಿ ಅಂತ ಕರೀಲಾ ? ಕಿಚ್ಚನ ಖಂಡತುಂಡ ಮಾತುಗಳಿಗೆ ಕಾಕ್ರೋಚ್ ವಿಲವಿಲ
ಮಾತು ಬೆಳ್ಳಿ ಮೌನ ಬಂಗಾರ ಎಂಬ ಮಾತು ಶತಶತಮಾನಗಳಿಂದ ಚಾಲನೆಯಲ್ಲಿದೆ. ಈ ಮಾತಿಗೆ ವಿವಿಧ ಕಾಲಗಳಲ್ಲಿ ವಿವಿಧ ವಿವರಣೆಗಳನ್ನು ಕೂಡ ನೀಡಲಾಗಿದೆ. ಮಾತಿನಲ್ಲಿಯೇ ಕಾಲಹರಣ ಮಾಡುವರಿಗಾಗಿಯೇ ಈ ಮಾತನ್ನು ಹೇಳಲಾಗಿದೆಯಾ ಗೊತ್ತಿಲ್ಲ. ಇನ್ನು ಮಾತು ಕೆಲವೊಮ್ಮೆ ಪವಾಡವನ್ನು ಮಾಡಬಹುದು. ಬದುಕಿನಲ್ಲಿ ನಿರಾಶೆಯಾದವರಿಗೆ ಭರವಸೆಯನ್ನು ನೀಡಬಹುದು. ಬದುಕಿನ ಜಂಜಾಟದಲ್ಲಿ ನರಳುವವರಿಗೆ ಹೊಸ ಜೀವನವನ್ನು ಕೂಡ ನೀಡಬಲ್ಲದು.
ಆದರೆ ಈಗೀಗ ಈ ಮಾತು ಮನೆಯನ್ನು ಕೆಡಿಸುತ್ತಿದೆ. ಮನಸನ್ನು ಕೂಡ ಕೆಡಿಸುತ್ತಿದೆ. ದ್ವೇಷವನ್ನು ಬಿತ್ತುವಲ್ಲಿ ಕೂಡ ಮಾತು ಪ್ರಮುಖ ಪಾತ್ರ ವಹಿಸುತ್ತಿದೆ.ಇದಕ್ಕೆ ಕನ್ನಡದ ''ಬಿಗ್ ಬಾಸ್''ಗಿಂತ ಬೇರೊಂದು ಉದಾಹರಣೆ ಸದ್ಯಕ್ಕೆ ಇಲ್ಲ.

ಮತ್ತೊಬ್ಬರ ಖಾಸಗೀ ಬದುಕಿನ ಮೇಲಿರೋ ಮನುಷ್ಯ ಸಹಜ ಕ್ಯೂರಿಯಾಸಿಟಿಯನ್ನೇ ಬಂಡವಾಳ ಮಾಡಿಕೊಂಡ ''ಬಿಗ್ ಬಾಸ್'' ಕಾರ್ಯಕ್ರಮವನ್ನು ಜನ ನೋಡುತ್ತಲೇ ಬೈಯ್ಯುತ್ತಾರೆ. ಬೈಯ್ಯುತ್ತಲೇ ನೋಡುತ್ತಾರೆ.
ಇಂತಹ ಕನ್ನಡದ ''ಬಿಗ್ ಬಾಸ್''ನಲ್ಲಿ ಕಳೆದ ವಾರ ಕಾಕ್ರೋಚ್ ಸುಧಿ ಸಡೆ ಎಂಬ ಪದವನ್ನು ಉಪಯೋಗಿಸಿದ್ದರು. ಈ ಮೊದಲೇ ಮನೆಯ ಬಾಕಿ ಸದಸ್ಯರಿಂದ ಹೈರಾಣಾದ ರಕ್ಷಿತಾ ಅವರನ್ನು ನಿಂದಿಸಿದ್ದರು. ಆ ನಂತರ ಕಾಕ್ರೋಚ್ ಸುಧಿ ಅವರಿಗೆ ತಮ್ಮ ತಪ್ಪಿನ ಅರಿವು ಆಗಿತ್ತು. ಇದಕ್ಕೆ ಕೈಗನ್ನಡಿ ಎಂಬಂತೆ ಕ್ಷಮೆಯನ್ನು ಕೂಡ ಸುಧಿ ಕೇಳಿದ್ದರು.
ಆದರೆ.. ಅವರು ಈ ಕ್ಷಮೆಯನ್ನು ಮನಸಿಂದ ಕೇಳಿರಲಿಲ್ಲ. ಬದಲಿಗೆ ಕಿಚ್ಚನ ಪಂಚಾಯ್ತಿಯಲ್ಲಿ ಆಗಬಹುದಾದ ಡ್ಯಾಮೇಜ್‌ಗೆ ತೇಪೆ ಹಚ್ಚಲು ಕ್ಷಮೆ ಕೇಳಿದ್ದರು. ಕ್ಷಮೆ ಕೇಳುವ ಭರದಲ್ಲಿ ಜಾಹ್ನವಿ ಮತ್ತು ಅಶ್ವಿನಿ ಅವರ ಸಮ್ಮುಖದಲ್ಲಿ ಧ್ರುವಂತ ಅವರ ಕುರಿತು ಕಿಂಡಲ್ ಮಾಡಿದ್ದರು.
ಸುಧಿ ಆಡಿದ ಈ ಮಾತು ಸಹಜವಾಗಿ ಸಹಜವಾಗಿ ನೋಡುಗರನ್ನು ಕೆರಳಿಸಿತ್ತು. ಸುಧಿ ವಿರುದ್ದ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶದ ಅಲೆ ಕೂಡ ಎದ್ದಿತ್ತು. ಹೀಗಿರುವಾಗ ಕಾಕ್ರೋಚ್ ಸುಧಿ ಅವರನ್ನು ಸುದೀಪ್ ಸುಲಭವಾಗಿ ಬಿಡಲು ಹೇಗೆ ಸಾಧ್ಯ.? ಹೀಗಾಗಿಯೇ ಇಂದು ಕಾಕ್ರೋಚ್ ಸುಧಿಗೆ ವಿಶೇಷವಾದ ಕ್ಲಾಸ್ ತೆಗೆದುಕೊಂಡ ಸುದೀಪ್ ಸಡೆ ಪದದ ಅರ್ಥ ಕೇಳಿದರು.

ಸುದೀಪ್ ಕೇಳಿದ ಪ್ರಶ್ನೆಗೆ ತಡವರಿಸಿದ ಸುಧಿ ಮೊದಲು ಸಡೆ ಅಂದರೆ ಉಪಯೋಗಕ್ಕಿಲ್ಲದವರು ಎಂದರ್ಥ ಎಂದು ಹೇಳಿದರು. ಆ ನಂತರ ಚಿಕ್ಕವರು.. ವೇಸ್ಟ್.. ಚೈಲ್ಡ್.. ಹೀಗೆ ಬೇರೆ ಬೇರೆ ವ್ಯಾಖ್ಯಾನ ನೀಡಿದರು. ಇದಕ್ಕೆ ನನಗೆ ನೀವು ಮಗು ತರನೇ ಕಾಣ್ತೀರಾ, ಹೀಗಾಗಿ ಇನ್ಮುಂದೆ ನಾನು ನಿಮಗೆ ಸಡೆ ಸುಧಿ ಎಂದು ಕರೆಯಲಾ ಎಂದು ಸುದೀಪ್ ಪ್ರಶ್ನೆ ಕೇಳಿದರು.
ಆಗ ಮತ್ತೆ ವರಸೆ ಬದಲಿಸಿದ ಸುಧಿ ನಾನು ಕ್ಷಮೆ ಕೇಳಿದ್ದೇನೆ ಎಂದು ಹೇಳಿದರು. ಇದಕ್ಕೂ ಕೂಡ ತರಾಟೆ ತೆಗೆದುಕೊಂಡ ಸುದೀಪ್ ಪ್ಲೋನಲ್ಲಿ ಯಾವುದು ಬರುವುದಿಲ್ಲ. ನಿಮ್ಮ ದೃಷ್ಟಿಕೋನದಲ್ಲಿ ಹಾಗಿದೆ. ದೃಷ್ಟಿಕೋನದಲ್ಲಿ ಇಲ್ಲದಿರುವುದು ಆ ರೀತಿ ಪ್ಲೋನಲ್ಲಿ ಬರಲ್ಲ ಎಂದು ಹೇಳಿದರು. ಆ ನಂತರ ಬಾತ್ ರೂಮ್ ಬಳಿ ಸುಧಿ ಕ್ಷಮೆ ಕೇಳಿರುವ ವಿಡಿಯೋವನ್ನು ಕೂಡ ಪ್ಲೇ ಮಾಡಿ ತೋರಿಸಿದ ಸುದೀಪ್ ಕನ್ನಡದ ನಿಘಂಟುದಲ್ಲಿ ನೀವು ಬಳಸಿರುವ ಪದ ನಿಘಂಟುದಲ್ಲಿ ಇಲ್ಲ, ಕನ್ನಡ ನಿಘಂಟು ಶ್ರೇಷ್ಠವಾದದು, ಕನ್ನಡ ತುಂಬಾ ತೂಕ ಇರುವ ಭಾಷೆ ಎಂದು ಹೇಳಿದರು. ಆ ಕ್ಷಮಾಪಣೆ ಓಕೆನಾ ನಿಮಗೆ ಇನ್ನೂ ಚಿಕ್ಕವರಾಗಬೇಡಿ ಎಂದು ಕಿಡಿ ಕಾರಿದರು.ಹತ್ತು ರೂಪಾಯಿ ಆಕ್ಟಿಂಗ್ ಮಾಡ್ತಿರುವುದು ಯಾರು ಈಗ ಎಂದು ಪ್ರಶ್ನೆ ಮಾಡಿದರು.
ಇದೇ ಸಮಯದಲ್ಲಿ ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರನ್ನು ಕೂಡ ತರಾಟೆಗೆ ತೆಗೆದುಕೊಂಡ ಸುದೀಪ್, ಹೆಣ್ಣಿಗೆ ಆ ತರ ಮಾತನಾಡಬೇಡಿ ಎಂದು ಕೆಲವರು ಇಲ್ಲಿ ಹೇಳ್ತಾರೆ, ಏಕ ವಚನ ಬಳಸಬೇಡಿ ಎಂದು ಹೇಳ್ತಾರೆ ಆದರೆ ಅದೇ ಬೇರೆಯವರಿಗೆ ಸಡೆ ಎಂದು ಯಾರಾದರೂ ಕರೆದರೆ ಸೈಲೆಂಟ್ ಆಗಿರ್ತೀರಿ. ಅಶ್ವಿನಿ ಅವರೇ ಅಕಸ್ಮಾತ್ ನಿಮಗೆ ಹೀಗೆ ಕರೆದಿದ್ದರೆ ಏನ್ಮಾಡ್ತಿದ್ರಿ ಎಂದು ಪ್ರಶ್ನೆ ಮಾಡಿದರು. ಸುಧಿ ಅವರು ಕ್ಲೋಸ್ ಅನ್ನೋ ಮಾತ್ರಕ್ಕೆ ಹೈಲೆಟ್ ಮಾಡಬೇಡಿ ಅಂತ ಸುಮ್ಮನೆ ಆದ್ರಾ ಎಂದರು. ಟೆಲಿವಿಷನ್ ಅಲ್ಲಿ ಪ್ರಸಾರಕ್ಕೆ ಯೋಗ್ಯವಲ್ಲದ ಪದ ಎಂದು ಜಾಹ್ನವಿ ಹೇಳ್ತಾರೆ ಆದರೆ ಅವರು ಆ ಪದ ಬಳಸಿದಾಗ ಸುಮ್ಮನಾಗುತ್ತಾರೆ ಎಂದು ಕೂಡ ಕಿಡಿ ಕಾರಿದರು ಸುದೀಪ್.


Click it and Unblock the Notifications











