For Quick Alerts
  ALLOW NOTIFICATIONS  
  For Daily Alerts

  ಡ್ಯಾನ್ಸ್ ಕೊರಿಯೋಗ್ರಫರ್ ಆದ ನಟ ಸಾಧುಕೋಕಿಲಾ

  |
  ಇಂಥಾ ಟ್ಯಾಲೆಂಟ್ ಕೂಡಾ ಇದ್ಯಾ ಸಾಧು ಅವರಿಗೆ..? | Filmibeat Kannada

  ಸಾಧುಕೋಕಿಲಾ ಕಾಮಿಡಿ ಮಾಡೋದು ನೋಡಿರ್ತೀರಾ....ಹಾಡು ಹೇಳುವುದು ನೋಡಿರ್ತೀರಾ....ಸಂಗೀತ ನಿರ್ದೇಶನ ಮಾಡಿರುವುದು ನೋಡಿರ್ತೀರಾ....ಸಿನಿಮಾ ನಿರ್ದೇಶನ ಮಾಡಿರುವುದು ನೋಡಿರ್ತೀರಾ....ಅಷ್ಟೇ ಯಾಕೆ ಎಷ್ಟೋ ಸಿನಿಮಾಗಳಲ್ಲಿ ಸಾಧು ಮಹಾರಾಜ್ ಡ್ಯಾನ್ಸ್ ಮಾಡಿರುವುದು ಕೂಡ ನೋಡಿರ್ತೀರಾ....ಆದ್ರೆ, ಡ್ಯಾನ್ಸ್ ಕೊರಿಯೋಗ್ರಫಿ ಮಾಡಿರುವುದು ಬಹುಶಃ ನೀವು ನೋಡಿರಲ್ಲ.

  ಅಂತಹ ಅಪರೂಪದ ದೃಶ್ಯವನ್ನ ನೋಡುವ ಅವಕಾಶ ನಿಮಗೆ ಸಿಗಲಿದೆ. ಅರೇ ಸಾಧು ಕೋಕಿಲಾ ಅವರ ನೃತ್ಯ ಸಂಯೋಜನೆ ಮಾಡ್ತಿದ್ದಾರಾ.? ಯಾವ ಸಿನಿಮಾದಲ್ಲಿ, ಯಾವ ಹಾಡಿಗೆ ಎಂದು ಆಶ್ಚರ್ಯವಾಗಬೇಡಿ. ಅವರು ಕೊರಿಯೋಗ್ರಫಿ ಮಾಡಿದ್ದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದಲ್ಲಿ ಮೂಡಿ ಬಂದಿದ್ದ 'ಹೊಸ ಗಾನಬಜಾನ...' ಹಾಡಿಗೆ.

  'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಬಗ್ಗೆ ಹೊಸ ಕಥೆ ಹೇಳಿದ ಸಾಧು ಕೋಕಿಲಾ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಬಗ್ಗೆ ಹೊಸ ಕಥೆ ಹೇಳಿದ ಸಾಧು ಕೋಕಿಲಾ

  ಹೌದು, ಕಲರ್ಸ್ ಸೂಪರ್ ನಲ್ಲಿ ಮೂಡಿಬರ್ತಿರುವ 'ಕನ್ನಡ ಕೋಗಿಲೆ' ಕಾರ್ಯಕ್ರಮದಲ್ಲಿ ಸಾಧುಕೋಕಿಲಾ ಅವರು ತೀರ್ಪುಗಾರರಾಗಿದ್ದಾರೆ. ಈ ವಾರ ಸ್ಪರ್ಧಿಗಳು ಡುಯೇಟ್ ಹಾಡುಗಳನ್ನ ಹಾಡಬೇಕಿದೆ. ಸುರಕ್ಷಾ ಮತ್ತು ಲಿಖಿತ್ ಈ ವಾರ ರಾಮ್ ಚಿತ್ರದ ಹೊಸ ಗಾನ ಬಜಾನ ಹಾಡನ್ನ ಹಾಡಿದ್ದಾರೆ.

  ಡಾ.ವಿಷ್ಣು ಸಾವಿನ ದಿನ ಅಂಬಿ ಆಡಿದ ಮಾತನ್ನ ಮರೆಯದ ಸಾಧುಕೋಕಿಲಾ ಡಾ.ವಿಷ್ಣು ಸಾವಿನ ದಿನ ಅಂಬಿ ಆಡಿದ ಮಾತನ್ನ ಮರೆಯದ ಸಾಧುಕೋಕಿಲಾ

  ಹಾಡು ಮುಗಿದ ಮೇಲೆ ಸಾಧುಕೋಕಿಲಾ ಅವರು ಸ್ವತಃ ವೇದಿಕೆಗೆ ಬಂದ ಇಬ್ಬರಿಗೂ ಡ್ಯಾನ್ಸ್ ಹೇಳಿಕೊಟಿದ್ದಾರೆ. ಅಂದ್ರೆ, ನೃತ್ಯ ಸಂಯೋಜನೆ ಮಾಡಿದ್ದಾರೆ. ಅದು ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ಪ್ರಿಯಾಮಣಿ ಹಾಕಿದ್ದ ಸ್ಟೆಪ್ ಗಳನ್ನೇ ಹೇಳಿಕೊಟ್ಟಿದ್ದು ವಿಶೇಷವಾಗಿ ಗಮನ ಸೆಳೆಯಿತು.

  ಸದ್ಯ, ಈ ಸಂಚಿಕೆಯ ಪ್ರೋಮೋ ಮಾತ್ರ ಪ್ರಸಾರವಾಗ್ತಿದೆ. ಪೂರ್ತಿ ಎಪಿಸೋಡ್ ಶನಿವಾರ ಮತ್ತು ಭಾನುವಾರ ರಾತ್ರಿ 7 ಗಂಟೆಗೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗಲಿದೆ.

  English summary
  Kannada actor, music director sadhu kokila has teach dance to kannada kogile contestants. ಕನ್ನಡ ಕೋಗಿಲೆ ಸ್ಪರ್ಧಿಗಳಿಗೆ ನೃತ್ಯ ಹೇಳಿಕೊಟ್ಟ ಸಾಧುಕೋಕಿಲಾ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X