For Quick Alerts
  ALLOW NOTIFICATIONS  
  For Daily Alerts

  ಅಗಲಿದ 'ಅಮ್ಮ'ನ ಬಗ್ಗೆ ಸಾಧು ಅವರನ್ನ ಈಗಲೂ ಕಾಡ್ತಿದೆ ಈ ಪ್ರಶ್ನೆ.?

  |
  ವಿಧಿವಶರಾದ ಸಾಧು ಕೋಕಿಲ ಅವರ ತಾಯಿ..! | Filmibeat Kannada

  ''ಅಮ್ಮ ಅಂದರೇ ಏನೋ ಹರುಷವು....ನಮ್ಮ ಪಾಲಿಗೆ ಅವಳೇ ದೈವವೂ....ಅಮ್ಮ ಎನ್ನಲೂ ಎಲ್ಲ ಮರೆತವು, ಎಂದೂ ಕಾಣದ ಸುಖವಾ ಕಂಡೆವು.......'' ಅಮ್ಮ ಅಂದ್ರೆ ಯಾರಿಗೂ ಇಷ್ಟ ಆಗಲ್ಲ ಹೇಳಿ. ನಮಗೆ ಜನ್ಮ ನೀಡಿ, ಸಾಕಿ-ಸಲಹಿ ದೊಡ್ಡವರನ್ನಾಗಿಸಿ ಇಡೀ ಜೀವನವನ್ನೇ ಮಕ್ಕಳಿಗಾಗಿ ಮುಡಿಗಿಡುವ ಅಮ್ಮ ತಾಯಿಗಿಂತ ದೊಡ್ಡವರು.

  ಇಂತಹ ಅಮ್ಮನನ್ನ ಕನ್ನಡದ ಹಾಸ್ಯ ನಟ, ಸಂಗೀತಗಾರ ನಿರ್ದೇಶಕ ಸಾಧುಕೋಕಿಲಾ ಅವರು ಇತ್ತೀಚಿಗಷ್ಟೆ ಕಳೆದುಕೊಂಡಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಸಾಧು ಅವರ ತಾಯಿ ಮಂಗಳ ಕಳೆದ ವಾರ ಕೊನೆಯುಸಿರೆಳೆದಿದ್ದರು.

  ಹಾಸ್ಯನಟ ಸಾಧು ಕೋಕಿಲಾ ತಾಯಿ ವಿಧಿವಶಹಾಸ್ಯನಟ ಸಾಧು ಕೋಕಿಲಾ ತಾಯಿ ವಿಧಿವಶ

  ಅಮ್ಮ ಬಿಟ್ಟು ಹೋಗಿದ್ದರು, ಅಮ್ಮನ ನೆನಪುಗಳು ಮಾತ್ರ ಸಾಧು ಅವರನ್ನ ಕಾಡುತ್ತಿದೆ. ಈ ಬಗ್ಗೆ ಕನ್ನಡ ಕೋಗಿಲೆ ಕಾರ್ಯಕ್ರಮದಲ್ಲಿ ತಮ್ಮ ಅಮ್ಮನ ಬಗ್ಗೆ ಹೇಳಿಕೊಂಡಿದ್ದಾರೆ.

  ''ನಮ್ಮ ತಾಯಿ ಇಡೀ ಜೀವನವನ್ನೇ ಸಂಗೀತಕ್ಕಾಗಿ ಮುಡಿಪಾಗಿಟ್ಟಿದ್ದರು. ಕೊನೆಯ ಉಸಿರವರೆಗೂ ಮ್ಯೂಸಿಕ್ ಕೇಳುತ್ತಿದ್ದರು. ನನಗೆ ಒಂದೇ ಒಂದು ಯೋಚನೆ ಅಂತಂದ್ರೆ 55 ವರ್ಷ ನಮ್ಮ ತಂದೆ ಅವರ ಜೊತೆ ಇದ್ದರು. ಅವರಿಬ್ಬರ ಜೋಡಿ ಹಕ್ಕಿಗಳು. ಈಗ ಬಿಟ್ಟು ಹೋದರು. ಅವರು ಹೇಗೆ ಇರ್ತಾರೆ ಎಂಬುದೇ ನನಗೆ ಪ್ರಶ್ನೆಯಾಗಿದೆ'' ಎಂದು ಬೇಸರ ವ್ಯಕ್ತಪಡಿಸಿದರು.

  ಡಾ.ವಿಷ್ಣು ಸಾವಿನ ದಿನ ಅಂಬಿ ಆಡಿದ ಮಾತನ್ನ ಮರೆಯದ ಸಾಧುಕೋಕಿಲಾ ಡಾ.ವಿಷ್ಣು ಸಾವಿನ ದಿನ ಅಂಬಿ ಆಡಿದ ಮಾತನ್ನ ಮರೆಯದ ಸಾಧುಕೋಕಿಲಾ

  'ಕನ್ನಡ ಕೋಗಿಲೆ' ಕಾರ್ಯಕ್ರಮದಲ್ಲಿ ದೊಡ್ಡಪ್ಪ ಅವರು 'ವಂಶಿ' ಚಿತ್ರದ 'ಅಮ್ಮಾ ಅಮ್ಮಾ.....' ಹಾಡನ್ನ ಹಾಡಿ ಪ್ರೇಕ್ಷಕರ ಮನ ಕರಗಿಸಿದರು. ಈ ಹಾಡನ್ನ ಕೇಳಿದ ಸಾಧು ಅವರು ತಮ್ಮ ತಾಯಿಯ ನೆನಪನ್ನ ಮಾಡಿಕೊಂಡರು.

  <strong></strong>ಡ್ಯಾನ್ಸ್ ಕೊರಿಯೋಗ್ರಫರ್ ಆದ ನಟ ಸಾಧುಕೋಕಿಲಾ ಡ್ಯಾನ್ಸ್ ಕೊರಿಯೋಗ್ರಫರ್ ಆದ ನಟ ಸಾಧುಕೋಕಿಲಾ

  ಇತ್ತೀಚಿಗಷ್ಟೆ ಸಾಧು ಕೋಕಿಲಾ ಅವರು ಹಾಡಿದ್ದ 'ಅಮ್ಮ ಐ ಲವ್ ಯೂ' ಚಿತ್ರದ ಟೈಟಲ್ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಮೂಲ ಹಾಡನ್ನ ಬಿಟ್ಟು ಸಾಧು ವರ್ಷನ್ ಅವರ ಹಾಡೇ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ.

  English summary
  Kannada actor, music director sadhu kokila has shares his mother memories in kannada kogile contestants.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X