ಧಾರಾವಾಹಿ ಲೋಕಕ್ಕೆ ಎಂಟ್ರಿ ಕೊಟ್ಟ ಕಾಮಿಡಿ ಕಿಂಗ್ ಸಾಧು ಕೋಕಿಲ
ಸ್ಯಾಂಡಲ್ ವುಡ್ ನ ಖ್ಯಾತ ಹಾಸ್ಯ ನಟ ಸಾಧು ಕೋಕಿಲ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ನಟನೆಯ ಜೊತೆಗೆ ಈಗಾಗಲೇ ಸಂಗೀತ ನಿರ್ದೇಶಕರಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಕಾಮಿಡಿ ಮಹರಾಜ್ ಸಾಧು ಕೋಕಿಲ ಈಗ ಧಾರಾವಾಹಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.
Recommended Video
ಅಂದಹಾಗೆ ಸಾಧು ಕೋಕಿಲ ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದಾರಾ ಅಂತ ಅಂದ್ಕೋಬೇಡಿ. ಧಾರಾವಾಹಿ ನಿರ್ಮಾಣದ ಮೂಲಕ ಕಿರುತೆರೆಯಲ್ಲಿ ಕಮಾಲ್ ಮಾಡಲು ಸಜ್ಜಾಗಿದ್ದಾರೆ. ಹೌದು, ನಟ ಸಾಧು ಕೋಕಿಲ ನಿರ್ಮಾಣದಲ್ಲಿ ಹೊಸ ಧಾರಾವಾಹಿ ಮೂಡಿಬರುತ್ತಿದೆ.
ಧಾರಾವಾಹಿಗೆ 'ಗೌರಿಪುರದ ಗಯ್ಯಾಳಿಗಳು' ಎಂದು ಟೈಟಲ್ ಇಡಲಾಗಿದೆ. ಈ ಧಾರಾವಾಹಿ ಮಾರ್ಚ್ 15ರಿಂದ ಪ್ರತಿದಿನ ಸಂಜೆ 6.30ಕ್ಕೆ ಪ್ರಸಾರವಾಗಲಿದೆ. ಕಾಮಿಡಿ ಜೊತೆಗೆ ಸಸ್ಪೆನ್ಸ್ ಅಂಶವನ್ನು ಈ ಧಾರಾವಾಹಿ ಹೊಂದಿದೆ ಎನ್ನಲಾಗುತ್ತಿದೆ. ಜೊತೆಗೆ ನಾಲ್ಕು ಧೈರ್ಯಶಾಲಿ ಮಹಿಳೆಯರು ಈ ಧಾರಾವಾಹಿಯ ಹೈಲೆಟ್ ಎನ್ನಲಾಗುತ್ತಿದೆ. ಈಗಾಗಲೇ ಪ್ರೋಮೋ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

'ಗೌರಿಪುರದ ಗಯ್ಯಾಳಿಗಳು' ಧಾರಾವಾಹಿಗೆ ನಿರ್ಮಾಣ ಮಾಡುವ ಜೊತೆಗೆ ಈ ಧಾರಾವಾಹಿಯ ಶೀರ್ಷಿಕೆ ಗೀತೆಗೆ ಇವರೇ ಧ್ವನಿ ನೀಡಿದ್ದಾರೆ. ಈಗಾಗಲೇ ಸ್ಯಾಂಡಲ್ ವುಡ್ ನ ಅನೇಕ ನಟರು ಧಾರಾವಾಹಿ ನಿರ್ಮಾಣ ಮಾಡುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ರಮೇಶ್ ಅರವಿಂದ್ ಧಾರಾವಾಹಿ ಲೋಕದಲ್ಲಿ ಸಕ್ರೀಯರಾಗಿದ್ದಾರೆ. ಇದೀಗ ಸಾದು ಕೋಕಿಲ ಸಹ ಅದೆ ಲಿಸ್ಟ್ ಗೆ ಸೇರಿದ್ದಾರೆ.
ಅಂದಹಾಗೆ ಕಿರುತೆರೆ ಲೋಕ ಸಾಧು ಕೋಕಿಲ ಅವರಿಗೆ ಹೊಸದೇನಲ್ಲ. ಈ ಹಿಂದೆ ಸಂಗೀತ ಕಾರ್ಯಕ್ರಮಕ್ಕೆ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಇನ್ನು ನಟ ಸಾಧು ಕೋಕಿಲ ಸ್ಯಾಂಡಲ್ ವುಡ್ ತನ್ನದೆ ಆದ ಚಾಪು ಮೂಡಿಸಿದ್ದಾರೆ. ಶ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಾಧು ಕೋಕಿಲ ತನ್ನ ಸುದೀರ್ಘ ಪಯಣದಲ್ಲಿ ಹಾಸ್ಯದ ಮೂಲಕ ಕನ್ನಡ ಸಿನಿ ಅಭಿಮಾನಿಗಳನ್ನು ನಗಿಸುತ್ತಲೇ ಬಂದಿದ್ದಾರೆ.


Click it and Unblock the Notifications











