For Quick Alerts
  ALLOW NOTIFICATIONS  
  For Daily Alerts

  ಧಾರಾವಾಹಿ ಲೋಕಕ್ಕೆ ಎಂಟ್ರಿ ಕೊಟ್ಟ ಕಾಮಿಡಿ ಕಿಂಗ್ ಸಾಧು ಕೋಕಿಲ

  |

  ಸ್ಯಾಂಡಲ್ ವುಡ್ ನ ಖ್ಯಾತ ಹಾಸ್ಯ ನಟ ಸಾಧು ಕೋಕಿಲ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ನಟನೆಯ ಜೊತೆಗೆ ಈಗಾಗಲೇ ಸಂಗೀತ ನಿರ್ದೇಶಕರಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಕಾಮಿಡಿ ಮಹರಾಜ್ ಸಾಧು ಕೋಕಿಲ ಈಗ ಧಾರಾವಾಹಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.

  ಕಿರುತೆರೆಯಲ್ಲಿ ಗಯ್ಯಾಳಿಗಳ ನಡುವೆ ಗೆಲ್ತಾರಾ ಸಾಧು ಕೋಕಿಲಾ!! | Sadhu Kokila to Produce Serial

  ಅಂದಹಾಗೆ ಸಾಧು ಕೋಕಿಲ ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದಾರಾ ಅಂತ ಅಂದ್ಕೋಬೇಡಿ. ಧಾರಾವಾಹಿ ನಿರ್ಮಾಣದ ಮೂಲಕ ಕಿರುತೆರೆಯಲ್ಲಿ ಕಮಾಲ್ ಮಾಡಲು ಸಜ್ಜಾಗಿದ್ದಾರೆ. ಹೌದು, ನಟ ಸಾಧು ಕೋಕಿಲ ನಿರ್ಮಾಣದಲ್ಲಿ ಹೊಸ ಧಾರಾವಾಹಿ ಮೂಡಿಬರುತ್ತಿದೆ.

  ಸಾಮಾಜಿಕ ಜಾಲತಾಣದಲ್ಲಿ ಹೆಸರು ದುರ್ಬಳಕೆ ದೂರು ನೀಡಿದ ಸಾಧುಕೋಕಿಲಾಸಾಮಾಜಿಕ ಜಾಲತಾಣದಲ್ಲಿ ಹೆಸರು ದುರ್ಬಳಕೆ ದೂರು ನೀಡಿದ ಸಾಧುಕೋಕಿಲಾ

  ಧಾರಾವಾಹಿಗೆ 'ಗೌರಿಪುರದ ಗಯ್ಯಾಳಿಗಳು' ಎಂದು ಟೈಟಲ್ ಇಡಲಾಗಿದೆ. ಈ ಧಾರಾವಾಹಿ ಮಾರ್ಚ್ 15ರಿಂದ ಪ್ರತಿದಿನ ಸಂಜೆ 6.30ಕ್ಕೆ ಪ್ರಸಾರವಾಗಲಿದೆ. ಕಾಮಿಡಿ ಜೊತೆಗೆ ಸಸ್ಪೆನ್ಸ್ ಅಂಶವನ್ನು ಈ ಧಾರಾವಾಹಿ ಹೊಂದಿದೆ ಎನ್ನಲಾಗುತ್ತಿದೆ. ಜೊತೆಗೆ ನಾಲ್ಕು ಧೈರ್ಯಶಾಲಿ ಮಹಿಳೆಯರು ಈ ಧಾರಾವಾಹಿಯ ಹೈಲೆಟ್ ಎನ್ನಲಾಗುತ್ತಿದೆ. ಈಗಾಗಲೇ ಪ್ರೋಮೋ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

  'ಗೌರಿಪುರದ ಗಯ್ಯಾಳಿಗಳು' ಧಾರಾವಾಹಿಗೆ ನಿರ್ಮಾಣ ಮಾಡುವ ಜೊತೆಗೆ ಈ ಧಾರಾವಾಹಿಯ ಶೀರ್ಷಿಕೆ ಗೀತೆಗೆ ಇವರೇ ಧ್ವನಿ ನೀಡಿದ್ದಾರೆ. ಈಗಾಗಲೇ ಸ್ಯಾಂಡಲ್ ವುಡ್ ನ ಅನೇಕ ನಟರು ಧಾರಾವಾಹಿ ನಿರ್ಮಾಣ ಮಾಡುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ರಮೇಶ್ ಅರವಿಂದ್ ಧಾರಾವಾಹಿ ಲೋಕದಲ್ಲಿ ಸಕ್ರೀಯರಾಗಿದ್ದಾರೆ. ಇದೀಗ ಸಾದು ಕೋಕಿಲ ಸಹ ಅದೆ ಲಿಸ್ಟ್ ಗೆ ಸೇರಿದ್ದಾರೆ.

  ಅಂದಹಾಗೆ ಕಿರುತೆರೆ ಲೋಕ ಸಾಧು ಕೋಕಿಲ ಅವರಿಗೆ ಹೊಸದೇನಲ್ಲ. ಈ ಹಿಂದೆ ಸಂಗೀತ ಕಾರ್ಯಕ್ರಮಕ್ಕೆ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಇನ್ನು ನಟ ಸಾಧು ಕೋಕಿಲ ಸ್ಯಾಂಡಲ್ ವುಡ್ ತನ್ನದೆ ಆದ ಚಾಪು ಮೂಡಿಸಿದ್ದಾರೆ. ಶ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಾಧು ಕೋಕಿಲ ತನ್ನ ಸುದೀರ್ಘ ಪಯಣದಲ್ಲಿ ಹಾಸ್ಯದ ಮೂಲಕ ಕನ್ನಡ ಸಿನಿ ಅಭಿಮಾನಿಗಳನ್ನು ನಗಿಸುತ್ತಲೇ ಬಂದಿದ್ದಾರೆ.

  English summary
  Actor Sadhu Kokila turns to producer for Gowripura gayyaligalu Serial.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X