ಮಗಳ ಹಾಡಿಗೆ ತಂದೆಗೂ ಸಿಕ್ತು ಮೆಡಲ್ : ಸರಿಗಮಪ ವೇದಿಕೆಯಲ್ಲಿ ಭಾವುಕ ಕ್ಷಣ
Recommended Video

''ನಿಮಗೆ ಒಳ್ಳೆಯ ತರಬೇತಿ ಸಿಕ್ಕರೆ, ಖಂಡಿತ ಕರ್ನಾಟಕಕ್ಕೆ ಮತ್ತೊಬ್ಬ ಶ್ರೇಯಾ ಘೋಷಲ್ ಸಿಗುತ್ತಾರೆ'' ಹೀಗೆ ಹೇಳಿದ್ದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ.
ಜೀಕನ್ನಡದ ಸರಿಗಮಪ ಕಾರ್ಯಕ್ರಮ ಮತ್ತೆ ಶುರುವಾಗಿದೆ. ಕಾರ್ಯಕ್ರಮದ ಮೆಗಾ ಆಡಿಷನ್ ನಲ್ಲಿ ಧಾರವಾಡ ಹುಡುಗಿ ಸಾಕ್ಷಿ ಆಯ್ಕೆ ಆಗಿದ್ದಾರೆ. ಸಾಕ್ಷಿ ಹಾಡು ಕೇಳಿ ಮೂರು ತೀರ್ಪುಗಾರರು ಮೆಡಲ್ ನೀಡಿದ್ದಾರೆ.
ಅದ್ಭುತ ಕಂಠದ ಸಾಕ್ಷಿ ಮೆಗಾ ಆಡಿಷನ್ ನಲ್ಲಿ 'ಮಳೆ ಬರುವ ಹಾಗಿದೆ..' ಹಾಡನ್ನು ಹಾಡಿದರು. ನಿಜ ಹೇಳಬೇಕು ಅಂದರೆ, ಸಾಕ್ಷಿ ಹಾಡು ಮಳೆ ಬರಿಸುವ ಹಾಗೆಯೇ ಇತ್ತು.

ಸಾಕ್ಷಿ ತಂದೆಗೆ ಹಾಡುಗಾರನಾಗಬೇಕು ಎನ್ನುವ ಆಸೆ ಇತ್ತು. ಆದರೆ, ಅದು ಸಾಧ್ಯ ಆಗಿರಲಿಲ್ಲ. ಆದರೆ, ತಮ್ಮ ಆಸೆಯನ್ನು ಈಡೇರಿಸಿದ ಮಗಳ ಕಂಡು ತಂದೆ ಖುಷಿಯಲ್ಲಿ ಕಣ್ಣೀರು ಹಾಕಿದರು. ಇಡೀ ವೇದಿಕೆ ಒಂದು ಕ್ಷಣ ಭಾವುಕವಾಯಿತು. ಹಂಸಲೇಖ, ಅರ್ಜುನ್ ಜನ್ಯ, ರಾಜೇಶ್ ಕೃಷನ್ ಮೂವರ ಕಣ್ಣೀನಲ್ಲಿಯೂ ನೀರು ಬಂತು.
ಸಾಕ್ಷಿ ಮತ್ತು ಅವರ ತಂದೆಯ ಅಪ್ಪುಗೆ ಎಲ್ಲರಿಗೂ ಭಾವುಕರಾಗುವಂತೆ ಮಾಡಿತು. ಸಾಕ್ಷಿ ಹಾಡು ಕೇಳಿ ಅವರ ತಂದೆಗೂ ಮೆಡಲ್ ಹಾಕಿ ಗೌರವ ನೀಡಲಾಯಿತು.
''ನಾನು ನಮ್ಮ ತಂದೆಯ ಆಸೆ ಪೂರೈಸಲು ಇಲ್ಲಿಗೆ ಬಂದಿದ್ದೇನೆ. ನನಗೆ ಒಂದು ಒಳ್ಳೆಯ ವೇದಿಕೆ ಸಿಕ್ಕಿದೆ.'' ಎಂದು ಸಾಕ್ಷಿ ಖುಷಿಯಿಂದ ಕಾರ್ಯಕ್ರಮವನ್ನು ಶುಭಾರಂಭ ಮಾಡಿದರು.


Click it and Unblock the Notifications











