BB 7: ಹೇಜೆಲ್, ಸಲ್ಲೂ, ಶಹೀದ್, ಇಲಿಯಾನಾ ಮಸ್ತಿ

By ಜೇಮ್ಸ್ ಮಾರ್ಟಿನ್

ಕಲರ್ಸ್ ವಾಹಿನಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ವರ್ಗ ಹಾಗೂ ನರಕವಾಸಿಗಳ ಮೊದಲ ವಾರದ ಆಟದಿಂದ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಜತೆಗೆ ಮನೆಯಿಂದ ಹೊರಬಿದ್ದ ಮೊದಲ ಸ್ಪರ್ಧಿ ಹೇಜೆಲ್ ಕೀಚ್ ಜತೆಗೆ ಚಿತ್ರದ ಪ್ರಚಾರಕ್ಕೆ ಆಗಮಿಸಿದ್ದ ಶಹೀದ್ ಕಪೂರ್, ಇಲಿಯಾನಾ ಡಿಕ್ರೂಜ್ ಜತೆ ನಿರೂಪಕ ಸಲ್ಮಾನ್ ಖಾನ್ ಎಂದಿನಂತೆ ಮೋಜು ಮಸ್ತಿಯಾಟವಾಗಿ ರಂಜಿಸಿದ್ದಾರೆ.

ಮೊದಲ ಸ್ಪರ್ಧಿಯಾಗಿ ಹೊರಬಿದ್ದಿದ್ದು ನನಗೂ ಅಚ್ಚರಿ ಮೂಡಿಸಿದೆ ಎಂದ ಹೇಜೆಲ್ ಗೆ ಸ್ವರ್ಗದಿಂದ ಒಬ್ಬ ಏಂಜೆಲ್ ಹಾಗೂ ನರಕದಿಂದ ಒಬ್ಬ ಡೇವಿಲ್ ಆಯ್ಕೆ ಮಾಡುವ ಅವಕಾಶವನ್ನು ಸಲ್ಮಾನ್ ನೀಡಿದರು. ಶಿಲ್ಪಾ ಅಗ್ನಿಹೋತ್ರಿ ಏಂಜೆಲ್ ಆಗಿ ಹೊರ ಹೊಮ್ಮಿದ್ದರೆ, ಕುಶಾಲ್ ಡೆವಿಲ್ ಎನಿಸಿಕೊಂಡ.

ನಂತರ ಕಾರ್ಯಕ್ರಮದಲ್ಲಿ ಫಟಾ ಪೋಸ್ಟರ್ ನಿಕ್ಲಾ ಹೀರೋ ಚಿತ್ರದ ಪ್ರಚಾರಕ್ಕಾಗಿ ಶಹೀದ್ ಕಪೂರ್ ಹಾಗೂ ಇಲಿಯನಾ ಡಿಕ್ರೂಜ್ ಆಗಮಿಸಿದರು. ಚಿತ್ರ ಹಾಡು ನೃತ್ಯ ಪ್ರದರ್ಶಿಸುವ ಮೂಲಕ ರಂಜಿಸಿದರು. ಅಂದಾಜ್ ಅಪ್ನಾ ಅಪ್ನಾ ಚಿತ್ರದ ಸಲ್ಮಾನ್ ಹಾಗೂ ಅಮೀರ್ ಖಾನ್ ನಟನೆಯನ್ನು ಪ್ರೇಕ್ಷಕರ ಮುಂದೆ ಮತ್ತೊಮ್ಮೆ ಮಿಮಿಕ್ರಿ ಮಾಡಿ ಅಮೀರ್ ಪಾತ್ರಧಾರಿಯಾಗಿ ಶಹೀದ್, ಸಲ್ಲೂ ಪಾತ್ರದಲ್ಲಿ ಸಲ್ಮಾನ್ ಪ್ರದರ್ಶಿಸಿದ್ದು ದಿನದ ರಂಜನೆಯ ಭಾಗ ಎನಿಸಿತು.

ಬಿಗ್ ಬಾಸ್ ವಾಸಿಗಳಿಗೆ Me TV ಮೂಲಕ ಶಹೀದ್ ಕಪೂರ್ ಹಾಗೂ ಇಲಿಯಾನಾ ದರ್ಶನ ಮಾಡಿಸಿ ಅಚ್ಚರಿ ಮೂಡಿಸಲಾಯಿತು. ಸ್ವರ್ಗ ಹಾಗೂ ನರಕವಾಸಿಗಳ ನಡುವೆ ನೃತ್ಯ ಸ್ಪರ್ಧೆಗೆ ಶಹೀದ್ ಜಡ್ಜ್ ಆಗಿದ್ದರು. ತನೀಶಾ ಹಾಗೂ ಆಂಡಿಗೆ ಕುಶಾಲ್, ಎಲ್ಲಿ ಹಾಗೂ ಗೌಹರ್ ಉತ್ತಮ ಪೈಪೋಟಿ ನೀಡಿದರು.

ಒಟ್ಟಾರೆ, ಬಿಗ್ ಬಾಸ್ 7ರ ವೀಕೆಂಡ್ ಕಾ Wow ಮೊದಲೆರಡು ಎಪಿಸೋಡ್ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಕಾರ್ಯಕ್ರಮದ ಝಲಕ್ ಇಲ್ಲಿದೆ ನೋಡಿ...

ಮೊದಲು ಹೊರಬಿದ್ದ ಹೇಜೆಲ್

ಮೊದಲು ಹೊರಬಿದ್ದ ಹೇಜೆಲ್

ಸಲ್ಮಾನ್ ಖಾನ್ ಜತೆ ಬಾಡಿಗಾರ್ಡ್ ನಟಿಸಿದ್ದ ಹೇಜೆಲ್ ಕೀಚ್ ಭಾರಿ ನಿರೀಕ್ಷೆ ಇಟ್ಟುಕೊಂಡು ಬಿಗ್ ಬಾಸ್ ಮನೆ ಪ್ರವೇಶಿಸಿದ್ದಳು. ಆದರೆ, ಒಂದು ವಾರ ನರಕದಲ್ಲಿದ್ದ ಹೇಜೆಲ್ ಜನರ ಮನಸ್ಸಿನಲ್ಲಿ ಹೆಚ್ಚಿನ ಆಸಕ್ತಿ ಮೂಡಿಸುವಲ್ಲಿ ವಿಫಲವಾಗಿ ಮನೆಯಿಂದ ಹೊರ ಬಿದ್ದಿದ್ದಾಳೆ. ಹೇಜೆಲ್ ಹಾಗೂ ಆಂಡಿ ನೃತ್ಯ ನೆನಪಲ್ಲಿ ಉಳಿಯಬಲ್ಲುದು

ಸಲ್ಲೂ ಡ್ಯಾನ್ಸ್ ಅಣಕು

ಸಲ್ಲೂ ಡ್ಯಾನ್ಸ್ ಅಣಕು

ಉತ್ತಮ ಡ್ಯಾನ್ಸರ್ ಎನಿಸಿರುವ ಶಹೀದ್ ಕಪೂರ್ ಅವರು ಸಲ್ಲೂ ಡ್ಯಾನ್ಸ್ ಸ್ಟೆಪ್ಸ್ ಮಿಮಿಕ್ರಿ ಮಾಡಿದ್ದಲ್ಲದೆ ಫಟಾ ಪೋಸ್ಟರ್ ನಿಕ್ಲಾ ಹೀರೋ ಚಿತ್ರದ ಪ್ರಚಾರ ಮಾಡಿದರು.

ವೀಕೆಂಡ್ ಎಪಿಸೋಡ್

ವೀಕೆಂಡ್ ಎಪಿಸೋಡ್

ಬಿಗ್ ಬಾಸ್ ನಲ್ಲಿ ವಿಕೇಂಡ್ ಎಪಿಸೋಡ್ ಗಳ ಟಿಆರ್ ಪಿ ಹೆಚ್ಚಳಕ್ಕಾಗಿ ಪ್ರತಿ ವಾರ ವಿನೂತನ ಪ್ರಯೋಗಗಳ ಮೂಲಕ ಸಲ್ಮಾನ್ ಖಾನ್ ಪ್ರೇಕ್ಷಕರನ್ನು ರಂಜಿಸಲು ಯತ್ನಿಸುತ್ತಿದ್ದಾರೆ.

ಡ್ಯಾನ್ಸ್ ರಾಜ ಡ್ಯಾನ್ಸ್

ಡ್ಯಾನ್ಸ್ ರಾಜ ಡ್ಯಾನ್ಸ್

ರೆಡಿ ಚಿತ್ರದ ಹಾಡಿಗೆ ಕುಣಿಯುತ್ತಿರುವ ಸಲ್ಮಾನ್ ಖಾನ್

ಹೇಜೆಲ್ ಜತೆ ಸಲ್ಲೂ

ಹೇಜೆಲ್ ಜತೆ ಸಲ್ಲೂ

ನಾನು ಮನೆಯಿಂದ ಏಕೆ ಹೊರಬಿದ್ದೆ ಎಂಬುದೇ ಇನ್ನೂ ತಿಳಿಯುತ್ತಿಲ್ಲ ಎಂಬ ಅಚ್ಚರಿಯಲ್ಲಿ ಹೇಜೆಲ್

ಹೇಜೆಲ್ ಸ್ವಾಗತಿಸಿದ ಸಲ್ಲೂ

ಹೇಜೆಲ್ ಸ್ವಾಗತಿಸಿದ ಸಲ್ಲೂ

ಬಿಗ್ ಬಾಸ್ 7 ರ ಮನೆಯಿಂದ ಮೊದಲ ಸ್ಪರ್ಧಿಯಾಗಿ ಹೊರ ಬಿದ್ದ ಹೇಜೆಲ್ ಸಂತೈಸುತ್ತಿರುವ ಸಲ್ಲೂ

ಮನೆ ಮನೆ ಕಥೆ ಹೇಳಿದ ಹೇಜೆಲ್

ಮನೆ ಮನೆ ಕಥೆ ಹೇಳಿದ ಹೇಜೆಲ್

ಬಿಗ್ ಬಾಸ್ 7 ಮನೆಯ ಸ್ವರ್ಗ ನರಕವಾಸಿಗಳ ಕಥೆ ಬಿಚ್ಚಿಟ್ಟ ಹೇಜೆಲ್

ಶಹೀದ್ ಹಾಗೂ ಸಲ್ಮಾನ್

ಶಹೀದ್ ಹಾಗೂ ಸಲ್ಮಾನ್

ಫಟಾ ಪೋಸ್ಟರ್ ನಿಕ್ಲಾ ಹೀರೋ ಚಿತ್ರದಲ್ಲಿ ಸಲ್ಮಾನ್ ಖಾನ್ ಅಭಿಯಾನಿ ಶಹೀದ್ ಖಾನ್ ಕಾಣಿಸಿಕೊಳ್ಳುತ್ತಿದ್ದಾನಂತೆ.

ಇಲಿಯಾನಾ ಕುಣಿತ

ಇಲಿಯಾನಾ ಕುಣಿತ

ಫಟಾ ಪೋಸ್ಟರ್ ನಿಕ್ಲಾ ಹೀರೋ ಚಿತ್ರದ ಶಹೀದ್ ಹಾಗೂ ಇಲಿಯಾನಾ ಅವರು ಸಲ್ಮಾನ್ ಜತೆ ಹೆಜ್ಜೆ ಹಾಕಿದರು.

ಸಲ್ಲೂ ಶಹೀದ್ ಮೋಡಿ

ಸಲ್ಲೂ ಶಹೀದ್ ಮೋಡಿ

ಡಿಂಕಚಕ್ಕಾ ಎಂದು ಕುಣಿತ ಸಲ್ಮಾನ್, ಶಹೀದ್ ಅವರು ಅಂದಾಜ್ ಅಪ್ನಾ ಅಪ್ನಾ ಚಿತ್ರದ ಅಣಕು ಮಾಡಿದ್ದು ಎಲ್ಲರನ್ನು ರಂಜಿಸಿತು.

More from Filmibeat

English summary
Bigg Boss 7 First Weekend: Weekends got more entertaining with Bigg Boss- Weekend Ka WOW Salman Ke Saath 7. The episode was filled with masti, drama and a special chat with the evicted contestant, Hazel Keech
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X