ಬ್ಯಾನ್ ಮಾಡ್ಕೋ ಹೋಗು : ಫೋಟೋಗ್ರಾಫರ್ ವಿರುದ್ಧ ಸಲ್ಮಾನ್ ಗರಂ

Recommended Video

ಮಾಧ್ಯಮದ ಮೇಲೆ ಕಿಡಿಕಾರಿದ ಸಲ್ಮಾನ್ ಖಾನ್ | Salman Khan | FILMIBEAT KANNADA

ನಟ ಸಲ್ಮಾನ್ ಖಾನ್ ಫೋಟೋಗ್ರಾಫರ್ ಮೇಲೆ ಗರಂ ಆಗಿದ್ದಾರೆ. ಬ್ಯಾನ್ ಮಾಡ್ಕೋ ಹೋಗು ಎಂದು ಸವಾಲು ಹಾಕಿದ್ದಾರೆ. ಈ ಘಟನೆ ದೆಹಲಿಯಲ್ಲಿ ನಡೆದಿದೆ.

'ಬಿಗ್ ಬಾಸ್ ಸೀಸನ್ 13'ನೇ ಕಾರ್ಯಕ್ರಮ ನಿನ್ನೆ (ಸಪ್ಟೆಂಬರ್ 23) ಮುಂಬೈನ ಡಿ ಎನ್ ನಗರದ ಮೆಟ್ರೋ ನಿಲ್ದಾಣದಲ್ಲಿ ನಡೆಯುತ್ತಿತ್ತು. ನಿಲ್ದಾಣದಲ್ಲಿಯೇ ಕಾರ್ಯಕ್ರಮದ ವೇದಿಕೆ ಹಾಕಲಾಗಿತ್ತು. ಮೊದಲು ಕ್ಯಾಮರಾಗಳಿಗೆ ಪೋಸ್ ನೀಡಿದ ಸಲ್ಮಾನ್ ಸಾಕಷ್ಟು ಫೋಟೋಗಳನ್ನು ನೀಡಿದರು. ನಂತರ ವೇದಿಕೆ ಏರುವಾಗ ಒಬ್ಬ ಫೋಟೋಗ್ರಾಫ್ ಸಲ್ಮಾನ್ ಗೆ ಅಡ್ಡ ನಿಂತಿದ್ದ.

ಫೋಟೋ ತೆಗೆಯುವ ಉದ್ದೇಶದಿಂದ ವೇದಿಕೆಯ ದಾರಿಯಲ್ಲಿ ಅಡ್ಡದಾಗಿ ಫೋಟೋಗ್ರಾಫ್ ನಿಂತಿದ್ದ. ಈಗಾಗಲೇ ಫೋಟೋಗಳನ್ನು ನೀಡಿದ್ದ ಸಲ್ಮಾನ್, ಮತ್ತೆ ಅಡ್ಡ ನಿಂತುಕೊಂಡ ಫೋಟೋಗ್ರಾಫ್ ನೋಡಿ ತಲೆ ಬಿಸಿ ಮಾಡಿಕೊಂಡರು. ಫೋಟೋಗ್ರಾಫ್ ಅನ್ನು ತರಾಟೆಗೆ ತೆಗೆದುಕೊಂಡರು.

Salman Khan Angry On Photographer In Bigg Boss 13 Launch

ಇಷ್ಟಕ್ಕೆ ನಿಲ್ಲದ ಕೋಪ ಕೆಲಕಾಲ ಹಾಗೆಯೇ ಮುಂದುವರೆಯಿತು. ''ಒಂದು ಉಪಾಯ ಹೇಳುತ್ತಾನೆ. ನಿನಗೆ ನನ್ನಿಂದ ಸಮಸ್ಯೆ ಆದ್ರೆ, ನನ್ನನ್ನು ಬ್ಯಾನ್ ಮಾಡ್ಕೋ ಹೋಗು'' ಎಂದು ದಬಾಂಗ್ ಸ್ಟಾರ್ ಸವಾಲು ಹಾಕಿದ್ದಾರೆ.

ಸಲ್ಮಾನ್ ಖಾನ್ ಮತ್ತು ಫೋಟೋಗ್ರಾಫ್ ನಡುವಿನ ಜಗಳದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

'ದಬಾಂಗ್ 3' ಚಿತ್ರದಲ್ಲಿ ಸದ್ಯ, ಸಲ್ಮಾನ್ ಖಾನ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟ ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Bolllywood actor Salman Khan angry on photographer in 'Bigg Boss 13' launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X