For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್ ಸೀಸನ್ 14': ಸಲ್ಮಾನ್ ಖಾನ್ ಸಂಭಾವನೆ ಇಷ್ಟೊಂದಾ?

  |

  'ಬಿಗ್ ಬಾಸ್' ಕಿರುತೆರೆ ಲೋಕದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಬಿಗ್ ಬಾಸ್ ಈಗಾಗಲೇ ಪ್ರಾರಂಭವಾಗಬೇಕಿತ್ತು. ಆದರೆ ಕೊರೊನಾ ಪರಿಣಾಮದಿಂದ ಬಿಗ್ ಬಾಸ್ ಸೀಸನ್-14 ತಡವಾಗಿ ಶುರುವಾಗುತ್ತಿದೆ. ಈಗಾಗಲೇ 13 ಸೀಸನ್ ಗಳನ್ನು ಯಶಸ್ವಿಯಾಗಿ ಮುಗಿಸಿರುವ ಹಿಂದಿ ಬಿಗ್ ಬಾಸ್, ಇದೀಗ 14ನೇ ಸೀಸನ್ ಗೆ ಭರ್ಜರಿ ತಯಾರಿ ನಡೆಸುತ್ತಿದೆ.

  ಇನ್ನೇನು ಬಿಗ್ ಬಾಸ್-14ಗೆ ಕ್ಷಣಗಣನೆ ಆರಂಭವಾಗಿದೆ. ಅಕ್ಟೋಬರ್ ಮಧ್ಯದಲ್ಲಿ ಈ ರಿಯಾಲಿಟಿ ಪ್ರಾರಂಭವಾಗುವ ನಿರೀಕ್ಷೆ ಇದೆ. ಸಲ್ಮಾನ್ ಖಾನ್ ಬಿಗ್ ಬಾಸ್ 14ಗೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಪ್ರೋಮೊಗಳು ಪ್ರಸಾರವಾಗುತ್ತಿವೆ. ಈ ಬಾರಿಯ ಬಿಗ್ ಬಾಸ್ ನಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ಕುತೂಹಲ ಕಿರುತೆರೆ ಪ್ರೇಕ್ಷಕರಲ್ಲಿ ಮನೆ ಮಾಡಿದೆ. ಇದರ ಜೊತೆಗೆ ಸಲ್ಮಾನ್ ಸಂಭಾವನೆ ಕೂಡ ಚರ್ಚೆಯಾಗುತ್ತಿದೆ. ಮುಂದೆ ಓದಿ..

  ಕೊರೊನಾ ನಡುವೆಯೂ ಬಿಗ್ ಬಾಸ್ ನಿರೀಕ್ಷಿಸುತ್ತಿದ್ದವರಿಗೆ ನಿರಾಸೆ!

  ಸಲ್ಮಾನ್ ಖಾನ್ ಸಂಭಾವನೆ ಎಷ್ಟು?

  ಸಲ್ಮಾನ್ ಖಾನ್ ಸಂಭಾವನೆ ಎಷ್ಟು?

  ಸಲ್ಮಾನ್ ಖಾನ್ ಸಂಭಾವನೆ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಸೀಸನ್ ನಲ್ಲಿ ಸಲ್ಮಾನ್ ಖಾನ್ ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವುದು ಅನೇಕರ ಕುತೂಹಲ. ಯಾಕಂದ್ರೆ ಬಿಗ್ ಬಾಸ್ ನಡೆಸಿಕೊಡಲು ಸಲ್ಮಾನ್ ಖಾನ್ ಭರ್ಜರಿ ಮೊತ್ತ ಪಡೆಯುತ್ತಾರೆ ಎನ್ನುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಹಾಗಾಗಿ ಈ ಸೀಸನ್ ಗೆ ಸಲ್ಲು ಪಡೆಯುತ್ತಿರುವ ಸಂಭಾವನೆ ಮೇಲೆ ಕುತೂಹಲ ಹೆಚ್ಚಾಗಿದೆ.

  ಒಂದು ಸಂಚಿಕೆಗೆ 10.25 ಕೋಟಿ

  ಒಂದು ಸಂಚಿಕೆಗೆ 10.25 ಕೋಟಿ

  ಈ ಸೀಸನ್ ಗೆ ಸಲ್ಮಾನ್ ಖಾನ್ ಭರ್ತಿ 250 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಬಾಲಿವುಡ್ ಮೂಲಗಳು ತಿಳಿಸಿವೆ. ವಾರಾಂತ್ಯದ ಎರಡು ಸಂಚಿಕೆಯನ್ನು ವಾರದ ಒಂದು ದಿನ ಚಿತ್ರೀಕರಣ ಮಾಡುತ್ತಾರಂತೆ. 12 ವಾರಗಳ ಕಾಲ ಹೀಗೆ ಶೂಟಿಂಗ್ ನಡೆಯುತ್ತೆ. ಒಂದು ದಿನದ ಶೂಟಿಂಗ್ ಗೆ 20.50 ಕೋಟಿ ಪಡೆಯುತ್ತಾರೆ. ಅಂದರೆ ಪ್ರತಿ ಒಂದು ಸಂಚಿಕೆಗೆ ಸಲ್ಮಾನ್ 10.25 ಕೋಟಿ ಸಂಭಾವನೆ ಜೇಬಿಗಿಳಿಸಿಕೊಳ್ಳುತ್ತಾರೆ.

  ಬಿಗ್ ಬಾಸ್-13ಗೆ ಸಲ್ಮಾನ್ ಪಡೆದ ಸಂಭಾವನೆ

  ಬಿಗ್ ಬಾಸ್-13ಗೆ ಸಲ್ಮಾನ್ ಪಡೆದ ಸಂಭಾವನೆ

  ಕಳೆದ ವರ್ಷ ಅಂದರೆ ಬಿಗ್ ಬಾಸ್-13ಗೆ ಸಲ್ಮಾನ್ ಖಾನ್ ವಾರಕ್ಕೆ 12 ರಿಂದ 14 ಕೋಟಿ ಸಂಭಾವನೆ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ. ಇನ್ನು, ಈ ಬಾರಿಯ ಬಿಗ್ ಬಾಸ್, ಕಳೆದ ಬಾರಿಗಿಂತ ವಿಭಿನ್ನವಾಗಿರಲಿದೆಯಂತೆ. ಕೊರೊನಾ ವೈರಸ್ ಹಾವಳಿಯ ಪರಿಣಾಮ ಸಾಕಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡಿದ್ದಾರಂತೆ.

  ಸ್ಪರ್ಧಿಗಳಿಗೆ ಕ್ವಾರಂಟೈನ್ ಕಡ್ಡಾಯ

  ಸ್ಪರ್ಧಿಗಳಿಗೆ ಕ್ವಾರಂಟೈನ್ ಕಡ್ಡಾಯ

  ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಮೊದಲು ಸ್ಪರ್ಧಿಗಳು ಕ್ವಾರಂಟೈನ್ ಅವಧಿಯನ್ನು ಮುಗಿಸಬೇಕು. ಹೆಚ್ಚಿನ ವೈದ್ಯಕೀಯ ಪರೀಕ್ಷೆಗಳು ನಡೆಸಲಿದೆಯಂತೆ. ಈಗಾಗಲೇ ಎಲ್ಲಾ ಪ್ರಕ್ರಿಯೆಗಳು ಪ್ರಾರಂಭವಾಗಿದ್ದು ಮುಂಬೈನಲ್ಲಿ ಬಿಗ್ ಬಾಸ್ ಗಾಗಿ ಫಿಲ್ಮ್ ಸಿಟಿಯ ನಿರ್ಮಾಣ ನಡೆಯುತ್ತಿದೆ. ಅಕ್ಟೋಬರ್ ತಿಂಗಳ ಮಧ್ಯದಿಂದ ಬಿಗ್ ಬಾಸ್-14 ಪ್ರಾರಂಭವಾಗುವ ಸಾಧ್ಯತೆ ಇದೆ.

  English summary
  Bollywood Actor Salman Khan charges 250 crore for hosting Bigg Boss season 14. Bigg boss 14 will reportedly be aired mid-October on Colors TV.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X