twitter
    For Quick Alerts
    ALLOW NOTIFICATIONS  
    For Daily Alerts

    'ಬಿಗ್ ಬಾಸ್' ನಡೆಯುತ್ತೋ, ಇಲ್ಲವೋ? ಆಯೋಜಕರು ಹೇಳುವುದೇನು? ಇಲ್ಲಿದೆ ಸಂಪೂರ್ಣ ಮಾಹಿತಿ

    |

    ಭಾರತೀಯ ಕಿರುತೆರೆ ಲೋಕದಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿದ ರಿಯಾಲಿಟಿ ಶೋಗಳಲ್ಲಿ ಬಗ್ ಬಾಸ್ ಮೊದಲ ಸ್ಥಾನದಲ್ಲಿದೆ. ಹಿಂದಿ ಕಿರುತೆರೆಯಲ್ಲಿ ಬಿಗ್ ಬಾಸ್ ಪ್ರಾರಂಭವಾಗಿ 13 ವರ್ಷಗಳೆ ಕಳೆದಿವೆ. ಈ ಬಾರಿ 14ನೇ ಆವೃತ್ತಿಯ ಬಿಗ್ ಬಾಸ್ ನಡೆಯಬೇಕಿದೆ. ಕಳೆದ ಸೀಸನ್ ಬಿಗ್ ಬಾಸ್ ಮುಗಿಯುತ್ತಿದ್ದಂತೆ ಮುಂದಿನ ಆವೃತ್ತಿ ಹೇಗಿರಲಿದೆ, ಯಾರೆಲ್ಲ ಸ್ಪರ್ಧಿಗಳು ಬರಲಿದ್ದಾರೆ ಎನ್ನುವ ಕುತೂಹಲ ಕಿರುತೆರೆ ಪ್ರೇಕ್ಷಕರಲ್ಲಿ ಮನೆಮಾಡಿರುತ್ತೆ.

    Recommended Video

    ಪತಿ ನೆನಪಿನಲ್ಲಿ ಡಿ.ಪಿ ಬದಲಿಸಿದ ಮೇಘನಾ ರಾಜ್ | Meghana Raj | Chiranjeevi Sarja

    ಎಲ್ಲವೂ ಅಂದುಕೊಂಡಂತೆ ಆಗಿದ್ದಾರೆ ಈಗಾಗಲೆ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಬೇಕಿತ್ತು. ಸಾಮಾನ್ಯವಾಗಿ ಹಿಂದಿ ಬಿಗ್ ಬಾಸ್ ಅಕ್ಟೋಬರ್ ನಲ್ಲಿ ಪ್ರಾರಂಭವಾಗುತ್ತೆ. ಅಂದ್ಮೇಲೆ ಜುಲೈ ತಿಂಗಳಲ್ಲಿಯೆ ಸ್ಪರ್ಧಿಗಳ ಆಯ್ಕೆ ಪ್ರಾರಂಭವಾಗಬೇಕು. ಆದರೆ ಈ ಬಾರಿ ಕೊರೊನಾ ವಕ್ಕರಿಸಿದ ಪರಿಣಾಮ ಬಿಗ್ ಬಾಸ್ ನಡೆಯುತ್ತಾ ಇಲ್ಲವಾ ಎನ್ನುವ ಅನುಮಾನ ಮೂಡಿದೆ.

    'ಬಿಗ್ ಬಾಸ್' ಮೂಲಕ ಕಿರುತೆರೆಗೆ ಎಂಟ್ರಿ ಕೊಡ್ತಾರಾ ನಟಿ ಸಮಂತಾ?'ಬಿಗ್ ಬಾಸ್' ಮೂಲಕ ಕಿರುತೆರೆಗೆ ಎಂಟ್ರಿ ಕೊಡ್ತಾರಾ ನಟಿ ಸಮಂತಾ?

    ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದ ಮೇಲೆ ಕುತೂಹಲ ಹೆಚ್ಚಾಗಿದೆ. ಈ ಸಮಯದಲ್ಲ ಎಲ್ಲಾ ಸ್ಪರ್ಧಿಗಳನ್ನು ಒಂದೆ ಸೂರಿನಡಿ ಸೇರಿಸಿ ಬಿಗ್ ಬಾಸ್ ನಡೆಸುವುದು ಕಷ್ಟಕರವಾಗಿದೆ. ಹಾಗಾಗಿ ಆಯೋಜಕರು ಸಾಕಷ್ಟು ಪ್ಲಾನ್ ಮಾಡಿದ್ದಾರಂತೆ. ಮುಂದೆ ಓದಿ..

    1ತಿಂಗಳು ತಡವಾಗಿ ನಡೆಯಲಿದೆ ಬಿಗ್ ಬಾಸ್

    1ತಿಂಗಳು ತಡವಾಗಿ ನಡೆಯಲಿದೆ ಬಿಗ್ ಬಾಸ್

    ಮಾಮುಲಿಗಿಂತ ಈ ಬಾರಿ ಬಿಗ್ ಬಾಸ್ ಒಂದು ತಿಂಗಳು ತಡವಾಗಿ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಅಕ್ಟೋಬರ್ ಮೊದಲ ವಾರದಲ್ಲೇ ಬಿಗ್ ಬಾಸ್ ಆರಂಭವಾಗಬೇಕಿತ್ತು. ಆದರೆ ಈ ಬಾರಿ ಮುಂಚಿತವಾಗಿ ಪ್ರಾರಂಭವಾಗುವುದಿಲ್ಲ. ಈಗಾಗಲೆ ಬಿಗ್ ಬಾಸ್ 14 ಆವೃತ್ತಿಗೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆಯಂತೆ. ಸಲ್ಮಾನ್ ಖಾನ್ ಸಹ ಬಿಗ್ ಬಾಸ್ ನಡೆಸಿಕೊಡಲು ಸಜ್ಜಾಗಿದ್ದಾರಂತೆ.

    ಸುಶಾಂತ್ ಸಿಂಗ್ ಬಗ್ಗೆ ಸಲ್ಮಾನ್ ಖಾನ್ ಟ್ವೀಟ್: ಮಾಡಿದರೊಂದು ಮನವಿಸುಶಾಂತ್ ಸಿಂಗ್ ಬಗ್ಗೆ ಸಲ್ಮಾನ್ ಖಾನ್ ಟ್ವೀಟ್: ಮಾಡಿದರೊಂದು ಮನವಿ

    ಆನ್ ಲೈನ್ ಮೂಲಕ ಆಡಿಷನ್

    ಆನ್ ಲೈನ್ ಮೂಲಕ ಆಡಿಷನ್

    ಕೊರೊನಾ ಹಾವಳಿಯ ಪರಿಣಾಮ ಒಂದಿಷ್ಟು ಬದಲಾವಣೆಯೊಂದಿಗೆ ಬಿಗ್ ಬಾಸ್ ಸೀಸನ್ 14 ಪ್ರಾರಂಭವಾಗುತ್ತಿದೆ. ಸ್ಪರ್ಧಿಗಳ ಆಯ್ಕೆ ಈ ಬಾರಿ ಆನ್ ಲೈನ್ ಮೂಲಕವೆ ನಡೆಯಲಿದೆಯಂತೆ. ಈ ಬಾರಿ ಸೆಲೆಬ್ರಿಟಿಗಳು ಮತ್ತು ಸಾಮಾನ್ಯ ಜನರು ಸಹ ಬಿಗ್ ಬಾಸ್ ಮನೆಯಲ್ಲಿ ಇರಲಿದ್ದಾರಂತೆ. ಅಕ್ಟೋಬರ್ ಕೊನೆಯ ವಾರದಿಂದ ಬಿಗ್ ಬಾಸ್ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನು ಮಾಹಿತಿ ಲಭ್ಯವಾಗಿದೆ.

    13 ಮಂದಿ ಸೆಲೆಬ್ರಿಟಿಗಳು, 3 ಮಂದಿ ಸಾಮಾನ್ಯ ಜನರು

    13 ಮಂದಿ ಸೆಲೆಬ್ರಿಟಿಗಳು, 3 ಮಂದಿ ಸಾಮಾನ್ಯ ಜನರು

    ಆಡಿಷನ್ ನಲ್ಲಿ 30 ಜನರ ಶಾರ್ಟ್ ಲಿಸ್ಟ್ ಮಾಡಿ ಕೊನೆಗೆ 16 ಮಂದಿಯನ್ನು ಬಿಗ್ ಬಾಸ್ ಮನೆಯೊಳಗೆ ಪ್ರವೇಶ ನೀಡಲಾಗುತ್ತೆ. ಇದರಲ್ಲಿ 13 ಮಂದಿ ಸೆಲೆಬ್ರಿಟಿಗಳು ಮತ್ತು 3 ಮಂದಿ ಸಾಮಾನ್ಯ ವ್ಯಕ್ತಿಗಳು ಇರಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.


    ಬಿಹಾರದಲ್ಲಿ ಕರಣ್, ಸಲ್ಮಾನ್, ಆಲಿಯಾ ಭಟ್ ಸಿನಿಮಾಗಳಿಗೆ ನಿಷೇಧ?

    ಸ್ಪರ್ಧಿಗಳಿಗೆ ಕೊರೊನಾ ಪರೀಕ್ಷೆ ನಡೆಸಲಾಗುತ್ತೆ

    ಸ್ಪರ್ಧಿಗಳಿಗೆ ಕೊರೊನಾ ಪರೀಕ್ಷೆ ನಡೆಸಲಾಗುತ್ತೆ

    ಮುನ್ನೆಚ್ಚರಿಕೆ ಕ್ರಮಗಳ ಜೊತೆ ಈ ಬಾರಿಯ ಬಿಗ್ ಬಾಸ್ ಪ್ರಾರಂಭವಾಗಲಿದೆ. ಆಯ್ಕೆಯಾದ ಸ್ಪರ್ಧಿಗಳನ್ನು ಮೊದಲು ಕೋವಿಗ್-19 ಪರೀಕ್ಷೆಗೆ ಒಳಪಡಿಸಲಾಗುವುದು. ಸಂಪೂರ್ಣ ಸೆಟ್ ಮತ್ತು ಬಿಗ್ ಬಾಸ್ ಮನೆಯನ್ನು ಸ್ವಚ್ಛಗೊಳಿಸಲಾಗುತ್ತೆ. ವಿಶೇಷ ಅಂದರೆ ಸಲ್ಮಾನ್ ಖಾನ್ ಬಾಂದ್ರಾ ಮನೆಯಿಂದನೆ ನೇರವಾಗಿ ಬಿಗ್ ಬಾಸ್ ನಡೆಯುವ ಚಿತ್ರೀಕರಣ ಸೆಟ್ ಗೆ ತೆರಳಲಿದ್ದಾರೆ.

    ಬದಲಾವಣೆಯ ಬಗ್ಗೆ ಪ್ಲಾನ್ ನಡೆಯುತ್ತಿದೆ

    ಬದಲಾವಣೆಯ ಬಗ್ಗೆ ಪ್ಲಾನ್ ನಡೆಯುತ್ತಿದೆ

    ಬಿಗ್ ಮನೆಯಲ್ಲಿ ಎಲ್ಲರೂ ಒಂದೇ ಅಡುಗೆ ಮನೆ ಬಳುಸುತ್ತಾರೆ, ಜೊತೆಗೆ ಒಂದೆ ಶೌಚಾಲಯ ಹೀಗೆ ಒಂದೆ ಸೂರಿನಲ್ಲಿ ಇರುವ ಸ್ಪರ್ಧಿಗಳ ನಡುವೆ ಅಂತರ ಕಾಯ್ದುಕೊಳ್ಳಲು ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬಹುದು ಎನ್ನುವ ಬಗ್ಗೆ ಯೋಚಿಸಲಾಗುತ್ತಿದೆಯಂತೆ. ಸಾಕಷ್ಟು ಸುರಕ್ಷತ ಕ್ರಮಗಳ ಜೊತೆಗೆ ಬಿಗ್ ಬಾಸ್ ನಡೆಸಲು ಮುಂದಾಗಿದ್ದಾರೆ ಆಯೋಜಕರು.

    English summary
    Salman Khan Hosted Bigg Boss -14 will delayed. It will Held with precautionary measures.
    Saturday, June 27, 2020, 17:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X