»   » ಕಿರುತೆರೆಗೆ ಮತ್ತೆ ಲಗ್ಗೆ ಹಾಕಿದ ಬಿಗ್ ಬಾಸ್ ಸಲ್ಮಾನ್

ಕಿರುತೆರೆಗೆ ಮತ್ತೆ ಲಗ್ಗೆ ಹಾಕಿದ ಬಿಗ್ ಬಾಸ್ ಸಲ್ಮಾನ್

Posted By:
Subscribe to Filmibeat Kannada
Salman Khan
ಬಿಗ್ ಬಾಸ್-6 ಸೀಸನ್ ಸದ್ಯದಲ್ಲೇ ಮತ್ತೆ ಪ್ರಾರಂಭವಾಗಲಿದೆ. ಅಷ್ಟೇ ಅಲ್ಲ, ಈ ಜನಪ್ರಿಯ ಕಾರ್ಯಕ್ರಮವನ್ನು, ಮೊದಲ 4 ಆವೃತ್ತಿಗಳನ್ನು ನಡೆಸಿಕೊಟ್ಟಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡಲಿದ್ದಾರೆ. ಸಲ್ಮಾನ್ ಅಭಿಮಾನಿಗಳಿಗಿದು ಸಂತೋಷದ ಸುದ್ದಿ.

ಬಿಗ್ ಬಾಸ್ 5 ನೇ ಆವೃತ್ತಿ ನಡೆಸಬೇಕಾದ ವೇಳೆಯಲ್ಲಿ ಸಲ್ಮಾನ್ ಖಾನ್ ಬಹಳಷ್ಟು ಬಿಜಿಯಿದ್ದ ಕಾರಣ ಅದನ್ನು ತಮ್ಮ ಗೆಳೆಯ ಸಂಜಯ್ ದತ್ ಅವರಿಗೆ ವಹಿಸಿದ್ದರು ಸಲ್ಮಾನ್. ಗೆಳೆಯನ ಕರೆಗೆ ಓಗೊಟ್ಟು ನಡೆಸಿಕೊಟ್ಟು ಸಂಜಯ್ ದತ್ ಹೊಸ ಅನುಭವ ಪಡೆದಿದ್ದರು.

ಸದ್ಯಕ್ಕೆ ಕತ್ರೀನಾ ಕೈಫ್ ಜೊತೆ ಥೈಲಾಂಡ್ ನಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಸಲ್ಮಾನ್, ಚಿತ್ರತಂಡದ ಸಲಹೆಯ ಮೇರೆಗೆ ಬಿಗ್ ಬಾಸ್-6 ಸೀಸನ್ನಿನಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲ, ಈ ಬಿಗ್ ಬಾಸ್ ರಿಯಾಲಿಟಿ ಶೋವನ್ನು ತಾವೋಬ್ಬರೇ ನಡೆಸಿಕೊಡಲಿದ್ದಾರೆ.

ಆದರೆ ಇದಕ್ಕೂ ಮೊದಲು- ಮಾಧುರಿ ದೀಕ್ಷಿತ, ಕರಣ್ ಜೋಹರ್ ಹಾಗೂ ರೆಮೋ ಫರ್ನಾಂಡಿಸ್ ಅವರು ಜಡ್ಜ್ ಗಳಾಗಿ ನಡೆಸಲಿರುವ 'ಟ್ಯಾಲೆಂಟ್ ಹಂಟ್' ಕಾರ್ಕ್ರಮ ಪ್ರಸಾರವಾಗಲಿದೆ. ತದನಂತರವಷ್ಟೇ ಈ ಬಿಗ್ ಬಾಸ್- 6 ಕಾರ್ಯಕ್ರಮವು ಪ್ರಸಾರ ಕಾಣಲಿದೆ. ಅದಕ್ಕೆ ಕೌಂಟ್ ಡೌನ್ ಪ್ರಾರಂಭವಾಗಿದೆ.

ಈ ಮೊದಲು ಬಿಗ್ ಬಾಸ್ 4 ಆವೃತ್ತಿಗಳನ್ನು ನಡೆಸಿಕೊಟ್ಟಿರುವ ಸಲ್ಮಾನ್ ಖಾನ್, ತಾವೊಬ್ಬರು ಯಶಸ್ವೀ ನಿರೂಪಕ ಎಂಬುದನ್ನು ಸಾಬೀತುಪಡಿಸಿದ್ದಾರೆ. ಸಲ್ಮಾನ್ ಅಭೀಮಾನಿಗಳಂತೂ ಬಿಗ್ ಬಾಸ್ ಶೋ ಮತ್ತೆ ಪ್ರಾರಂಭವಾಗಲಿ ಹಾಗೂ ಅದನ್ನು ಸ್ವತಃ ಸಲ್ಮಾನ್ ನಡೆಸಿಕೊಡಲಿ ಎಂದೇ ಹರಕೆ ಹೊತ್ತಿದ್ದರಂತೆ. ಅದೀಗ ಈಡೇರಿದಂತಾಗಿದೆ. (ಏಜೆನ್ಸೀಸ್)

English summary
Last year because of his busy schedule, Salman Khan asked Sanjay Dutt to co-host the show. But this year, Salman Khan will host Bigg Boss alone.
Please Wait while comments are loading...