For Quick Alerts
    ALLOW NOTIFICATIONS  
    For Daily Alerts

    ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಜೊತೆ ಸಲ್ಮಾನ್ ಖಾನ್!

    |

    ಬಿಗ್ ಬಾಸ್ ಕನ್ನಡ ವೇದಿಕೆಯಲ್ಲಿ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಕಾಣಿಸಿಕೊಳ್ಳುತ್ತಾರಾ....ಇಂತಹದೊಂದು ಪ್ರಶ್ನೆ ಕನ್ನಡ ಸಿನಿಪ್ರಿಯರಲ್ಲಿ ಜೋರಾಗಿ ಸದ್ದು ಮಾಡುತ್ತಿತ್ತು. ಅಥವಾ ಹಿಂದಿ ಬಿಗ್ ಬಾಸ್ ಶೋನಲ್ಲಿ ಕನ್ನಡದ ಸುದೀಪ್ ಕಾಣಿಸಿಕೊಳ್ಳಬಹುದಾ ಎಂಬ ಕುತೂಹಲವೂ ಕಾಡುತ್ತಿದೆ.

    ಇದೀಗ, ಈ ಎರಡು ಸಾಧ್ಯತೆಗಳು ಒಂದೇ ಸಲ ಆಗಿವೆ. ಹೌದು, ಬಿಗ್ ಬಾಸ್ ವೇದಿಕೆಯಲ್ಲಿ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಕನ್ನಡ ನಟ ಸುದೀಪ್ ಸ್ಕ್ರೀನ್ ಶೇರ್ ಮಾಡಿದ್ದಾರೆ.

    ಸುದೀಪ್ ಮತ್ತು ಸಲ್ಮಾನ್ ಖಾನ್ 'ಈ ಒಂದು' ದೃಶ್ಯಕ್ಕಾಗಿ 25 ದಿನಗಳು ಹೊಡೆದಾಡಿದ್ದಾರೆ ಸುದೀಪ್ ಮತ್ತು ಸಲ್ಮಾನ್ ಖಾನ್ 'ಈ ಒಂದು' ದೃಶ್ಯಕ್ಕಾಗಿ 25 ದಿನಗಳು ಹೊಡೆದಾಡಿದ್ದಾರೆ

    ಈಗಾಗಲೇ ಪ್ರೋಮೋ ರಿಲೀಸ್ ಆಗಿದ್ದು, ಈ ವಾರದ ಎಪಿಸೋಡ್ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಏನಿದು ಬಿಗ್ ಬಾಸ್ ಕಥೆ?

    ದಬಾಂಗ್ ಚಿತ್ರಕ್ಕಾಗಿ ಒಂದಾದ ಬಿಗ್ ಬಾಸ್

    ದಬಾಂಗ್ ಚಿತ್ರಕ್ಕಾಗಿ ಒಂದಾದ ಬಿಗ್ ಬಾಸ್

    ಸಲ್ಮಾನ್ ಖಾನ್ ಮತ್ತು ಕಿಚ್ಚ ಸುದೀಪ್ ನಟಿಸಿರುವ ದಬಾಂಗ್ ಸಿನಿಮಾ ಇದೇ ಡಿಸೆಂಬರ್ 20 ರಂದು ತೆರೆಗೆ ಬರ್ತಿದೆ. ಈ ಚಿತ್ರದ ಪ್ರಚಾರದಲ್ಲಿ ಕಿಚ್ಚ ಸುದೀಪ್ ಕೂಡ ಭಾಗಿಯಾಗಿದ್ದು, ಇದೀಗ ಬಿಗ್ ಬಾಸ್ ವೇದಿಕೆಯಲ್ಲಿ ಇಬ್ಬರು ಒಂದಾಗಿದ್ದಾರೆ.

    'ದಬಾಂಗ್' ಚಿತ್ರದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟ ಸುದೀಪ್, ಎಷ್ಟು?'ದಬಾಂಗ್' ಚಿತ್ರದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟ ಸುದೀಪ್, ಎಷ್ಟು?

    ಬಿಗ್ ಬಾಸ್ ಜೊತೆ ಬಿಗ್ ಬಾಸ್

    ಬಿಗ್ ಬಾಸ್ ಜೊತೆ ಬಿಗ್ ಬಾಸ್

    ಹಿಂದಿ ಬಿಗ್ ಬಾಸ್ ಕಾರ್ಯಕ್ರಮ ಚಾಲ್ತಿಯಲ್ಲಿದ್ದು, ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದಾರೆ. ಈ ಕಡೆ ಸುದೀಪ್ ಕನ್ನಡ ಬಿಗ್ ಬಾಸ್ ಹೋಸ್ಟ್ ಮಾಡುತ್ತಿದ್ದಾರೆ. ಇದೀಗ, ಕನ್ನಡ ಬಿಗ್ ಬಾಸ್ ಶೋನಲ್ಲಿ ದಬಾಂಗ್ ಸಿನಿಮಾದ ಪ್ರಚಾರ ಮಾಡಲಾಗಿದ್ದು, ಸಲ್ಮಾನ್ ಖಾನ್ ಗೆಸ್ಟ್ ಆಗಿದ್ದಾರೆ.

    ಸುದೀಪ್ ಮಗಳನ್ನು ಕರೆದು ತಾನೇ ಫೋಟೋ ತೆಗೆದುಕೊಂಡ ಸೂಪರ್ ಸ್ಟಾರ್ಸುದೀಪ್ ಮಗಳನ್ನು ಕರೆದು ತಾನೇ ಫೋಟೋ ತೆಗೆದುಕೊಂಡ ಸೂಪರ್ ಸ್ಟಾರ್

    ವಿಡಿಯೋ ಮೂಲಕ ಭಾಗಿ

    ವಿಡಿಯೋ ಮೂಲಕ ಭಾಗಿ

    ಕನ್ನಡ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್, ಸೋನಾಕ್ಷಿ ಸಿನ್ಹಾ, ಪ್ರಭುದೇವ ವಿಡಿಯೋ ಕಾನ್ಫರೆನ್ಸ ಮೂಲಕ ಅತಿಥಿಯಾಗಿ ಮಾತನಾಡಿದ್ದಾರೆ. ಈ ವಾರ ಈ ಎಪಿಸೋಡ್ ಪ್ರಸಾರವಾಗಲಿದ್ದು, ದಬಾಂಗ್ ಚಿತ್ರದ ಬಗ್ಗೆ ಸಲ್ಲು ಕನ್ನಡ ಪ್ರೇಕ್ಷಕರ ಕುರಿತು ಮಾತನಾಡಿದ್ದಾರೆ.

    ದಬಾಂಗ್ ಚಿತ್ರದಲ್ಲಿ ಸುದೀಪ್

    ದಬಾಂಗ್ ಚಿತ್ರದಲ್ಲಿ ಸುದೀಪ್

    ಸಲ್ಮಾನ್ ಖಾನ್ ನಟಿಸಿರುವ ದಬಾಂಗ್ 3 ಚಿತ್ರದಲ್ಲಿ ಕನ್ನಡ ನಟ ಕಿಚ್ಚ ಸುದೀಪ್ ಖಳನಾಯಕನಾಗಿ ನಟಿಸಿದ್ದಾರೆ. ಪ್ರಭುದೇವ ನಿರ್ದೇಶನ ಮಾಡಿದ್ದು, ಸಲ್ಮಾನ್ ಖಾನ್, ಅರ್ಬಾಜ್ ಖಾನ್ ನಿರ್ಮಿಸಿದ್ದಾರೆ. ಈ ಹಿಂದೆ ದಬಾಂಗ್ 1 ಮತ್ತು ದಬಾಂಗ್ 2 ತೆರೆಕಂಡಿತ್ತು.

    English summary
    Bollywood actor Salman Khan participate in Bigg Boss kannada With kannada actor Sudeep.?

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X