ಬಿಗ್ ಬಾಸ್ ಶೋನಿಂದ ಹೊರಬಂದ ಸಲ್ಮಾನ್ ಖಾನ್, ಹೊಸ ನಿರೂಪಕಿ ಎಂಟ್ರಿ
Recommended Video
ಬಿಗ್ ಬಾಸ್ ಕಾರ್ಯಕ್ರಮದಿಂದ ಬಾಲಿವುಡ್ ನಟ ಸಲ್ಮಾನ್ ಖಾನ್ ಹೊರಬಂದಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಶೋನಿಂದ ಹಿಂದೆ ಸರಿದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಸಲ್ಮಾನ್ ಖಾನ್ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದು, ಬಿಗ್ ಬಾಸ್ ಶೋನಿಂದ ವಿಶ್ರಾಂತಿ ಪಡೆದುಕೊಳ್ಳಿ ಎಂದು ವೈದ್ಯರು ಸೂಚಿಸಿದ್ದಾರಂತೆ. ಹೀಗಾಗಿ, ಸಲ್ಲು ಭಾಯ್ ಶೋ ನಿರೂಪಣೆ ಮಾಡದಿರಲು ನಿರ್ಧರಿಸಿದ್ದಾರೆ.
ಸಲ್ಮಾನ್ ಖಾನ್ ಜಾಗಕ್ಕೆ ಈಗ ನಿರ್ದೇಶಕಿ, ನಿರ್ಮಾಪಕಿ ಫರ್ಹಾ ಖಾನ್ ಎಂಟ್ರಿಯಾಗಿದ್ದು, ಮುಂದಿನ ವಾರಗಳಲ್ಲಿ ಬಿಗ್ ಬಾಸ್ ನಿರೂಪಣೆ ಮಾಡಲಿದ್ದಾರೆ ಎಂಬ ವಿಷಯ ಬಹಿರಂಗವಾಗಿದೆ.

ಸದ್ಯ, ಬಿಗ್ ಬಾಸ್ ಹಿಂದಿ ಕಾರ್ಯಕ್ರಮ 13ನೇ ಆವೃತ್ತಿ ನಡೆಯುತ್ತಿದ್ದು, ಜನವರಿ ತಿಂಗಳಿನಿಂದ ಫರ್ಹಾ ಖಾನ್ ಹೋಸ್ಟ್ ಮಾಡಲಿದ್ದಾರೆ. ನಿಯಮದ ಪ್ರಕಾರ 100 ದಿನಗಳು ಈ ಶೋ ನಡೆಯಬೇಕಿತ್ತು. ಆದರೆ, ಅಂತಿಮ ಕ್ಷಣದಲ್ಲಿ ನಿರ್ಧಾರ ಬದಲಿಸಿದ್ದು, ಹೆಚ್ಚಿನ ಎರಡು ವಾರ ವಿಸ್ತರಿಸಲಾಗಿತ್ತು.
ಇದುವರೆಗೂ ಹಿಂದಿ ಬಿಗ್ ಬಾಸ್ 12 ಆವೃತ್ತಿ ನಡೆದಿದ್ದು, ನಾಲ್ಕೈದು ನಟರು ನಿರೂಪಣೆ ಮಾಡಿದ್ದಾರೆ. ಮೊದಲ ಆವೃತ್ತಿಯನ್ನು ಅರ್ಷಾದ್ ವಾರ್ಸಿ ಹೋಸ್ಟ್ ಮಾಡಿದ್ದರು. ಎರಡನೇ ಆವೃತ್ತಿ ಶಿಲ್ಪಾ ಶೆಟ್ಟಿ ನಿರೂಪಣೆ ಮಾಡಿದ್ದರು. ಮೂರನೇ ಆವೃತ್ತಿ ಅಮಿತಾಭ್ ಬಚ್ಚನ್ ನಿರೂಪಣೆ ಮಾಡಿದ್ದರು. ನಂತರ ಸಲ್ಮಾನ್ ಖಾನ್ ಸತತವಾಗಿ ಹೋಸ್ಟ್ ಮಾಡುತ್ತಾ ಬಂದಿದ್ದಾರೆ. ಈ ಹಿಂದೆ ಫರ್ಹಾ ಖಾನ್ ಅವರು ಬಿಗ್ ಬಾಸ್ ಹೋಸ್ಟ್ ಮಾಡಿದ್ದಾರೆ.
ಮತ್ತೊಂದೆಡೆ ಸಲ್ಮಾನ್ ಖಾನ್ ನಟನೆಯ ದಬಾಂಗ್ 3 ಸಿನಿಮಾ ಡಿಸೆಂಬರ್ 20 ರಂದು ಬಿಡುಗಡೆಯಾಗಿದ್ದು, ಈ ಚಿತ್ರದ ಪ್ರಚಾರದಲ್ಲಿ ಸಲ್ಲು ಬ್ಯುಸಿಯಾಗಿದ್ದಾರೆ. ಪ್ರಭುದೇವ ನಿರ್ದೇಶನದ ಈ ಚಿತ್ರದಲ್ಲಿ ಸುದೀಪ್, ಸೋನಾಕ್ಷಿ ಸಿನ್ಹಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











